For Quick Alerts
  ALLOW NOTIFICATIONS  
  For Daily Alerts

  'ಹರಿ ಹರ ವೀರ ಮಲ್ಲು' ಅವತಾರದಲ್ಲಿ ಮಿಂಚಿದ ಪವನ್ ಕಲ್ಯಾಣ್: ಹೆಂಗೈತೆ ಟೀಸರ್?

  |

  ಟಾಲಿವುಡ್‌ ಪವರ್‌ಸ್ಟಾರ್ ಪವನ್‌ ಕಲ್ಯಾಣ್‌ಗೆ ಇಂದು ( ಸೆಪ್ಟೆಂಬರ್ 02) ಹುಟ್ಟುಹಬ್ಬದ ಸಂಭ್ರಮ. 50ನೇ ವರ್ಷಕ್ಕೆ ಕಾಲಿಟ್ಟಿರೋ ಪವರ್‌ಸ್ಟಾರ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಮಧ್ಯೆ ಸಿನಿಮಾ ತಂಡ ಟೀಸರ್, ಫಸ್ಟ್ ಲುಕ್ ಅಂತ ರಿಲೀಸ್ ಮಾಡಿ ಅಭಿಮಾನಿಗಳು ಹರ್ಷವನ್ನು ದುಪ್ಪಟ್ಟು ಮಾಡಿದ್ದಾರೆ.

  ಮೊದಲೇ ಅನೌನ್ಸ್ ಮಾಡಿದಂತೆ 'ಹರಿ ಹರ ವೀರ ಮಲ್ಲು' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಟಾಲಿವುಡ್‌ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಸಿನಿಮಾ ಟೀಮ್ ಟೀಸರ್ ಅನ್ನು ಉಡುಗೊರೆಯಾಗಿ ನೀಡಿದೆ. ಪವನ್‌ ಕಲ್ಯಾಣ್ ಸಿನಿಮಾದ ಟೀಸರ್ ನೋಡಿ ಫ್ಯಾನ್ಸ್ ಏನಂದ್ರು? ಟೀಸರ್ ಹೇಗಿದೆ? ಅಂತ ತಿಳಿಯಲು ಮುಂದೆ ಓದಿ.

  Pawan Kalyan Birthday Special: ಸೋತರೂ ಗೆದ್ದರೂ ಕಮ್ಮಿ ಆಗುವುದೇ ಇಲ್ಲ ಪವರ್ ಸ್ಟಾರ್ ಕ್ರೇಜ್!Pawan Kalyan Birthday Special: ಸೋತರೂ ಗೆದ್ದರೂ ಕಮ್ಮಿ ಆಗುವುದೇ ಇಲ್ಲ ಪವರ್ ಸ್ಟಾರ್ ಕ್ರೇಜ್!

  'ಹರಿ ಹರ ವೀರ ಮಲ್ಲು' ಕಥೆ ಹೇಳಿದ ಟೀಸರ್

  ಪವನ್ ಕಲ್ಯಾಣ್ ಬರ್ತ್‌ಡೇಗೆ ರಿಲೀಸ್ ಆಗಿರೋ ಟೀಸರ್ ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ. ಪವನ್ ಕಲ್ಯಾಣ್ ಅವತಾರ ನೋಡಿ ಪವರ್ ಫ್ಯಾನ್ಸ್ ಥ್ರಿಲ್ ಆಗಿರೋದೇನೋ ನಿಜ. ಅದಕ್ಕೆ ಕಾರಣ ಟೀಸರ್‌ನ ತುಣುಕುಗಳು. 'ಹರಿ ಹರ ವೀರ ಮಲ್ಲು' ವೀರಗಾಥೆಯನ್ನು ಚಿಕ್ಕ ಟೀಸರ್‌ನಲ್ಲಿ ಕಟ್ಟಿ ಕೊಡಲಾಗಿದೆ. ತೆಲುಗು ಯೋಧನ ಕಥೆಯನ್ನು ಹೋರಾಟವನ್ನು ಟೀಸರ್‌ನಲ್ಲಿ ಬಿಂಬಿಸಲಾಗಿದೆ.

