For Quick Alerts
  ALLOW NOTIFICATIONS  
  For Daily Alerts

  ತಂದೆ ಮೃತದೇಹದ ಪಕ್ಕದಲ್ಲೇ ನರೇಶ್- ಪವಿತ್ರಾ ರೊಮ್ಯಾನ್ಸ್: ಲಿಪ್‌ಲಾಕ್‌ಗೆ ಸಿಡಿದೆದ್ದ 3ನೇ ಪತ್ನಿ!

  |

  ಹೊಸ ವರ್ಷದ ಸಂಭ್ರಮದಲ್ಲೇ ಲಿಪ್‌ಲಾಕ್ ವಿಡಿಯೋ ರಿಲೀಸ್ ಮಾಡಿ ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಎಲ್ಲರ ಹುಬ್ಬೇರಿಸಿದ್ದರು. ಶೀಘ್ರದಲ್ಲೇ ಮದುವೆ ಆಗುತ್ತಿದ್ದೀವಿ ಎನ್ನುವ ರೀತಿ ಪೋಸ್ ಕೊಟ್ಟಿದ್ದರು. ಆದರೆ ಈ ವಿಡಿಯೋಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ.

  ಪವಿತ್ರಾ ಲೋಕೇಶ್- ನರೇಶ್ ರಿಲೇಶನ್‌ಶಿಪ್ ವಿವಾದ ಕಳೆದ ವರ್ಷ ಭಾರೀ ಸದ್ದು ಮಾಡಿತ್ತು. ಇಬ್ಬರು ಮದುವೆ ಆಗಿದ್ದಾರೆ, ಒಟ್ಟಿಗೆ ಸಹ ಜೀವನ ನಡೆಸುತ್ತಿದ್ದಾರೆ ಅಂತೆಲ್ಲಾ ಭಾರೀ ಚರ್ಚೆ ಆಗಿತ್ತು. ಇನ್ನು ಪವಿತ್ರಾ ಲೋಕೇಶ್ ವಿರುದ್ದ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಕೂಡ ಸಿಡಿದೆದ್ದಿದ್ದರು. ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಲು ಪವಿತ್ರಾ ಕಾರಣ ಎಂದಿದ್ದರು. ಆರಂಭದಲ್ಲಿ ನಾವಿಬ್ಬರು ಬರೀ ಫ್ರೆಂಡ್ಸ್ ಅಷ್ಟೇ ಎಂದಿದ್ದ ಪವಿತ್ರಾ, ನರೇಶ್ ನಂತರ ಒಂದೇ ಹೋಟೆಲ್ ಕೋಣೆಯಲ್ಲಿ ರಮ್ಯಾ ಎದುರು ಸಿಕ್ಕಿಬಿದ್ದಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು.

  ಪವಿತ್ರಾ ಲೋಕೇಶ್‌ಗೆ ಸಿಹಿ ಮುತ್ತು ನೀಡಿ ಮದುವೆ ವಿಷಯ ಮುಟ್ಟಿಸಿದ ತೆಲುಗು ನಟ ನರೇಶ್!ಪವಿತ್ರಾ ಲೋಕೇಶ್‌ಗೆ ಸಿಹಿ ಮುತ್ತು ನೀಡಿ ಮದುವೆ ವಿಷಯ ಮುಟ್ಟಿಸಿದ ತೆಲುಗು ನಟ ನರೇಶ್!

  ಕೆಲ ದಿನಗಳ ನಂತರ ಎಲ್ಲಾ ತಣ್ಣಗಾಯಿತು ಎಂದುಕೊಳ್ಳುವ ಸಮಯದಲ್ಲೇ ಹೊಸ ವರ್ಷಕ್ಕೆ ಬ್ಲಾಸ್ಟಿಂಗ್ ನ್ಯೂಸ್ ಎನ್ನುವಂತೆ ನರೇಶ್, ಪವಿತ್ರಾ ಲಿಪ್‌ಲಾಕ್ ವಿಡಿಯೋ ತೇಲಿ ಬಿಟ್ಟಿದ್ದರು. ಆದಷ್ಟು ಬೇಗ ಮದುವೆ ಎಂದು ಘೋಷಿಸಿದ್ದರು. ಆದರೆ ಇದು ರಿಯಲ್ ಅಲ್ಲ, ರೀಲ್ ಎನ್ನುವ ಚರ್ಚೆ ಈಗ ಶುರುವಾಗಿದೆ.

