Don't Miss!
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Automobiles
ಬಹುನೀರಿಕ್ಷಿತ 'ಅಲ್ಟ್ರಾವೈಲೆಟ್ F77' ಬೈಕ್ ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ನಾಗಚೈತನ್ಯ ಭವಿಷ್ಯ ಹೇಗಿದೆ? 'ಬಂಗಾರ್‌ರಾಜು' ಸಿನಿಮಾ ಕಲೆಕ್ಷನ್ ಎಷ್ಟು?
'ಬಂಗಾರ್‌ರಾಜು' ಆಂಧ್ರದಲ್ಲಿ ನೂರೆಂಟು ಸಮಸ್ಯೆಗಳ ಮಧ್ಯೆನೂ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ. ಟಿಕೆಟ್ ದರ ಇಳಿಕೆ, ಕೊರೊನಾ ಕಾಟ. ಇವೆಲ್ಲವುಗಳ ಮಧ್ಯೆನೂ ಅಪ್ಪ -ಮಗ ನಟಿಸಿದ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಅಂತಲೇ ವಿಶೇಷವಾಗಿ ಬಿಡುಗಡೆಯಾಗಿದ್ದ ಚಿತ್ರ ಎರಡು ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಹೊಸ ಭರವಸೆ ಮೂಡಿಸಿದೆ.
Recommended Video
ಈ ಸಿನಿಮಾ ನಾಗಚೈತನ್ಯ ಭವಿಷ್ಯಕ್ಕೆ ಬಹಳ ಪ್ರಮುಖವಾದ ಸಿನಿಮಾ. ಲವ್ ಸ್ಟೋರಿಯಂತಹ ಹಿಟ್ ಸಿನಿಮಾ ನೀಡಿದ ನಟನಿಗೆ ಇನ್ನೊಂದು ಸೂಪರ್ ಹಿಟ್ ಚಿತ್ರದ ಅವಶ್ಯಕತೆಯಿತ್ತು. ಅದರಲ್ಲೂ ವಿಚ್ಛೇದನದ ಬಳಿಕ ನಾಗಚೈತನ್ಯ ಸಿನಿಮಾ ಗೆಲ್ಲಲೇ ಬೇಕಾದ ಅನಿವಾರ್ಯತೆಯಿತ್ತು. ಹೀಗಾಗಿ ಎಲ್ಲರ ಕಣ್ಣು ಬಂಗಾರ್‌ರಾಜು ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಇತ್ತು. ಇಂತಹ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಿದ್ದಾರೆ. ಸಿನಿಮಾ ಸೋಲುವುದು ಗ್ಯಾರಂಟಿ ಅಂತಲೇ ಮಾತಾಡಿಕೊಂಡಿದ್ದರು. ಆದರೆ, ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿದೆ.
ಸಂಕ್ರಾಂತಿ
ವಿನ್ನರ್
ಆಗಿ
ಹೊರಹೊಮ್ಮಿದ
ಬಂಗಾರರಾಜು

ಡಿವೋರ್ಸ್ ಬಳಿಕ ನಾಗಚೈತನ್ಯ ಮೊದಲ ಸಿನಿಮಾ
ನಾಗಚೈತನ್ಯ ಹಾಗೂ ಸಮಂತಾ ಕಳೆದ ವರ್ಷ ಅಕ್ಟೋಬರ್ ಮೊದಲ ವಾರದಲ್ಲಿ ಬೇರೆಯಾಗುತ್ತಿರುವುದಾಗಿ ಘೋಷಸಿದ್ದರು. ಅಲ್ಲಿಂದ ಸುಮಾರು ಮೂರೂವರೆ ತಿಂಗಳ ಬಳಿಕ ಸಿನಿಮಾವೊಂದು ತೆರೆಕಂಡಿದೆ. ಅದುವೇ 'ಬಂಗಾರ್‌ರಾಜು'. ನಾಗಚೈತನ್ಯ ಅಪ್ಪ ನಾಗಾರ್ಜುನ ಜೊತೆ ನಟಿಸಿದ ಈ ಸಿನಿಮಾ ಬಿಡುಗಡೆಗೂ ಮುನ್ನ ಹೆಚ್ಚು ಸದ್ದು ಮಾಡಿರಲಿಲ್ಲ. ಅದ್ಯಾವಾಗ, RRR, ರಾಧೆಶ್ಯಾಮ್ ಸಿನಿಮಾಗಳು ಹಿಂದೆ ಸರಿದವೋ ಆಗಲೇ 'ಬಂಗಾರ್‌ರಾಜು' ಥಿಯೇಟರ್‌ಗೆ ಎಂಟ್ರಿ ಕೊಡುವುದಕ್ಕೆ ಮುಂದಾಗಿತ್ತು. ಅಂದ ಹಾಗೆ ಈ ಚಿತ್ರ ನಾಗಚೈತನ್ಯ ವಿಚ್ಛೇದನದ ಬಳಿಕ ತೆರೆಕಾಣುತ್ತಿರುವ ಚಿತ್ರ. ಹೀಗಾಗಿ ಸಿನಿಪ್ರಿಯರ ಪ್ರತಿಕ್ರಿಯೆ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು.