  ಇಷ್ಟೇ ಅಲ್ಲದೆ 'ಹರಿ ಹರ ವೀರ ಮಲ್ಲು' ಸಿನಿಮಾದ ಚಿಕ್ಕ ಟೀಸರ್ ಸಿನಿಮಾದ ಸ್ಕೇಲ್ ಹೇಗಿದೆ? ಅನ್ನೋದನ್ನೂ ಹೇಳಿದೆ. ಈ ಸಿನಿಮಾ ತೆಲುಗು ಚಿತ್ರರಂಗದ ಮೆಗಾ ಬ್ಲಾಕ್‌ಬಸ್ಟರ್ ಆಗುತ್ತೆ ಅನ್ನೋ ಸೂಚನೆ ಕೊಟ್ಟಿದೆ. ಹೀಗಾಗಿ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಈ ಟೀಸರ್ ಗಿಫ್ಟ್ ಅಂತ್ಲೇ ಹೇಳಬಹುದು.

  ಪವರ್ ಸ್ಟಾರ್ ಆರ್ಭಟಕ್ಕೆ 'ಪೋಕಿರಿ' ದಾಖಲೆ ಧೂಳಿಪಟ: ಪವನ್ ಫ್ಯಾನ್ಸ್ 'ಜಲ್ಸಾ' ಶುರುಪವರ್ ಸ್ಟಾರ್ ಆರ್ಭಟಕ್ಕೆ 'ಪೋಕಿರಿ' ದಾಖಲೆ ಧೂಳಿಪಟ: ಪವನ್ ಫ್ಯಾನ್ಸ್ 'ಜಲ್ಸಾ' ಶುರು

  ಆಕ್ಷನ್ ಸೀನ್‌ಗೆ ಪವನ್ ಕಲ್ಯಾಣ ಕಸರತ್ತು

  ಪವನ್ ಕಲ್ಯಾಣ್ ಈ ಸಿನಿಮಾ ಹರಿ ಹರ ವೀರ ಮಲ್ಲು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಪವನ್ ಕಲ್ಯಾಣ್ ಸಾಕಷ್ಟು ಕಸರತ್ತು ಮಾಡಿದ್ದಾರೆಂದು ಟಾಲಿವುಡ್ ಮಾಧ್ಯಮಗಳು ಹೇಳಿವೆ. ಈ ಸಿನಿಮಾದಲ್ಲಿ ಬರುವ ಆಕ್ಷನ್ ದೃಶ್ಯಗಳಿಗಾಗಿ ಟ್ರೈನಿಂಗ್ ತೆಗೆದುಕೊಂಡಿದ್ದಾರೆ. ಐತಿಹಾಸಿ ಹಿನ್ನೆಲೆಯುಳ್ಳ ಸಿನಿಮಾ ಆಗಿರೋದ್ರಿಂದ ಪವನ್ ಕಲ್ಯಾಣ್ ಪಾತ್ರದ ಮೇಲೆ ಎಲ್ಲರ ಕಣ್ಣಿದೆ.

  'ಹರಿ ಹರಿ ವೀರ ಮಲ್ಲು' ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

  Pawan Kalyan Birthday: Hari Hara Veera Mallu Movie Teaser Released

  ಕ್ರಿಶ್ ಜಗರ್ಲಮುಡಿ ನಿರ್ದೇಶಕ

  ಅಂದ್ಹಾಗೆ 'ಹರಿ ಹರಿ ವೀರ ಮಲ್ಲು' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಕ್ರಿಶ್ ಜಗರ್ಲಮುಡಿ. ಇದು ಕ್ರಿಶ್ ಹಾಗೂ ಪವನ್ ಕಲ್ಯಾಣ್ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಮೊದಲ ಸಿನಿಮಾ. ಪವನ್ ಕಲ್ಯಾಣ್ ಜೊತೆ ನಿಧಿ ಅಗರ್ವಾಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಈ ಹಿಂದೆ ಕ್ರಿಶ್ ಜಗರ್ಲಮುಡಿ ಐತಿಹಾಸಿಕ ಹಿನ್ನೆಲೆಯುಳ್ಳ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಬಾಲಕೃಷ್ಣ ಅಭಿನಯದ 'ಗೌತಮಿಪುತ್ರ ಶಾತಕರ್ಣಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾವನ್ನು ಮೆಗಾ ಸೂರ್ಯ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದು, ಬಿಗ್ ಬಜೆಟ್‌ನಲ್ಲಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

  English summary
  Pawan Kalyan Birthday: Hari Hara Veera Mallu Movie Teaser Released, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X