  ನರೇಶ್-ಪವಿತ್ರಾ ಮದುವೆಗೆ ಟ್ವಿಸ್ಟ್

  ನರೇಶ್-ಪವಿತ್ರಾ ಮದುವೆಗೆ ಟ್ವಿಸ್ಟ್

  ಕಳೆದ 4 ದಿನಗಳಿಂದ ನರೇಶ್- ಪವಿತ್ರಾ ಮದುವೆ ಸುದ್ದಿ ಹಾಟ್ ಟಾಪಿಕ್ ಆಗಿದೆ. ಆದರೆ ಇದು ರಿಯಲ್ ಮದುವೆ ಸುದ್ದಿ ಅಲ್ಲ. ಸಿನಿಮಾ ಪ್ರಮೋಷನ್‌ಗಾಗಿ ಮಾಡಿರುವ ಗಿಮಿಕ್ ಎನ್ನಲಾಗ್ತಿದೆ. ಇಬ್ಬರು 'ಮಳ್ಳಿ ಪೆಳ್ಳಿ' ಎನ್ನುವ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಆ ಸಿನಿಮಾ ಅನೌನ್ಸ್‌ಮೆಂಟ್‌ನ ಈ ರೀತಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಕೆಲ ದಿನಗಳ ಹಿಂದೆ ತಮ್ಮದೇ ರಿಯಲ್ ಲೈಫ್ ಕಥೆಯನ್ನು ನರೇಶ್ ಸಿನಿಮಾ ಮಾಡುವ ಬಗ್ಗೆ ಗುಸುಗುಸು ಶುರುವಾಗಿತ್ತು. ಅದೇ ಚಿತ್ರವನ್ನು ಈ ಲಿಪ್‌ಲಾಕ್ ವಿಡಿಯೋ ಮೂಲಕ ಘೋಷಿಸಿದ್ದಾರೆ ಎನ್ನಲಾಗ್ತಿದೆ. ರಮ್ಯಾ ರಘುಪತಿಗೆ ಡಿವೋರ್ಸ್‌ ಕೊಡದೇ ಪವಿತ್ರಾ ಜೊತೆ ಮದುವೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಎದ್ದಿದೆ.

  ಒಂದೇ ಹೊಟೇಲ್‌ನಲ್ಲಿ ಹೊಸವರ್ಷ ಆಚರಿಸಿದ್ರಾ ರಶ್ಮಿಕಾ‌ - ವಿಜಯ್? ಇಲ್ಲಿದೆ ಅಸಲಿ ವಿಷಯಒಂದೇ ಹೊಟೇಲ್‌ನಲ್ಲಿ ಹೊಸವರ್ಷ ಆಚರಿಸಿದ್ರಾ ರಶ್ಮಿಕಾ‌ - ವಿಜಯ್? ಇಲ್ಲಿದೆ ಅಸಲಿ ವಿಷಯ

  ಲಿಪ್‌ಲಾಕ್‌ಗೆ ರಮ್ಯಾ ಹೇಳಿದ್ದೇನು?

  ಲಿಪ್‌ಲಾಕ್‌ಗೆ ರಮ್ಯಾ ಹೇಳಿದ್ದೇನು?

  4 ದಿನಗಳಿಂದ ವೈರಲ್ ಆಗಿರುವ ನರೇಶ್- ಪವಿತ್ರಾ ಲಿಪ್‌ಲಾಕ್ ವಿಡಿಯೋ ಬಗ್ಗೆ ನರೇಶ್ 3ನೇ ಪತ್ನಿ ಪವಿತ್ರಾ ಲೋಕೇಶ್ ಪ್ರತಿಕ್ರಿಯಿಸಿದ್ದಾರೆ. ಅದನ್ನು ನೋಡಿ ನನಗೇನು ಅಚ್ಚರಿ ಅನ್ನಿಸಲಿಲ್ಲ ಎಂದು ಹೇಳಿದ್ದಾರೆ. ಪವರ್ ಟಿವಿ ಸುದ್ದಿವಾಹಿನಿಯ ಸ್ಟುಡಿಯೋದಲ್ಲಿ ರಮ್ಯಾ ರಘುಪತಿ ಈ ಬಗ್ಗೆ ಮಾತನಾಡಿದ್ದಾರೆ. "ನನಗೆ ಇದನ್ನು ನೋಡಿ ಅಚ್ಚರಿ ಅನ್ನಿಸಲಿಲ್ಲ. ನರೇಶ್ ಅವರನ್ನು ನಮ್ಮ ಮನೆಯ ಮುಸುರೆ ತೊಳೆಯುವವಳ ಜೊತೆ ನೋಡಿದಾಗ ಮೊದಲು ಶಾಕ್ ಆಗಿತ್ತು. ಅವರ ಫೋನ್‌ನಲ್ಲಿ ಕಾಲ್ ರೆಕಾರ್ಡಿಂಗ್ ಎಲ್ಲಾ ಕೇಳಿದ್ದಾಗ ಶಾಕ್ ಆಗಿತ್ತು. ದಿನಕ್ಕೊಂದು ಸತ್ಯ ಹೊರಬೀಳುತ್ತಿತ್ತು, ದಿನ ಇದೇ ಕಥೆನೇ, ಇವತ್ತು ವಿಡಿಯೋ ನೋಡಿದ್ದೇವೆ ಅಷ್ಟೆ. ನಾನು ಇದನ್ನೆಲ್ಲಾ ಬಹಳ ನೋಡಿದ್ದೇನೆ. ಹಾಗಾಗಿ ಅಚ್ಚರಿ ಅನ್ನಿಸಲಿಲ್ಲ.

