For Quick Alerts
  ALLOW NOTIFICATIONS  
  For Daily Alerts

  ದೇವಾಲಯಗಳ ಬಗ್ಗೆ ಪವನ್ ಕಲ್ಯಾಣ್ 2ನೇ ಪತ್ನಿ ಹೇಳಿಕೆ ವಿಡಿಯೋ ವೈರಲ್

  |

  ತೆಲುಗಿನ ಖ್ಯಾತ ನಟ, ರಾಜಕಾರಣಿ ಪವನ್ ಕಲ್ಯಾಣ್‌ಗೆ ಮೂವರು ಪತ್ನಿಯರು. ನಂದಿನಿ, ರೇಣು ದೇಸಾಯಿ, ಅನ್ನಾ ಲೆಜ್ನೇವಾ. ಮೊದಲ ಇಬ್ಬರು ಪತ್ನಿಯರಿಗೆ ವಿಚ್ಛೇಧನ ನೀಡಿರುವ ಪವನ್ ಪ್ರಸ್ತುತ ಅನ್ನಾ ಲೆಜ್ನೇವಾ ಜೊತೆ ದಾಂಪತ್ಯದಲ್ಲಿದ್ದಾರೆ.

  ಮೊದಲಿಬ್ಬರು ಮಾಜಿ ಪತ್ನಿಯರಲ್ಲಿ ರೇಣು ದೇಸಾಯಿ ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ಜೀವನದಲ್ಲಿಯೂ ಸಕ್ರಿಯರಾಗಿದ್ದಾರೆ. ರೇಣು ದೇಸಾಯಿ ಅವರು ಸಂದರ್ಶನವೊಂದರಲ್ಲಿ ದೇವಾಲಯಗಳ ಬಗ್ಗೆ ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

  ಐ-ಡ್ರೀಮ್ ಯೂಟ್ಯೂಬ್ ಚಾನೆಲ್‌ಗಾಗಿ ರೇಡಿಯೋ ಜಾಕಿ, ಪತ್ರಕರ್ತೆ ಸ್ವಪ್ನಾ ಅವರು ರೇಣು ದೇಸಾಯಿ ಅವರನ್ನು ಸಂದರ್ಶನ ಮಾಡಿದ್ದಾರೆ. ಸಂದರ್ಶನ ಇನ್ನೂ ಪ್ರಸಾರವಾಗಿಲ್ಲ, ಆದರೆ ಸಂದರ್ಶನದ ವಿಡಿಯೋ ತುಣುಕೊಂದನ್ನು ಸ್ವಪ್ನಾ ಹಂಚಿಕೊಂಡಿದ್ದು ಆ ವಿಡಿಯೋ ತುಣುಕಿನಲ್ಲಿ ದೇವಸ್ಥಾನಗಳ ಬಗ್ಗೆ ರೇಣು ದೇಸಾಯಿ ಮಾತನಾಡಿದ್ದಾರೆ.

  ಭಾರತವನ್ನು ಜಾತ್ಯಾತೀತ ರಾಷ್ಟ್ರ ಎಂದು ಹೇಗೆ ಕರೆಯುವುದು?: ರೇಣು ದೇಸಾಯಿ

  ಭಾರತವನ್ನು ಜಾತ್ಯಾತೀತ ರಾಷ್ಟ್ರ ಎಂದು ಹೇಗೆ ಕರೆಯುವುದು?: ರೇಣು ದೇಸಾಯಿ

  ಸಂದರ್ಶಕಿ ಸ್ವಪ್ನಾ, 'ಅಷ್ಟೊಂದು ಕರಾರುವಕ್ಕಾಗಿ, ಸಂಪ್ರದಾಯಬದ್ಧವಾಗಿ ಕಟ್ಟಿದ ದೇವಸ್ಥಾನಗಳು ಇಂದು ಕೇವಲ ಪ್ರವಾಸಿ ಕೇಂದ್ರಗಳಾಗಿವೆ' ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರೇಣು ದೇಸಾಯಿ, 'ಮಸೀದಿಗಳು ಸರ್ಕಾರದ ಅಧೀನದಲ್ಲಿಲ್ಲ. ಚರ್ಚ್‌ಗಳು ಸರ್ಕಾರದ ಅಧೀನದಲ್ಲಿಲ್ಲ. ಕೇವಲ ದೇವಸ್ಥಾನಗಳು ಮಾತ್ರವೇ ಸರ್ಕಾರದ ಅಧೀನದಲ್ಲಿವೆ. ಆದರೂ ಭಾರತವನ್ನು ಜಾತ್ಯಾತೀತ ದೇಶ ಎನ್ನಲಾಗುತ್ತದೆ, ಹೇಗೆ?' ಎಂದು ಪ್ರಶ್ನಿಸಿದ್ದಾರೆ.

