For Quick Alerts
  ALLOW NOTIFICATIONS  
  For Daily Alerts

  ಪಂಚೆ ಎತ್ತಿ ಕಟ್ಟಿ, ಸವಾಲು ಹಾಕಿದ ಪವನ್ ಕಲ್ಯಾಣ್: ಅಭಿಮಾನಿಗಳು ಫಿದಾ

  |

  ನಟ ಪವನ್ ಕಲ್ಯಾಣ್ ರಗಡ್‌ ಲುಕ್‌ನಲ್ಲಿ ಪ್ರೇಕ್ಷಕ ಮುಂದೆ ಬಂದಿದ್ದಾರೆ. 'ವಕೀಲ್ ಸಾಬ್' ಸಿನಿಮಾ ಮೂಲಕ ಈಗಾಗಲೇ ತಮ್ಮ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದ್ದ ಪವನ್ ಇದೀಗ ಮತ್ತೊಂದು ಪವರ್‌ಫುಲ್ ಸಿನಿಮಾ ಮೂಲಕ ಮರಳಿದ್ದಾರೆ.

  ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ನಲ್ಲಿ ಪವನ್ ಕಲ್ಯಾಣ್ ನಟಿಸಿದ್ದು ಸಿನಿಮಾದ ಹೆಸರು ಹಾಗೂ ಸಣ್ಣ ಪ್ರೋಮೊ ಒಂದು ಇಂದು ಬಿಡುಗಡೆ ಆಗಿದೆ.

  ಪವನ್ ನಟನೆಯ ಈ ಸಿನಿಮಾಕ್ಕೆ 'ಭಿಮ್ಲಾ ನಾಯಕ್' ಎಂದು ಹೆಸರಿಡಲಾಗಿದ್ದು ಸಿಡುಕ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ರಾಣಾ ದಗ್ಗುಬಾಟಿ ಸಹ ಇದ್ದಾರೆ.

  ಇಂದು ಬಿಡುಗಡೆ ಆಗಿರುವ ಪ್ರೊಮೊನಲ್ಲಿ ಪವನ್ ಕಲ್ಯಾಣ್ ಸಖತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚೆ ಎತ್ತಿಕಟ್ಟಿ ಪುಂಢರನ್ನು ಚಚ್ಚಿ ಚಿಂದಿ ಮಾಡುತ್ತಿದ್ದಾರೆ. ಜೊತೆಗೆ ರಾಣಾ ದಗ್ಗುಬಾಟಿಗೆ ಸವಾಲು ಸಹ ಎಸೆಯುತ್ತಿದ್ದಾರೆ, ತಾಕತ್ತಿದ್ದರೆ ಆಚೆ ಬಾ ಎಂದು. ಈ ಕಿರು ಪ್ರೋಮೊ ಈಗಾಗಲೇ ಸಖತ್ ವೈರಲ್ ಆಗಿದೆ. ಸೆಪ್ಟೆಂಬರ್ 2 ರಂದು ಸಿನಿಮಾದ ಹಾಡು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.

  ರಾಣಾ ದಗ್ಗುಬಾಟಿ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ

  ರಾಣಾ ದಗ್ಗುಬಾಟಿ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ

  'ಭೀಮ್ಲ ನಾಯಕ್' ಹೆಸರೇ ಹೇಳುವಂತೆ ಸಿನಿಮಾದಲ್ಲಿ ಪವನ್ ಕಲ್ಯಾಣ್‌ ಪಾತ್ರದ ಹೆಸರು ಭೀಮ್ಲ ನಾಯಕ್, ಸಿನಿಮಾದಲ್ಲಿ ಅವರದ್ದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪಾತ್ರ. ರಾಣಾ ದಗ್ಗುಬಾಟಿಯದ್ದು ಕುಡುಕ ಆದರೆ ಶ್ರೀಮಂತ ಹಾಗೂ ಪ್ರಭಾವಿ ವ್ಯಕ್ತಿಯ ಪಾತ್ರ. ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಹೆಸರು ಡ್ಯಾನಿಯಲ್ ಶೇಖರ್ ಎಂದು. ರಾಣಾ ದಗ್ಗುಬಾಟಿ ಮಾಡುತ್ತಿರುವ ಪಾತ್ರಕ್ಕೆ ಸುದೀಪ್ ಆಯ್ಕೆ ಆಗಲಿದ್ದಾರೆ ಎನ್ನಲಾಗಿತ್ತು ಆದರೆ ಕೊನೆಯ ಕ್ಷಣದಲ್ಲಿ ಆಯ್ಕೆ ಬದಲಾಗಿ ರಾಣಾ ದಗ್ಗುಬಾಟಿಗೆ ಅವಕಾಶ ದೊರಕಿತು.

