For Quick Alerts
  ALLOW NOTIFICATIONS  
  For Daily Alerts

  ಓಟಿಟಿ ಟಾಕ್‌ ಶೋಗೆ ನಂದಮೂರಿ ಬಾಲಕೃಷ್ಣ ಪಡೆದ ದುಬಾರಿ ಸಂಭಾವನೆ ಎಷ್ಟು?

  |

  ನಂದಮೂರಿ ಬಾಲಕೃಷ್ಣ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. 'ಅಖಂಡ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದಂತೆ ಬಾಲಯ್ಯಗೆ ಬೇಡಿಕೆ ಹೆಚ್ಚಾಗಿದೆ. ಹಾಗಂತ ಕೇವಲ ಸಿನಿಮಾಗಳಷ್ಟೇ ಅಲ್ಲ. ಓಟಿಟಿಯ ಟಾಕ್‌ ಶೋನಲ್ಲೂ ಸಕ್ಸಸ್ ಸಿಕ್ಕಿದೆ.

  ಬಾಲಕೃಷ್ಣ ಹಾಗೂ ನಿರ್ದೇಶಕ ಬೋಯಪಟಿ ಶ್ರೀನು ಇಬ್ಬರೂ ಸೋಲಿನ ಸುಳಿಗೆ ಸಿಲುಕಿ ಪರದಾಡುತ್ತಿದ್ದರು. ಇಬ್ಬರೂ 'ಅಖಂಡ' ಸಿನಿಮಾಗಾಗಿ ಒಂದಾಗಿದ್ದರು. ಈ ಸಿನಿಮಾ ಇಬ್ಬರಿಗೂ ಕೈ ಹಿಡಿದಿತ್ತು. ಇಲ್ಲಿಂದ ಬಾಲಕೃಷ್ಣ ಸೆಕೆಂಡ್ ಇನ್ನಿಂಗ್ಸ್ ಆರಂಭ ಆಗಿದೆ.

  ಬಾಲಕೃಷ್ಣ ಟಾಕ್‌ ಶೋಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು: ವಿರೋಧಿಗಳಿಗೆ ಟೆನ್ಷನ್!ಬಾಲಕೃಷ್ಣ ಟಾಕ್‌ ಶೋಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು: ವಿರೋಧಿಗಳಿಗೆ ಟೆನ್ಷನ್!

  ಬಾಕ್ಸಾಫೀಸ್‌ನಲ್ಲಿ 150 ಕೋಟಿ ರೂ. ಗಳಿಸಿದ ಬಳಿಕ ಓಟಿಟಿಗೂ ಎಂಟ್ರಿ ಕೊಟ್ಟಿದ್ದರು. ಆಹಾ ಓಟಿಟಿಯಲ್ಲಿ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ' ಅನ್ನೋ ಟಾಕ್ ಶೋ ಅನ್ನು ನಡೆಸಿಕೊಟ್ಟಿದ್ದರು. 'ಅನ್‌ಸ್ಟಾಬಲ್ ಸೀಸನ್ 1' ಸಕ್ಸಸ್‌ ಕಂಡಿತ್ತು. ಈಗ ಅದೇ ಯಶಸ್ಸಿನ ಬೆನ್ನಲ್ಲೇ ಎರಡನೇ ಸೀಸನ್ ಆರಂಭ ಆಗಿದೆ.

  'ಅನ್‌ಸ್ಟಾಬಲ್ ಸೀಸನ್ 2' ಶುರು

  'ಅನ್‌ಸ್ಟಾಬಲ್ ಸೀಸನ್ 2' ಶುರು

  ಟಾಲಿವುಡ್ 'ಲೆಜೆಂಡ್' ಬಾಲಕೃಷ್ಣನೇ ಬೇರೆ.. ಅವರ ಸ್ಟೈಲೇ ಬೇರೆ. ಇನ್ನು ಸಿನಿಮಾಗಳಲ್ಲಿ ಬಾಲಕೃಷ್ಣ ನಟನೆ ನೋಡಿದ್ದ ಪ್ರೇಕ್ಷಕರಿಗೆ ನಿರೂಪಣೆ ಶೈಲಿ ಕೂಡ ಇಷ್ಟ ಆಗಿತ್ತು. ಹೀಗಾಗಿ 'ಅನ್‌ಸ್ಟಾಪಬಲ್ ಸೀಸನ್ 2'ಗಾಗಿ ಎದುರು ನೋಡುತ್ತಿದ್ದಾರೆ. ಈಗಾಗಲೇ ಸೀಸನ್‌ 2 ಶೂಟಿಂಗ್ ಕೂಡ ಆರಂಭ ಆಗಿದೆ. ಆದರೆ, ಯಾವಾಗ ಪ್ರೀಮಿಯರ್ ಆಗುತ್ತೆ ಅನ್ನೋದು ಮಾತ್ರ ಇನ್ನೂ ಆಹಾ ಸಂಸ್ಥೆ ಪ್ರಕಟಣೆ ಮಾಡಿಲ್ಲ. ಆದರೆ, ಇದೇ ವೇಳೆ ಬಾಲಕೃಷ್ಣ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ.

