For Quick Alerts
  ALLOW NOTIFICATIONS  
  For Daily Alerts

  ಪಂಜಾಬ್‌, ಗುಜರಾತ್‌ನಲ್ಲಿ ಪವನ್ ಕಲ್ಯಾಣ್ ಅಬ್ಬರ: 'ಜಲ್ಸಾ' ಹೊಡೆತಕ್ಕೆ, 'ಪೋಕಿರಿ' ದಾಖಲೆ ಧೂಳಿಪಟ

  |

  ತೆಲುಗು ರಾಜ್ಯಗಳಲ್ಲಿ ಇತ್ತೀಚೆಗೆ ಸ್ಪೆಷಲ್ ಶೋಗಳ ಅಬ್ಬರ ಹೆಚ್ಚಾಗಿದೆ. ನಟ ಮಹೇಶ್ ಬಾಬು ಹುಟ್ಟುಹಬ್ಬದ ಸಂದರ್ಭ ಅವರ ನಟನೆಯ 'ಪೋಕಿರಿ' ಸಿನಿಮಾದ ವಿಶೇಷ ಪ್ರದರ್ಶನವನ್ನು ಅಮೆರಿಕ ಸೇರಿದಂತೆ ಹಲವೆಡೆ ಆಯೋಜಿಸಲಾಗಿತ್ತು. ಬಂದ ಹಣವನ್ನು ಸಮಾಜ ಸೇವೆಗೆ ಖರ್ಚು ಮಾಡಲಾಗಿತ್ತು.

  ಇದೀಗ ಪವನ್ ಕಲ್ಯಾಣ್ ಹುಟ್ಟುಹಬ್ಬ ಸಮೀಪಿಸಿದ್ದು ಪವನ್ ಕಲ್ಯಾಣ್‌ರ ಹಳೆಯ ಸಿನಿಮಾಗಳ ಸ್ಪೆಷಲ್ ಶೋ ಅನ್ನು ಅಭಿಮಾನಿಗಳು ಹಲವು ನಗರಗಳಲ್ಲಿ ಆಯೋಜನೆ ಮಾಡಿದ್ದಾರೆ.

  ತೆಲುಗು ನಟ ನಂದಮೂರಿ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್ ನೋಟಿಸ್!ತೆಲುಗು ನಟ ನಂದಮೂರಿ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್ ನೋಟಿಸ್!

  ಪವನ್ ಕಲ್ಯಾಣ್ ನಟನೆಯ 'ಜಲ್ಸಾ' ಹಾಗೂ 'ತಮ್ಮುಡು' ಸಿನಿಮಾಗಳ ವಿಶೇಷ ಶೋ ಅನ್ನು ಹೈದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಆಂಧ್ರ-ತೆಲಂಗಾಣಗಳಲ್ಲಿ ಮಾತ್ರವೇ ಅಲ್ಲದೆ ಪಂಜಾಬ್ ರಾಜ್ಯದಲ್ಲಿಯೂ ಪವನ್ ಕಲ್ಯಾಣ್ ಅಭಿಮಾನಿಗಳು ವಿಶೇಷ ಶೋ ಆಯೋಜನೆ ಮಾಡಿದ್ದಾರೆ.

  ಪವನ್ ಕಲ್ಯಾಣ್ ಸಿನಿಮಾ ರೀ ರಿಲೀಸ್

  ಪವನ್ ಕಲ್ಯಾಣ್ ಸಿನಿಮಾ ರೀ ರಿಲೀಸ್

  ಸೆಪ್ಟೆಂಬರ್ 2 ರಂದು ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬ ಇದ್ದು, ಅದೇ ದಿನ ಹಲವು ಕಡೆಗಳಲ್ಲಿ ಸ್ಪೆಷಲ್ ಶೋಗಳು ನಡೆಯಲಿದೆ. ಹೈದರಾಬಾದ್‌ನಲ್ಲಿ ಈಗಾಗಲೇ ಚಿತ್ರಮಂದಿರಗಳನ್ನು ಸಿಂಗರಿಸಿ ಪವನ್ ಕಲ್ಯಾಣ್‌ರ ಕಟೌಟ್‌ಗಳನ್ನು ಕಟ್ಟಿ ಹಾರಗಳನ್ನು ಹಾಕಲಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಸ್ಪೆಷಲ್ ಶೋಗಳು ನಡೆಯಲಿದ್ದು, ಶೋಗಳಿಗೆ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಹಲವೆಡೆ ಶೋ ಹೌಸ್‌ಫುಲ್ ಸಹ ಆಗಿಬಿಟ್ಟಿದೆ.

