India
  For Quick Alerts
  ALLOW NOTIFICATIONS  
  For Daily Alerts

  ಪವಿತ್ರಾ ಲೋಕೇಶ್‌ ಅನ್ನು ವಿವಾಹವಾಗಲು ಪತ್ನಿಯ ವಿರುದ್ಧವೇ ನೀಚ ಕುತಂತ್ರ ಮಾಡಿದ ನರೇಶ್!

  |

  ತೆಲುಗು ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್‌ ಅವರ ವಿವಾಹ ಸುದ್ದಿ ದಿನೇ-ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ.

  ತೆಲುಗಿನ ನಟ ನರೇಶ್ ಈಗಾಗಲೇ ಮೂರು ವಿವಾಹವಾಗಿದ್ದು, ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇಧನ ನೀಡದೆಯೇ ಪವಿತ್ರಾ ಲೋಕೇಶ್‌ ಜೊತೆ ಕದ್ದು-ಮುಚ್ಚಿ ವಿವಾಹವಾಗಿದ್ದಾರೆ ಎನ್ನಲಾಗುತ್ತಿದೆ.

  ವಿವಾದಾತ್ಮಕ ತೆಲುಗು ನಟ ನರೇಶ್ 3ನೇ ಪತ್ನಿರಮ್ಯಾ ಯಾರು? ವಿವಾದಾತ್ಮಕ ತೆಲುಗು ನಟ ನರೇಶ್ 3ನೇ ಪತ್ನಿರಮ್ಯಾ ಯಾರು?

  ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಕನ್ನಡತಿಯಾಗಿದ್ದು, ಪವಿತ್ರಾ ಲೋಕೇಶ್ ಅನ್ನು ವಿವಾಹವಾಗಲು ಹಾಲಿ ಪತ್ನಿ ರಮ್ಯಾ ರಘುಪತಿ ವಿರುದ್ಧ ನೀಚ ಕುತಂತ್ರವನ್ನು ನರೇಶ್ ಮಾಡಿರುವ ಅಂಶ ಬೆಳಕಿಗೆ ಬಂದಿದ್ದು, ಸ್ವತಃ ರಮ್ಯಾ ರಘುಪತಿ ಪವರ್ ಟಿವಿಯ ಸಂದರ್ಶನದಲ್ಲಿ ನರೇಶ್‌ ವ್ಯಕ್ತಿತ್ವ, ಆತ ಮಾಡಿದ ಕುತಂತ್ರ ಆತನ ಹೆಣ್ಣು ಬಾಕತನದ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.

  ರಾಜಕಾರಣ ಹಾಗೂ ಉದ್ಯಮ ಕುಟುಂಬ ಹಿನ್ನೆಲೆ ಹೊಂದಿರುವ ಶಿಕ್ಷಾವಂತ ಮನಸ್ಥಿತಿಯ ಹೆಣ್ಣು ಮಗಳು ರಮ್ಯಾ ರಘುಪತಿ. ನರೇಶ್ ಹಾಗೂ ರಮ್ಯಾ ರಘುಪತಿ 2010 ರಲ್ಲಿ ವಿವಾಹವಾಗಿದ್ದು, ಇಬ್ಬರಿಗೂ 9 ವರ್ಷದ ಮಗನಿದ್ದಾನೆ. ಇಬ್ಬರಿಗೂ ಇನ್ನೂ ವಿಚ್ಛೇಧನ ಆಗಿಲ್ಲ ಆದರೆ ಹೆಣ್ಣುಬಾಕ ಮನಸ್ಥಿತಿಯ ನರೇಶ್, ನಟಿ ಪವಿತ್ರಾ ಲೋಕೇಶ್ ಅನ್ನು ವಿವಾಹವಾಗಲು ಪತ್ನಿ ರಮ್ಯಾ ರಘುಪತಿ ವಿರುದ್ಧವೇ ತಂತ್ರವೊಂದನ್ನು ರೂಪಿಸಿ ಆಕೆಯನ್ನು ಅಸಹಾಯಕಗೊಳಿಸುವ ತಂತ್ರ ರೂಪಿಸಿದ್ದ. ಆ ಬಗ್ಗೆ ರಮ್ಯಾ ರಘುಪತಿ ಮಾತನಾಡಿದ್ದಾರೆ.