  ದೇವಾಲಯಗಳು ಸ್ವಾತಂತ್ರ್ಯಗೊಳ್ಳಬೇಕು: ರೇಣು ದೇಸಾಯಿ

  ದೇವಾಲಯಗಳು ಸ್ವಾತಂತ್ರ್ಯಗೊಳ್ಳಬೇಕು: ರೇಣು ದೇಸಾಯಿ

  ಮುಂದುವರೆದು, 'ಹಾಗೆಂದು, ಮಸೀದಿ ಮತ್ತು ಚರ್ಚ್‌ಗಳು ಸರ್ಕಾರದ ಅಧೀನಕ್ಕೆ ಬರಬೇಕು ಎಂದು ನಾನು ಹೇಳುತ್ತಿಲ್ಲ. ಬದಲಿಗೆ ದೇವಾಲಯಗಳು ಸರ್ಕಾರದ ಅಧೀನದಿಂದ ಹೊರಬಂದು ಸ್ವಾತಂತ್ರ್ಯಗೊಳ್ಳಬೇಕು' ಎಂದಿದ್ದಾರೆ ರೇಣು ದೇಸಾಯಿ.

  ಭಾರಿ ವೈರಲ್ ಆಗಿದೆ ರೇಣು ದೇಸಾಯಿ ವಿಡಿಯೋ

  ಭಾರಿ ವೈರಲ್ ಆಗಿದೆ ರೇಣು ದೇಸಾಯಿ ವಿಡಿಯೋ

  ರೇಣು ದೇಸಾಯಿ ಅವರ ಈ ವಿಡಿಯೋ ಭಾರಿ ವೈರಲ್ ಆಗಿದೆ. ಹಲವರು ರೇಣು ದಾಸಾಯಿ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ರೇಣು ದೇಸಾಯಿ ಹೇಳಿಕೆಯನ್ನು ವಿಮರ್ಶಿಸಿ ಕಮೆಂಟ್ ಮಾಡಿದ್ದಾರೆ. ಹಲವರು ಧರ್ಮದ ಹಿಂದಿನ ರಾಜಕೀಯದ ಚರ್ಚೆ ಮಾಡಿದ್ದಾರೆ.

  ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಟಗರು ಪುಟ್ಟಿ | Manvitha Kamath | Filmibeat Kannada
  2011 ರಲ್ಲಿ ವಿಚ್ಛೇಧನ ಪಡೆದ ರೇಣು-ಪವನ್

  2011 ರಲ್ಲಿ ವಿಚ್ಛೇಧನ ಪಡೆದ ರೇಣು-ಪವನ್

  ರೇಣು ದೇಸಾಯಿ ಪವನ್ ಕಲ್ಯಾಣ್ ಅವರ ಎರಡನೇ ಪತ್ನಿ. ಮೊದಲ ಬಾರಿಗೆ ಪವನ್ ಕಲ್ಯಾಣ್ ಜೊತೆ 'ಬದ್ರಿ' ಸಿನಿಮಾದಲ್ಲಿ ನಟಿಸಿದರು. ಆ ನಂತರ ಈ ಇಬ್ಬರೂ ಆಪ್ತವಾದರು. 2004 ರಲ್ಲಿ ಈ ಇಬ್ಬರಿಗೆ ಮಗುವೊಂದು ಜನಿಸಿತು. 2009 ರಲ್ಲಿ ಇಬ್ಬರೂ ವಿವಾಹವಾದರು. 2010 ಹೆಣ್ಣುಮಗು ಜನನವಾಯಿತು. 2011 ರಲ್ಲಿ ಇಬ್ಬರೂ ವಿಚ್ಛೇಧನ ಪಡೆದರು. ಇದೀಗ ರೇಣು ದೇಸಾಯಿ ಅವರು ಮತ್ತೊಂದು ಮದುವೆ ಆಗುವುದರಲ್ಲಿದ್ದಾರೆ.

  English summary
  Pawan Kalyan's ex wife Renu Desai talks about temple, masjid, Church. She asks how can we say India is a secular country.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X