2 ದಿನದಲ್ಲಿ 36 ಕೋಟಿ ಗಳಿಸಿದ 'ಬಂಗಾರ್‌ರಾಜು'
ನಾಗಚೈತನ್ಯ ಹಾಗೂ ನಾಗಾರ್ಜುನಾ ಇಬ್ಬರು 'ಬಂಗಾರ್‌ರಾಜು' ಸಿನಿಮಾದ ಹೈಲೈಟ್. ಅಪ್ಪ-ಮಗನ ಜುಗಲ್‌ಬಂದಿಯನ್ನು ಪ್ರೇಕ್ಷಕರು ಇಷ್ಟ ಪಟ್ಟಿದ್ದಾರೆ. ಚಿತ್ರತಂಡವೇ ಬಿಡುಗಡೆ ಮಾಡಿರುವ ಲೆಕ್ಕದ ಪ್ರಕಾರ, 'ಬಂಗಾರ್‌ರಾಜು' ಮೊದಲ ದಿನದ ಗಳಿಕೆ 17.5 ಕೋಟಿ ಗಳಿಕೆ ಕಂಡಿದೆ. ಎರಡನೇ ದಿನವೂ 18.5 ಕೋಟಿ ಗಳಿಸಿದ್ದು, ಒಟ್ಟು ಎರಡು ದಿನಗಳ ಗಳಿಕೆ 36 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಟಾಲಿವುಡ್ ಪ್ರಕಾರ ಈ ಚಿತ್ರ ಸಂಕ್ರಾಂತಿ ಬ್ಲಾಕ್‌ಬ್ಲಾಸ್ಟರ್.

ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ಬಂಗಾರ್‌ರಾಜು'
'ಬಂಗಾರ್‌ರಾಜು' ಬಾಕ್ಸಾಫೀಸ್‌ನಲ್ಲಿ ಇಷ್ಟೊಂದು ಹಣ ಗಳಿಸುತ್ತೆ ಎನ್ನುವ ಕಲ್ಪನೆ ಇರಲಿಲ್ಲ. ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ಫೀಮೇಲ್ ಆಡಿಯನ್ಸ್ ನಾಗಚೈತನ್ಯ ವಿರುದ್ಧ ಇದ್ದರು. ಇನ್ನೊಂದು ಕಡೆ ಚಿತ್ರಮಂದಿರದ ಟಿಕೆಟ್ ದರ ಕಡಿತಗೊಳಿಸಲಾಗಿತ್ತು. ಆದರೆ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೆಚ್ಚು ಶೋಗಳನ್ನು ಪ್ರದರ್ಶನ ಮಾಡಲು ಅನುಮತಿ ನೀಡಲಾಗಿತ್ತು. ಅಬ್ಬರ ಪ್ರಚಾರವಿಲ್ಲದೆ ಸಿನಿಮಾ ರಿಲೀಸ್ ಮಾಡಬೇಕಾಗಿತ್ತು. ಹೀಗಾಗಿ ಗಲ್ಲಾಪೆಟ್ಟಿಗೆಯಲ್ಲಿ ಪಲ್ಟಿ ಹೊಡೆಯುತ್ತೆ ಎನ್ನುವ ಮಾತು ಕೇಳಿಬಂದಿತ್ತು.

'ಲವ್ ಸ್ಟೋರಿ' ಬಾಕ್ಸಾಫೀಸ್ ಸಕ್ಸಸ್
ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನದ ಘೋಷಣೆ ಮಾಡುವ ಕೆಲವೇ ದಿನಗಳ ಮುನ್ನ 'ಲವ್‌ಸ್ಟೋರಿ' ರಿಲೀಸ್ ಆಗಿತ್ತು. ನಾಗಚೈತನ್ಯ ಹಾಗೂ ಸಾಯಿಪಲ್ಲವಿ ಈ ಸಿನಿಮಾದಲ್ಲಿ ನಟಿಸಿದ್ದರು. ಸೆಪ್ಟೆಂಬರ್ 24, 2021ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. 30 ಕೋಟಿ ವೆಚ್ಚದ 'ಲವ್ ಸ್ಟೋರಿ' ಬಾಕ್ಸಾಫೀಸ್‌ನಲ್ಲಿ 128 ಕೋಟಿ ಕಲೆ ಹಾಕಿತ್ತು. ಈಗ 'ಬಂಗಾರ್‌ರಾಜು' ಅಪ್ಪ-ಮಗನ ಕಾಂಬಿನೇಷನ್ ಆಗಿರುವುದರಿಂದ ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತೆ ಎಂದು ನಂಬಲಾಗಿದೆ.