For Quick Alerts
  ALLOW NOTIFICATIONS  
  For Daily Alerts

  ಚುನಾವಣೆ ಪ್ರಚಾರಕ್ಕೆ ಐಶಾರಾಮಿ ಕ್ಯಾರವ್ಯಾನ್ ಖರೀದಿಸಿದ ಪವನ್ ಕಲ್ಯಾಣ್: ಬೆಲೆ ಎಷ್ಟು ಕೋಟಿ?

  By ಫಿಲ್ಮಿಬೀಟ್ ಡೆಸ್ಕ್
  |

  ಆಂಧ್ರ ರಾಜಕೀಯದಲ್ಲಿ ಪವನ್ ಕಲ್ಯಾಣ್ ಅಬ್ಬರ ಜೋರಾಗಿದೆ. ಸಿನಿಮಾಗಳಂತೆಯೇ ರಾಜಕೀಯದಲ್ಲಿಯೂ ಮಾಸ್ ಬಿರುಗಾಳಿ ತಂದಿದ್ದಾರೆ ಪವನ್ ಕಲ್ಯಾಣ್.

  ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರದ ಎಲ್ಲ 175 ಕ್ಷೇತ್ರಗಳಿಗೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಲು ಮುಂದಾಗಿದ್ದಾರೆ. ಎಷ್ಟು ಸ್ಥಾನ ಗೆಲ್ಲುತ್ತಾರೊ ಇಲ್ಲವೋ ಆದರೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವವನ್ನಂತೂ ಬೀರಲಿದ್ದಾರೆ ಪವನ್ ಎನ್ನಲಾಗುತ್ತಿದೆ.

  ಸಿನಿಮಾದಲ್ಲಿ ನಟಿಸುತ್ತಿರುವುದು ಏಕೆ? ರಾಜಕೀಯಕ್ಕೆ ಬಂದಿದ್ದೇಕೆ: ವಿವರಿಸಿದ ಪವನ್ ಕಲ್ಯಾಣ್ಸಿನಿಮಾದಲ್ಲಿ ನಟಿಸುತ್ತಿರುವುದು ಏಕೆ? ರಾಜಕೀಯಕ್ಕೆ ಬಂದಿದ್ದೇಕೆ: ವಿವರಿಸಿದ ಪವನ್ ಕಲ್ಯಾಣ್

  ಇದೇ ಕಾರಣಕ್ಕೆ ಚುನಾವಣೆಗೆ ಈಗಿನಿಂದಲೂ ಭರ್ಜರಿಯಾಗಿ ತಯಾರಿ ಆರಂಭಿಸಿದ್ದಾರೆ ಪವನ್ ಕಲ್ಯಾಣ್. ಹೋದಲ್ಲೆಲ್ಲ ಆಡಳಿತ ಪಕ್ಷವನ್ನು ಏರಿದ ದನಿಯಲ್ಲಿ ಟೀಕಿಸುತ್ತಿರುವ ಪವನ್ ಕಲ್ಯಾಣ್, ಪ್ರಚಾರಕ್ಕೂ ಅಣಿಯಾಗಿದ್ದು, ಅದಕ್ಕಾಗಿ ವಿಶೇಷ ವಾಹನವೊಂದನ್ನು ಖರೀದಿಸಿದ್ದಾರೆ.

  ವಾಹನದ ಹೆಸರೇನು?

  ವಾಹನದ ಹೆಸರೇನು?

  ಚುನಾವಣೆ ಪ್ರಚಾರಕ್ಕೆಂದೇ ವಿಶೇಷವಾಗಿ ವಾಹನವನ್ನು ತಯಾರು ಮಾಡಲಾಗಿದ್ದು, ಈ ಭರ್ಜರಿ ವಾಹನವನ್ನು ಖರೀದಿಸಿ ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಫೈ ಮಾಡಿಸಿಕೊಂಡಿದ್ದಾರೆ ಪವನ್ ಕಲ್ಯಾಣ್. ಈ ವಿಶೇಷ ವಾಹನಕ್ಕೆ 'ವರಾಹಿ' ಎಂದು ಪವನ್ ಹೆಸರಿಟ್ಟಿದ್ದು, ಇದೇ ವಾಹನದಲ್ಲಿ ಆಂಧ್ರ ಪ್ರದೇಶದಾದ್ಯಂತ ಸಂಚರಿಸಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.