  ಪವನ್ ಕಲ್ಯಾಣ್ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ

  ಪವನ್ ಕಲ್ಯಾಣ್ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ

  ಮಲಯಾಳಂನಲ್ಲಿ 'ಅಯ್ಯಪ್ಪನುಂ ಕೋಶಿಯುಂ' ಎಂದು ಎರಡು ಪಾತ್ರದ ಹೆಸರನ್ನು ಸಿನಿಮಾಕ್ಕೆ ಇಟ್ಟು ಎರಡೂ ಪಾತ್ರಗಳನ್ನು ಸಮಾನವಾಗಿ ಟ್ರೀಟ್ ಮಾಡಲಾಗಿತ್ತು. ಆದರೆ ತೆಲುಗಿನಲ್ಲಿ ಪವನ್ ಕಲ್ಯಾಣ್ ಪಾತ್ರದ ಹೆಸರನ್ನು ಮಾತ್ರವೇ ಸಿನಿಮಾಕ್ಕೆ ಇಡಲಾಗಿದೆ. ಇದರಿಂದಲೇ ಗೊತ್ತಾಗುತ್ತಿದೆ ತೆಲುಗಿನಲ್ಲಿ ಪವನ್ ಕಲ್ಯಾಣ್ ಪಾತ್ರಕ್ಕೆ ಮಾತ್ರವೇ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ ಎಂಬುದು.

  ನಿತ್ಯಾ ಮೆನನ್, ಐಶ್ವರ್ಯಾ ರಾಜೇಶ್ ನಾಯಕಿಯರು

  ನಿತ್ಯಾ ಮೆನನ್, ಐಶ್ವರ್ಯಾ ರಾಜೇಶ್ ನಾಯಕಿಯರು

  'ಭೀಮ್ಲ ನಾಯಕ್' ಸಿನಿಮಾದಲ್ಲಿ ಪವನ್ ಕಲ್ಯಾಣ್, ರಾಣಾ ದಗ್ಗುಬಾಟಿ ಜೊತೆಗೆ ಕನ್ನಡತಿ ನಿತ್ಯಾ ಮೆನನ್ ಹಾಗೂ ಐಶ್ವರ್ಯಾ ರಾಜೇಶ್ ಸಹ ನಟಿಸುತ್ತಿದ್ದಾರೆ. ಜೊತೆಗೆ ತಮಿಳಿನ ನಟ ಸಮುದ್ರಕಿಣಿ ಸಹ ಇದ್ದಾರೆ. ಇನ್ನೂ ಹಲವು ಪ್ರಮುಖ ನಟರುಗಳು ಸಿನಿಮಾದಲ್ಲಿದ್ದಾರೆ. ಈ ಸಿನಿಮಾವನ್ನು ಸಾಗರ್ ಕೆ ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಚಿತ್ರಕತೆ ಬರೆದಿರುವುದು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್. ಸಿನಿಮಾಕ್ಕೆ ಬಂಡವಾಳವನ್ನು ಸೂರ್ಯದೇವರ ನಾಗವಂಶಿ ಹಾಕಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಎಸ್.ತಮನ್ ನೀಡಿದ್ದದಾರೆ. ನಿತ್ಯಾ ಮೆನನ್, ರಾಣಾ ದಗ್ಗುಬಾಟಿಯ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಶ್ವರ್ಯಾ ರಾಜೇಶ್ ಪವನ್ ಕಲ್ಯಾಣ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಹಲವು ಭಾಷೆಗಳಿಗೆ ಸಿನಿಮಾ ರೀಮೇಕ್

  ಹಲವು ಭಾಷೆಗಳಿಗೆ ಸಿನಿಮಾ ರೀಮೇಕ್

  ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾವನ್ನು ಸಚ್ಚಿ ನಿರ್ದೇಶನ ಮಾಡಿದ್ದರು. ಪೃಥ್ವಿರಾಜ್ ಸುಕುಮಾರನ್ ಹಾಗೂ ಬಿಜು ಮೆನನ್ ಆ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾವು ಸೂಪರ್-ಡೂಪರ್ ಹಿಟ್ ಆಗಿತ್ತು. ಸಿನಿಮಾದ ನಿರ್ದೇಶಕ ಸಚ್ಚಿ 2020ರ ಜೂನ್ 18ರಂದು ಹೃದಯಾಘಾತದಿಂದ ನಿಧನ ಹೊಂದಿದರು. 'ಅಯ್ಯಪ್ಪನುಂ ಕೋಶೀಯುಂ' ಸಿನಿಮಾವು ತೆಲುಗಿನಲ್ಲಿ ಮಾತ್ರವೇ ಅಲ್ಲದೆ ತಮಿಳು ಹಾಗೂ ಹಿಂದಿಯಲ್ಲಿಯೂ ರೀಮೇಕ್ ಆಗಲಿದೆ. ಹಿಂದಿಯಲ್ಲಿ ಜಾನ್ ಅಬ್ರಹಾಂ ಸಿನಿಮಾದ ರೀಮೇಕ್ ಮಾಡಲಿದ್ದಾರೆ.

  English summary
  Pawan Kalyan new movie Bheemla Naik's promo video released on Independence Day. Fans love the video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X