  ನರೇಶ್ ಕುಮ್ಮಕ್ಕಿನಿಂದ ರಮ್ಯಾ ಮೇಲೆ ಸುಳ್ಳು ಆರೋಪ

  ನರೇಶ್ ಕುಮ್ಮಕ್ಕಿನಿಂದ ರಮ್ಯಾ ಮೇಲೆ ಸುಳ್ಳು ಆರೋಪ

  ಊದುಬತ್ತಿ ಕಾರ್ಖಾನೆ ನಡೆಸುತ್ತಿರುವ ರಮ್ಯಾ ರಘುಪತಿ, ಉದ್ಯಮ ಆರಂಭಿಸಲು ಕೆಲವರಿಂದ ಕೆಲವು ಲಕ್ಷ ಸಾಲ ಪಡೆದಿದ್ದರು. ಸಾಲವನ್ನು ಕಾಲ ಕಾಲಕ್ಕೆ ಮರುಪಾವತಿ ಸಹ ಮಾಡುತ್ತಿದ್ದರು. ಆದರೆ ನರೇಶ್, ರಮ್ಯಾಗೆ ಸಾಲ ನೀಡಿದವರನ್ನು ಸಂಪರ್ಕಿಸಿ ಅವರಿಂದಲೇ ಪತ್ನಿಯ ವಿರುದ್ಧ ಕೋಟ್ಯಂತರ ರುಪಾಯಿ ಹಣ ವಂಚನೆ ಆರೋಪವನ್ನು ಮಾಡಿದಿದ್ದಾರೆ. ತನ್ನ ಪ್ರಭಾವ ಬಳಸಿ, ರಮ್ಯಾ ರಘುಪತಿ ಸುಮಾರು 500 ಕೋಟಿ ಹಣ ವಂಚನೆ ಮಾಡಿದ್ದಾರೆ ಎಂದು ಕೆಲವು ತೆಲುಗು ಮಾಧ್ಯಮಗಳಲ್ಲಿ ಸುದ್ದಿಗಳನ್ನು ಸಹ ಬರೆಸಿದ್ದಾರೆ. ಹೀಗೆಂದು ರಮ್ಯಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  ಅಧಿಕೃತ ದೂರು ದಾಖಲಾಗಿರಲೇ ಇಲ್ಲ!

  ಅಧಿಕೃತ ದೂರು ದಾಖಲಾಗಿರಲೇ ಇಲ್ಲ!

  ಸುದ್ದಿ ಪ್ರಕಟವಾದ ಬಳಿಕ ರಮ್ಯಾ ಬಳಿ ಇದ್ದ ಇನ್ನು ಕೆಲವು ಬಂಡವಾಳದಾರರು ಆತಂಕಕ್ಕೆ ಒಳಗಾಗಿದರು. ರಮ್ಯಾ ವಿರುದ್ಧ ಯಾವುದೇ ಅಧಿಕೃತ ದೂರು ಸಹ ಪೊಲೀಸ್ ಠಾಣೆಯನ್ನು ದಾಖಲಾಗದೇ ಇದ್ದರೂ ಮಾಧ್ಯಮಗಳಲ್ಲಿ ರಮ್ಯಾ ಅಪರಾಧಿ ಎಂಬಂತಾ ವರದಿಗಳು ಪ್ರಸಾರವಾಗಿವೆ. ಇದರಿಂದ ಉದ್ಯಮದಲ್ಲಿ ದೊಡ್ಡ ಮಟ್ಟದ ನಷ್ಟ ಅನುಭವಿಸಿದ್ದಾರೆ ರಮ್ಯಾ ಹೇಳಿದ್ದಾರೆ. ಕೆಲಸಗಾರರು ಕೆಲಸ ಬಿಟ್ಟು ಹೋದರು, ಬಂಡವಾಳ ಹೂಡಿದವರು, ಬಂಡವಾಳ ಮರುಪಾವತಿಗೆ ದುಂಬಾಲು ಬಿದ್ದರು. ಜೊತೆಗೆ ಕುಟುಂಬದಲ್ಲಿಯೂ ಸಮಸ್ಯೆಗಳು ಎದುರಾದವು, ಮಾನಸಿಕ ನೆಮ್ಮದಿ ಹಾಳಾಯಿತು ಎಂದು ಅವಲತ್ತುಕೊಂಡಿದ್ದಾರೆ ರಮ್ಯಾ ರಘುಪತಿ.