  ದೈತ್ಯಾಕಾರದ ವಾಹನ

  ದೈತ್ಯಾಕಾರದ ವಾಹನ

  ವಾಹನವು ಭಾರಿ ದೈತ್ಯಾಕಾರದಲ್ಲಿದ್ದು, ವಾಹನದ ಸುತ್ತಾ ದೊಡ್ಡ-ದೊಡ್ಡ ಲೈಟ್‌ಗಳನ್ನು ಹಾಕಲಾಗಿದೆ. ವಾಹನದ ಮೇಲೆ ಕಬ್ಬಿಣದ ತಾತ್ಕಾಲಿಕ ವೇದಿಕೆ ಮಾದರಿಯ ಸೆಟ್‌ ಅಪ್ ಸಹ ಇದೆ. ವಾಹನಕ್ಕೆ ಸ್ಪೀಕರ್ ಸಹ ಅಳವಡಿಸಲಾಗಿದೆ. ವಾಹನ ಏರಲು, ಇಳಿಯಲು ಪ್ರತ್ಯೇಕ ಮೆಟ್ಟಿಲುಗಳ ಮಾದರಿ ವ್ಯವಸ್ಥೆ ಇದೆ. ವಾಹನಕ್ಕೆ ಮಿಲಿಟರಿಯ ಹಸಿರು ಬಣ್ಣ ಹಚ್ಚಲಾಗಿದೆ. ವಾಹನದ ಕಿಟಕಿಗಳಿಗೆ ಗ್ರಿಲ್‌ಗಳನ್ನು ಕಲ್ಲೆಸೆತದಂಥಹಾ ಅವಘಡಗಳಿಂದ ಭದ್ರತೆ ನೀಡಲಾಗಿದೆ.

  ವಾಹನದ ಸುತ್ತಲೂ ಕ್ಯಾಮೆರಾ

  ವಾಹನದ ಸುತ್ತಲೂ ಕ್ಯಾಮೆರಾ

  ವಾಹದ ಸುತ್ತಲೂ ಕ್ಯಾಮೆರಾ ಸಹ ಅಳವಡಿಸಲಾಗಿದ್ದು, ಡ್ರೈವರ್ ಸೇರಿದಂತೆ ವಾಹನದ ಹಿಂಬದಿ ಕೂತವರು ಸಹ ವಾಹನದ ಮುಂದೆ ಹಿಂದೆ ಏನು ನಡೆಯುತ್ತಿದೆ ಎಂಬುದನ್ನು ನೋಡುವ ವ್ಯವಸ್ಥೆ ಇರಲಿದೆ. ವಾಹನದ ಒಳಗೆ ಟಿವಿ, ಸೋಫಾ, ಮೀಟಿಂಗ್‌ ಮಾಡಲು ಅನುಕೂಲಕರವಾಗುವ ಸಲಕರಣೆ, ಬೆಡ್, ಟಾಯ್ಕೆಟ್, ಮೇಕಪ್‌ ರೂಂ, ಎಸಿ ವ್ಯವಸ್ಥೆ, ಅಂತರ್ಜಾಲ ಸಂಪರ್ಕ ಇನ್ನಿತರೆ ಸೌಕರ್ಯಗಳ ಲಭ್ಯತೆ ಇದೆ.

  ವಾಹನದ ಬೆಲೆ ಎಷ್ಟು?

  ವಾಹನದ ಬೆಲೆ ಎಷ್ಟು?

  ಭಾರಿ ದುಬಾರಿಯಾದ ಈ ವಾಹನಕ್ಕೆ ಸುಮಾರು 6 ಕೋಟಿ ಹಣವನ್ನು ಪವನ್ ಕಲ್ಯಾಣ್ ವ್ಯಯಿಸಿದ್ದಾರೆ ಎನ್ನಲಾಗುತ್ತಿದೆ. ಈ ವಾಸಹ ಒಂದು ದೊಡ್ಡ ಟೆಂಪೋದಷ್ಟು ದೈತ್ಯಾಕಾರದಲ್ಲಿದೆ. ಕೆಲವು ತಿಂಗಳ ಹಿಂದೆ ಎಂಟು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರುಗಳನ್ನು ಸಹ ಪವನ್ ಕಲ್ಯಾಣ್ ಖರೀದಿಸಿದ್ದರು. ಚುನಾವಣೆಗೆ ಪವನ್ ಕಲ್ಯಾಣ್ ಅದ್ಧೂರಿಯಾಗಿಯೇ ತಯಾರಾಗುತ್ತಿದ್ದಾರೆ. ಹೊಸದಾಗಿ ಪಕ್ಷ ಕಟ್ಟಿರುವ ಪವನ್ ಕಲ್ಯಾಣ್‌ಗೆ ಗೆಲುವು ಅಷ್ಟು ಸುಲಭವೇನಲ್ಲ. ಆದರೆ ಆಂಧ್ರ ರಾಜಕೀಯದ ಮೇಲೆ ಪ್ರಭಾವ ಬೀರಲು ಈ ಚುನಾವಣೆ ಪವನ್‌ಗೆ ನೆರವಾಗಲಿದೆ.

  English summary
  Actor turned politician Pawan Kalyan purchased luxury and costly caravan for upcoming Andhra Pradesh assembly election.
  Thursday, December 8, 2022, 14:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X