  ತಂದೆ ಕೃಷ್ಣ ಅವರಿಗೆ ಅಗೌರವ

  ತಂದೆ ಕೃಷ್ಣ ಅವರಿಗೆ ಅಗೌರವ

  ಇತ್ತೀಚೆಗೆ ನರೇಶ್ ತಂದೆ ತೆಲುಗಿನ ಖ್ಯಾತ ನಟ ಸೂಪರ್ ಸ್ಟಾರ್ ಕೃಷ್ಣ ನಿಧನರಾಗಿದ್ದರು. ಪಾರ್ಥೀವ ಶರೀರವನ್ನು ನರೇಶ್ ಅವರ ಮನೆಯಲ್ಲೇ ಇರಿಸಲಾಗಿತ್ತು. ಅಂತಿಮ ದರ್ಶನಕ್ಕೆ ನಟಿ ಪವಿತ್ರಾ ಲೋಕೇಶ್ ಕೂಡ ಹೋಗಿದ್ದರು. ಅಲ್ಲಿ ಇಬ್ಬರು ನಡೆದುಕೊಂಡ ರೀತಿ ಬಗ್ಗೆ ನೆಟ್ಟಿಗರಿಂದ ಬೇಸರ ವ್ಯಕ್ತವಾಗಿತ್ತು. ಕೈ ಸನ್ನೆ, ಕಣ್ಸನ್ನೆ ಮಾಡುತ್ತಾ ಕಾಣಿಸಿಕೊಂಡಿದ್ದ ವಿಡಿಯೋಗಳು ವೈರಲ್ ಆಗಿತ್ತು. ಇದೇ ವಿಚಾರದ ಬಗ್ಗೆ ರಮ್ಯಾ ರಘುಪತಿ ಮಾತನಾಡಿದ್ದಾರೆ. "ಒಂದರ್ಥದಲ್ಲಿ ಇಬ್ಬರೂ ಕೃಷ್ಣ ಅವರ ಪಾರ್ಥೀವ ಶರೀರದ ಪಕ್ಕದಲ್ಲೇ ರೊಮ್ಯಾನ್ಸ್ ಮಾಡುತ್ತಿದ್ದರು. ಅಂದು ಸಂಜೆ ಮನೆಯಲ್ಲಿ ಪಾರ್ಥೀವ ಶರೀರವನ್ನು ಅನಾಥವಾಗಿ ಬಿಟ್ಟು ಪವಿತ್ರಾ ಜೊತೆ ನರೇಶ್ ಗೆಸ್ಟ್‌ಹೌಸ್‌ಗೆ ಹೋಗಿದ್ದರು" ಎಂದು ರಮ್ಯಾ ರಘುಪತಿ ಆರೋಪಿಸಿದ್ದಾರೆ.

