Don't Miss!
- Sports
ಕ್ರಿಸ್ ಗೇಲ್ಗೆ ಭಾರತದ ಮೇಲಿರುವ ಪ್ರೀತಿಗೆ ಉದಾಹರಣೆ ಕೊಟ್ಟ ಶಮಿ
- Automobiles
ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು
- News
Explainer: ಕೊರೊನಾವೈರಸ್ ಅಲೆಗಳ ಆಯುಷ್ಯದ ಮೇಲೆ ಭಾರತದ ಭವಿಷ್ಯ!?
- Finance
Alert: ವಾಹನಗಳ ಖರೀದಿ ಮತ್ತಷ್ಟು ದುಬಾರಿ, 2ನೇ ತ್ರೈಮಾಸಿಕದಲ್ಲಿ ಬೆಲೆ ಹೆಚ್ಚಳ ಸಾಧ್ಯತೆ
- Education
Bangalore University Exams 2021: ಸ್ನಾತಕ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಗಳು ಮುಂದೂಡಿಕೆ
- Lifestyle
ರಾಮನವಮಿ 2021: ರಾಮನ ಕುರಿತಾದ ಅಚ್ಚರಿಯ ಸಂಗತಿಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾಜಿ ಮುಖ್ಯಮಂತ್ರಿಯ ಮೊಮ್ಮಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಮೆಹ್ರೀನ್
ದಕ್ಷಿಣ ಭಾರತದ ಖ್ಯಾತ ಯುವ ನಟಿ ಮೆಹ್ರೀನ್ ಪಿರ್ಝಾದಾ ಮತ್ತು ಭವ್ಯ ಬಿಷ್ಣೋಯಿ ಅವರ ನಿಶ್ಚಿತಾರ್ಥ ಶುಕ್ರವಾರ (ಮಾರ್ಚ್ 12) ಜೈಪುರದಲ್ಲಿ ನೆರವೇರಿದೆ. ಎರಡು ಕುಟುಂಬದ ಈ ಖಾಸಗಿ ಕಾರ್ಯಕ್ರಮದಲ್ಲಿ ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗಿದ್ದಾರೆ.
ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಮೆಹ್ರೀನ್ ಮತ್ತು ಭವ್ಯ ಬಿಷ್ಣೋಯಿ ಪರಸ್ಪರ ಉಂಗುರು ಬದಲಿಸಿಕೊಂಡಿದ್ದಾರೆ. ತದ ನಂತರ ಸಂಪ್ರದಾಯದಂತೆ ಕೆಲವು ಶಾಸ್ತ್ರೋಕ್ತ ಕಾರ್ಯಕ್ರಮಗಳು ನಡೆದಿದೆ.
ರಾಜಕಾರಣಿ ಜೊತೆ ಸಪ್ತಪದಿ ತುಳಿಯಲಿದ್ದಾರೆ ಯುವ ನಟಿ ಮೆಹ್ರೀನ್
ಮೆಹ್ರೀನ್ ಅವರ ಸಹೋದರ ಗುರ್ಫತೇಹ್ ಪಿರ್ಜಾದಾ ತಮ್ಮ ಇನ್ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೆಹ್ರೀನ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
2020ನೇ ವರ್ಷದ ಏಪ್ರಿಲ್ ತಿಂಗಳಲ್ಲಿ ಮೆಹ್ರೀನ್ ಮತ್ತು ಬಿಷ್ಣೋಯಿ ಅವರ ಮದುವೆ ವಿಚಾರ ಮಾತುಕತೆ ನಡೆದಿತ್ತು. ಅದೇ ವರ್ಷ ವಿವಾಹ ಜರುಗಿಸಲು ಯೋಜಿಸಿದ್ದರು. ಆದರೆ, ಕೊರೊನಾ ವೈರಸ್ ಕಾರಣದಿಂದ ಮದುವೆ ದಿನಾಂಕವನ್ನು ಮುಂದೂಡಿದ್ದರು.
ಈಗ ನಿಶ್ಚಿತಾರ್ಥ ಮುಗಿದಿದೆ. ಸದ್ಯಕ್ಕೆ ಮದುವೆ ದಿನಾಂಕ ಖಚಿತವಾಗಿಲ್ಲ. ಈ ವರ್ಷದಲ್ಲೇ ಮೆಹ್ರೀನ್ ಮತ್ತು ಬಿಷ್ಣೋಯಿ ದಾಂಪತ್ಯ ಪ್ರವೇಶಿಸಲಿದ್ದಾರೆ ಎಂದು ವರದಿಯಾಗಿದೆ.
ಅಂದ್ಹಾಗೆ, ಭವ್ಯ ಬಿಷ್ಣೋಯಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ. ಕಾಂಗ್ರೆಸ್ ಆಡಳಿತದಲ್ಲಿ ಮೂರು ಬಾರಿ ಭಜನ್ ಲಾಲ್ ಹರ್ಯಾಣ ಮುಖ್ಯಮಂತ್ರಿಯಾಗಿದ್ದರು. ಬಿಷ್ಣೋಯಿ ಅವರ ತಂದೆ ಕುಲ್‌ದೀಪ್ ಬಿಷ್ಣೋಯಿ ಸಹ ಶಾಸಕರಾಗಿದ್ದರು.
ಮೆಹ್ರೀನ್ ಸಿನಿಮಾ ವಿಚಾರಕ್ಕೆ ಬಂದ್ರೆ ವೆಂಕಟೇಶ್ ಮತ್ತು ವರುಣ್ ತೇಜ ನಟಿಸುತ್ತಿರುವ 'ಎಫ್ 3' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
2016ರಲ್ಲಿ ಮೆಹ್ರೀನ್ ತೆಲುಗು ಇಂಡಸ್ಟ್ರಿ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ತಮಿಳು ಹಾಗೂ ತೆಲುಗಿನಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡ್ತಿದ್ದಾರೆ. ಮಹಾನುಭಾವಡು, ರಾಜ ದಿ ಗ್ರೇಟ್, ನೋಟಾ, ಕವಚಂ, ಎಫ್ 2, ಪಟಾಸ್, ಅಶ್ವತ್ಥಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.