  ಸುಳ್ಳು ಹೇಳಿಕೆ ಕೊಟ್ಟಿದ್ದ ನರೇಶ್!

  ಸುಳ್ಳು ಹೇಳಿಕೆ ಕೊಟ್ಟಿದ್ದ ನರೇಶ್!

  ತೆಲುಗು ಚಾನೆಲ್‌ಗಳಲ್ಲಿ ತಮ್ಮ ವಿರುದ್ಧ ಪ್ರಕಟವಾದ ಸುದ್ದಿಗಳಿಂದಾಗಿ ರಮ್ಯಾ ಗೆಳೆಯರು, ಸಂಬಂಧಿಗಳು ದೂರ ಆದರು. ರಮ್ಯಾಗೆ ಇದರಿಂದ ಸಾಕಷ್ಟು ಅಪಮಾನಗಳೂ ಆಯಿತು. ನರೇಶ್ ಕುಮ್ಮಕ್ಕಿನಿಂದ ರಮ್ಯಾ ಮೇಲೆ ಐವರು ಮಹಿಳೆಯರು ಸುಳ್ಳು ಆರೋಪ ಮಾಡಿದರು. ತಾವು ನೀಡಿದ್ದ ಸಾಲ ವಾಪಸ್ ಬಂದಿದ್ದರೂ ಕೋಟ್ಯಂತರ ರೂ. ಮೋಸ ಎಂದು ಆರೋಪಸಿದರು. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದ ನರೇಶ್, ''ನನಗೂ ರಮ್ಯಾಗೂ ಸಂಬಂಧವಿಲ್ಲ. ನಾವಿಬ್ಬರೂ ಕಳೆದ ಏಳು ವರ್ಷದಿಂದ ಒಟ್ಟಿಗಿಲ್ಲ'' ಎಂದಿದ್ದರು. ಆದರೆ ಆಗಲೂ ಸಹ ರಮ್ಯಾ ಹಾಗೂ ನರೇಶ್ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು.

  ಮಾಧ್ಯಮಗಳ ಬಳಿ ತಪ್ಪು ಒಪ್ಪಿಕೊಂಡಿರುವ ಐವರು

  ಮಾಧ್ಯಮಗಳ ಬಳಿ ತಪ್ಪು ಒಪ್ಪಿಕೊಂಡಿರುವ ಐವರು

  ಆದರೆ ಈಗ ನಡೆದಿರುವ ಪವರ್ ಟಿವಿ ಸ್ಟಿಂಗ್ ಆಪರೇಷನ್‌ನಲ್ಲಿ ರಮ್ಯಾ ವಿರುದ್ಧ ಮಾಡಿದ್ದ ಆರೋಪಗಳೆಲ್ಲವೂ ಸುಳ್ಳೆಂದು, ನರೇಶ್ ಕುಮ್ಮಕ್ಕಿನಿಂದಲೇ ರಮ್ಯಾ ವಿರುದ್ಧ ಆರೋಪ ಮಾಡಿದ್ದಾಗಿ ಐವರೂ ಒಪ್ಪಿಕೊಂಡಿದ್ದಾರೆ. ರಮ್ಯಾ ವಿರುದ್ಧ ಆರೋಪ ಮಾಡಿದ ಮಹಿಳೆಯ ಪತಿ ವಿನೋದ್, ನರೇಶ್ ಅವರೇ ತಮಗೆ ಆರೋಪ ಮಾಡಲು ಹೇಳಿದ್ದಾಗಿಯೂ ಹೇಳಿದ್ದಾರೆ. ಅಲ್ಲದೆ, ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರೆ ಎಂದೂ ಸಹ ಹೇಳಿದ್ದಾರೆ. ಸ್ಟಿಂಗ್ ವಿಡಿಯೋ ಹೊರಬಂದ ಬಳಿಕ ತೆಲುಗು ಮಾಧ್ಯಮಗಳ ಬಳಿಯೂ ಆ ಐವರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ರಮ್ಯಾ ರಘುಪತಿ.

  English summary
  Telugu actor Naresh's wife Ramya Raghupathi alleges that Naresh is playing games with her life to marry Pavithra Lokesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X