  ಹೈದರಾಬಾದ್‌ನಲ್ಲಿ ಭರ್ಜರಿ ಕಲೆಕ್ಷನ್

  ಹೈದರಾಬಾದ್‌ನಲ್ಲಿ ಭರ್ಜರಿ ಕಲೆಕ್ಷನ್

  ಹೈದರಾಬಾದ್‌ನ ಪ್ರಸಾದ್ ಮಲ್ಟಿಪ್ಲೆಕ್ಸ್‌ ಒಂದರಲ್ಲೇ ಸೆಪ್ಟೆಂಬರ್ 02ರಂದು 17 ಶೋಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಇದರ ಹೊರತಾಗಿ ಸಂಧ್ಯಾ, ದೇವಿ, ಸುದರ್ಶನ್ ಸೇರಿದಂತೆ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಅದೆ ದಿನ ವಿಶೇಷ ಶೋಗಳ ಪ್ರದರ್ಶನ ಇರಲಿದೆ. ಹೈದರಾಬಾದ್ ಒಂದರಲ್ಲೇ ಈ ವರೆಗೆ ಟಿಕೆಟ್ ಬುಕಿಂಗ್ ಇಂದ ಸುಮಾರು 80 ಲಕ್ಷ ಸಂಗ್ರಹವಾಗಿದೆ ಎನ್ನಲಾಗುತ್ತಿದ್ದು, ಈ ಮೊತ್ತ ಒಂದು ಕೋಟಿ ದಾಟಲಿದೆ.

  ಪಂಜಾಬ್-ಗುಜರಾತ್‌ನಲ್ಲಿ ಸ್ಪೆಷಲ್ ಶೋ

  ಪಂಜಾಬ್-ಗುಜರಾತ್‌ನಲ್ಲಿ ಸ್ಪೆಷಲ್ ಶೋ

  ಆಂಧ್ರ-ತೆಲಂಗಾಣ ಮಾತ್ರವೇ ಅಲ್ಲದೆ ಪವನ್ ಕಲ್ಯಾಣ್‌ಗೆ ಪಂಜಾಬ್‌, ಗುಜರಾತ್, ಪಶ್ಚಿಮ ಬಂಗಾಳದಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪವನ್ ಕಲ್ಯಾಣ್ ಹುಟ್ಟುಹಬ್ಬದಂದು ಪಂಜಾಬ್‌ನ ಪಾಗ್ವಾರಾದ ಪ್ರೈಂ ಸಿನಿಮಾಸ್‌ನಲ್ಲಿ 'ಜಲ್ಸಾ' ವಿಶೇಷ ಶೋ ಆಯೋಜಿಸಲಾಗಿದೆ. ಇನ್ನು ಗುಜರಾತ್‌ನ ವಡೋದರಾದಲ್ಲಿ ವಿದ್ಯಾರ್ಥಿ ಸಂಘವೊಂದು ಅಲ್ಲಿನ ತಕ್ಷ್ ಗ್ಯಾಲೆಕ್ಸಿ ಮಲ್ಟಿಪ್ಲೆಕ್ಸ್‌ನಲ್ಲಿ 'ಜಲ್ಸಾ' ಸಿನಿಮಾದ ವಿಶೇಷ ಶೋ ಆಯೋಜನೆ ಮಾಡಿವೆ. ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿಯೂ ಶೋಗಳನ್ನು ಆಯೋಜಿಸಲಾಗಿದೆ.

  ಅಮೆರಿಕದಲ್ಲೂ ಹೌಸ್‌ಫುಲ್

  ಅಮೆರಿಕದಲ್ಲೂ ಹೌಸ್‌ಫುಲ್

  ಅಮೆರಿಕದಲ್ಲಿಯೂ 'ಜಲ್ಸಾ' ಸಿನಿಮಾದ ವಿಶೇಷ ಶೋಗಳನ್ನು ನ್ಯೂಯಾರ್ಕ್ ಸೇರಿದಂತೆ ಇತರೆ ಕೆಲವು ನಗರಗಳಲ್ಲಿ ಆಯೋಜಿಸಲಾಗಿದೆ. ಅಲ್ಲಿ ಸಹ ಶೋಗಳು ಹೌಸ್‌ಫುಲ್ ಆಗಿವೆ. 'ಜಲ್ಸಾ' ಸಿನಿಮಾವು ಪವನ್‌ ಕಲ್ಯಾಣ್‌ರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದ್ದು, ಈ ಸಿನಿಮಾ 2008ರಲ್ಲಿ ಬಿಡುಗಡೆ ಆಗಿತ್ತು. ತ್ರಿವಿಕ್ರಮ್ ನಿರ್ದೇಶನದ ಈ ಸಿನಿಮಾದಲ್ಲಿ ಇಲಿಯಾನಾ ನಾಯಕಿ. ಬ್ರಹ್ಮಾನಂದಂ, ಪ್ರಕಾಶ್ ರೈ, ಆಲಿ ಸೇರಿದಂತೆ ಹಲವು ನಟರು ಸಿನಿಮಾದಲ್ಲಿದ್ದಾರೆ. ಹಾಸ್ಯ ತುಂಬಿದ ಆಕ್ಷನ್ ಸಿನಿಮಾ ಇದಾಗಿದ್ದು, ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು.

  English summary
  Pawan Kalyan's Jalsa movie special screening organized in diffrent cities on his birth day which is on September 02.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X