  ಬಾಲಯ್ಯ ವಿರುದ್ಧ ಮಂಗಳಮುಖಿಯರಿಂದ ದೂರು? ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ?ಬಾಲಯ್ಯ ವಿರುದ್ಧ ಮಂಗಳಮುಖಿಯರಿಂದ ದೂರು? ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ?

  ಬಾಲಕೃಷ್ಣ ಪಡೆದ ಸಂಭಾವನೆ ಎಷ್ಟು?

  ಬಾಲಕೃಷ್ಣ ಪಡೆದ ಸಂಭಾವನೆ ಎಷ್ಟು?

  ಟಾಲಿವುಡ್ ಸ್ಟಾರ್ ನಟ ಬಾಲಕೃಷ್ಣ ಎರಡನೇ ಸೀಸನ್‌ಗೆ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಮೊದಲ ಸೀಸನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದರಿಂದ ಎರಡನೇ ಸೀಸನ್‌ ನೋಡೋಕೆ ಜನರು ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಬಾಲಕೃಷ್ಣ ಪಡೆದಿರೋ ಸಂಭಾವನೆ ಬಗ್ಗೆನೂ ಚರ್ಚೆಯಾಗುತ್ತಿದೆ. ಬಾಲಕೃಷ್ಣ ಈ ಟಾಕ್ ಶೋಗಾಗಿ ಸುಮಾರು 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಟಾಕ್ ಶೋ ಮೂಲಕ ಬಾಲಯ್ಯ ಪಡೆಯುತ್ತಿರೋ ದುಬಾರಿ ಸಂಭಾವನೆ ಇದು ಎನ್ನಲಾಗಿದೆ.

  ಶೋಗೆ ಚಂದ್ರಬಾಬು ನಾಯ್ಡು

  ಶೋಗೆ ಚಂದ್ರಬಾಬು ನಾಯ್ಡು

  ಈ ಬಾರಿ ಅನ್‌ಸ್ಟಾಪಬಲ್ ಶೋಗೆ ದಿಗ್ಗಜರು ಆಗಮಿಸುತ್ತಿದ್ದಾರೆ. ಈಗಾಗಲೇ ಊಹೆ ಮಾಡಿದ್ದಂತೆ ಆಂಧ್ರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದಾರೆ. ಈ ಶೋವನ್ನು ಈಗಾಗಲೇ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಚಂದ್ರಬಾಬು ನಾಯ್ಡು ಶೋಗೆ ಆಗಮಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವರ ಜೊತೆ ಟಾಲಿವುಡ್‌ನ ಹಲವು ಗಣ್ಯರು ಆಗಮಿಸಲಿದ್ದಾರೆ ಎನ್ನಲಾಗಿದೆ.

  ಚಿರಂಜೀವಿ-ವೆಂಕಟೇಶ್ ಬರ್ತಾರಾ?

  ಚಿರಂಜೀವಿ-ವೆಂಕಟೇಶ್ ಬರ್ತಾರಾ?

  ಇತ್ತೀಚೆಗೆ 'ಅನ್‌ಸ್ಟಾಪಬಲ್ ಸೀಸನ್ 2' ಪ್ರಿ-ರಿಲೀಸ್ ಕಾರ್ಯಕ್ರಮ ವಿಜಯವಾಡದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಶೋನಲ್ಲಿ ಬಾಲಕೃಷ್ಣ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಸೀಸನ್‌ 2ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ವೆಂಕಟೇಶ್ ಅತಿಥಿಗಳಾಗಿ ಬರುತ್ತಾರಾ? ಎಂದು ಪ್ರಶ್ನೆ ಮಾಡಲಾಗಿತ್ತು. ಆ ವೇಳೆ ಸ್ಟಾರ್‌ಗಳ ಉಪಸ್ಥಿತಿಯ ಮೇಲೆ ಎಲ್ಲವೂ ನಿರ್ಧಾರ ಆಗಿದೆ ಎಂದು ಉತ್ತರ ನೀಡಿದ್ದರು. ಇದರ ಜೊತೆನೇ ಇದು ಆಹಾ ಟೀಮ್ ಕೆಲಸ ಅಂತೂ ಹೇಳಿದ್ದರು. ಮೊದಲ ಎಪಿಸೋಡ್‌ನಲ್ಲಿ ಚಂದ್ರಬಾಬು ನಾಯ್ಡು ಬರುತ್ತಾರೆ ಎನ್ನಲಾಗಿದ್ದು, ದೀಪಾವಳಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.

  English summary
  Nandamuri Balakrishna Hosted Show Unstoppable Remuneration Is High, Know More.
  Friday, October 7, 2022, 9:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X