  ನನ್ನ ಪತಿ ನರೇಶ್ ಫೂಲ್ ಅಲ್ಲ

  ನನ್ನ ಪತಿ ನರೇಶ್ ಫೂಲ್ ಅಲ್ಲ

  "ಯಾವುದೇ ಮಹಿಳೆ ಕೂಡ ತನ್ನ ಪತಿಯನ್ನು ಮತ್ತೊಬ್ಬಳ ಜೊತೆ ಹೀಗೆ ನೋಡಲು ಒಪ್ಪುವುದಿಲ್ಲ. ನನ್ನ ಮೇಲೆ ಇಷ್ಟೆಲ್ಲಾ ಕೇಸ್ ಹಾಕಿದ್ದಾರೆ. ಅದಕ್ಕೆ ಈ ಮೂಲಕ ಅವರೇ ಸಾಕ್ಷಿ ಕೊಟ್ಟಂತಾಗಿದೆ ಎಂದುಕೊಂಡಿದ್ದೇನೆ. ಇದು ಸಿನಿಮಾ ಪ್ರಮೋಷನ್ ಅಲ್ಲದೇ ಇದ್ದರೆ, ನೀವು ನನಗೆ ಸಾಕ್ಷಾಧಾರ ಕಟ್ಟಿದ್ದೀರಾ. ನರೇಶ್ ಫೂಲ್ ಅಲ್ಲ. ಅಥವಾ ಅವರು ನನ್ನನ್ನು ಈ ವಿಡಿಯೋ ಮೂಲಕ ಫೂಲ್ ಮಾಡುತ್ತೀದ್ದಾರಾ? ಗೊತ್ತಿಲ್ಲ. ಹಾಗಾಗಿ ನಾನು ಈ ಬಗ್ಗೆ ಏನಂದು ಪ್ರತಿಕ್ರಿಯೆ ನೀಡಲಿ? ಬಹಳ ಜನ ಕೇಳುತ್ತಿದ್ದಾರೆ. ಯಾಕೆ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು. ಈಗಾಗಲೇ ತೆರೆಮರೆಯಲ್ಲಿ ಇಬ್ರ ಜೊತೆ ಸೆಟ್ಲ್‌ಮೆಂಟ್ ಮಾಡ್ಕೊಂಡಿದ್ದೀನಿ, ಸಾಕಷ್ಟು ಹಣ ಸಿಕ್ಕಿದೆ. ಇಬ್ಬರು ಒಪ್ಪಿ ಡಿವೋರ್ಸ್ ತೆಗೆದುಕೊಳ್ಳುತ್ತಾರೆ ಅಂತೆಲ್ಲಾ ಸುದ್ದಿ ಹರಿದಾಡುತ್ತಿದೆ. ಡಿವೋರ್ಸ್ ಆಗ್ತಿದೆ. ಇಲ್ಲದಿದ್ದರೆ ಅಷ್ಡು ಧೈರ್ಯವಾಗಿ ಹೇಗೆ ಮದುವೆ ಅನೌನ್ಸ್ ಮಾಡ್ತಾರೆ ಅಂತೆಲ್ಲಾ ಹೇಳುತ್ತಿದ್ದಾರೆ"

  ಡಿವೋರ್ಸ್ ಕೇಸ್ ಸ್ಟೇಟಸ್

  ಡಿವೋರ್ಸ್ ಕೇಸ್ ಸ್ಟೇಟಸ್

  "ನರೇಶ್ ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನಾನು ಅದನ್ನು ಪ್ರಶ್ನಿಸಿ ಪ್ರತಿದೂರು ದಾಖಲಿಸಿದ್ದೀನಿ. ಯಾರು ಬೇಕಾದರೂ ಆನ್‌ಲೈನ್‌ನಲ್ಲಿ ಅದನ್ನು ಪರಿಶೀಲನೆ ಮಾಡಬಹುದು. ಫ್ಯಾಮಿಲಿ ಕೋರ್ಟ್‌ನಲ್ಲಿ ಡಿವೋರ್ಸ್‌ಗೆ ಅಪ್ಲೇ ಮಾಡಿದ್ದಾರೆ. ಅವರ ಪಿಟಿಷನ್‌ಗೆ ನಾನು ಕೌಂಟರ್ ಪೆಟಿಷನ್ ತೆಗೆದುಕೊಂಡಿದ್ದೇನೆ. ರಿಜೆಕ್ಷನ್ ಪೆಟಿಷನ್ ಹಾಕಿದ್ದೀನಿ. ಅದರಲ್ಲಿ ಒಂದಷ್ಟು ಸುಳ್ಳುಗಳನ್ನು ಹೇಳಿದ್ದಾರೆ. ವೈವಾಹಿಕ ಹಕ್ಕುಗಳ ರಕ್ಷಣೆ ಅಡಿಯಲ್ಲೂ ಕೇಸ್ ದಾಖಲಾಗಿದೆ. ಅದಕ್ಕೆ ಅವರು ಪ್ರತಿಕ್ರಿಯಿಸಿಲ್ಲ. ಹಾಗಾಗಿ ಡಿವೋರ್ಸ್ ವಿಚಾರ ಇನ್ನು ದೂರದ ಮಾತು" ಎಂದು ರಮ್ಯಾ ರಘುಪತಿ ಹೇಳಿದ್ದಾರೆ.

  English summary
  Pavitra Lokesh- Naresh Marriage News Reel or Real: Ramya First Reaction About liplock video. announced their wedding by sharing a passionate lip-lock in the video. Naresh and Pavitra Lokesh have been in the news for the past few months for their alleged relationship. Know more.
  Thursday, January 5, 2023, 13:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X