Don't Miss!
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Sports
Asia Cup 2023: ಪಾಕ್ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅಯ್ಯಪ್ಪನುಂ ಕೋಶಿಯುಂ' ರೀಮೇಕ್‌ಗೆ ಪವನ್ ಕಲ್ಯಾಣ್ ಪಡೆಯುತ್ತಿದ್ದಾರೆ ಭಾರಿ ಮೊತ್ತ
ಹಿಂದಿಯ ಪಿಂಕ್ ಸಿನಿಮಾ ರೀಮೇಕ್ 'ವಕೀಲ್ ಸಾಬ್' ನಲ್ಲಿ ನಟಿಸುತ್ತಿರುವ ಪವನ್ ಕಲ್ಯಾಣ್, ಅದರ ನಂತರ ಮತ್ತೊಂದು ರೀಮೇಕ್ ಸಿನಿಮಾಕ್ಕೆ ಓಕೆ ಹೇಳಿದ್ದಾರೆ.
ಮಲಯಾಳಂ ನ ಸೂಪರ್ ಹಿಟ್ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ಅನ್ನು ತೆಲುಗಿನಲ್ಲಿ ರೀಮೇಕ್ ಮಾಡಲಾಗುತ್ತಿದ್ದು, ಮಲಯಾಳಂ ನಲ್ಲಿ ಬಿಜು ಮೆನನ್ ನಟಿಸಿದ್ದ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸಲಿದ್ದಾರೆ.
ವಿಮರ್ಶಿಕರಿಂದಲೂ ಶಭಾಷ್ ಎನಿಸಿಕೊಂಡು ಬಾಕ್ಸ್‌ಆಫೀಸ್‌ನಲ್ಲಿಯೂ ಸಖತ್ ಗಳಿಕೆ ಮಾಡಿದ 'ಅಯ್ಯಪ್ಪನುಂ ಕೋಶಿಯುಂ' ತೆಲುಗಿನಲ್ಲಿಯೂ ಪಕ್ಕಾ ಹಿಟ್ ಎನ್ನಲಾಗುತ್ತಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಬಿಜು ಮೆನನ್ ನಟಿಸಿದ್ದ ಪೊಲೀಸ್ ಅಧಿಕಾರಿ ಪಾತ್ರ ಪವನ್ ಕಲ್ಯಾಣ್ ಗೆ 'ಟೈಲರ್ ಮೇಡ್' ಪಾತ್ರದಂತಿದೆ. ಪವನ್ ಎದುರು ರಾಣಾ ದಗ್ಗುಬಾಟಿ ಸಹ ನಟಿಸುತ್ತಿದ್ದಾರೆ.

ಭಾರಿ ಸಂಭಾವನೆ ಪಡೆಯುತ್ತಿರುವ ಪವನ್ ಕಲ್ಯಾಣ್
ಇನ್ನು ಈ ಸಿನಿಮಾಕ್ಕೆ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಪವನ್ ಕಲ್ಯಾಣ್. ಈ ಸಿನಿಮಾಕ್ಕಾಗಿ ಬರೋಬ್ಬರಿ 50 ಕೋಟಿ ರುಪಾಯಿ ಸಂಭಾವನೆ ನೀಡಲಾಗುತ್ತಿದೆ ಪವನ್ ಕಲ್ಯಾಣ್ ಗೆ. ಒಪ್ಪಂದಕ್ಕೆ ಈಗಾಗಲೇ ಸಹಿ ಬಿದ್ದಿದೆ ಎಂದು ವರದಿ ಮಾಡಿವೆ ತೆಲುಗು ಪತ್ರಿಕೆಗಳು.

ರಾಣಾ ದಗ್ಗುಬಾಟಿಗೆ ಎಷ್ಟು ಸಂಭಾವನೆ
ಇನ್ನು ಪವನ್ ಕಲ್ಯಾಣ್ ಅಷ್ಟೆ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ರಾಣಾ ದಗ್ಗುಬಾಟಿಗೆ ಈ ಸಿನಿಮಾಕ್ಕೆ 5 ಕೋಟಿ ಹಣ ಸಿಗುತ್ತಿದೆಯಂತೆ. ರಾಣಾ ದಗ್ಗುಬಾಟಿಗೆ ಈ ಸಂಭಾವನೆ ಕಡಿಮೆಯೆಂದೇ ಹೇಳಲಾಗುತ್ತಿದೆ. ಆದರೆ ನಟ ಪವನ್ ರ ಸ್ಟಾರ್ ವ್ಯಾಲ್ಯೂ ರಾಣಾ ಗೆ ಹೋಲಿಸಿದರೆ ಬಹಳವಿದೆ.

30 ದಿನದ ಡೇಟ್ಸ್ ಅಷ್ಟೇ ನೀಡಲಾಗಿದೆ
ಅಯ್ಯಪ್ಪನುಂ ಕೋಶಿಯುಂ ರೀಮೇಕ್‌ಗೆ ಪವನ್ ಕಲ್ಯಾಣ್ ನೀಡಿರುವುದು ಕೇವಲ 30 ದಿವಸದ ಡೇಟ್ಸ್ ಅಷ್ಟೇ. ಮೂವತ್ತು ದಿನಗಳ ಒಳಗಾಗಿ ತಮ್ಮ ಭಾಗದ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಡುವುದಾಗಿ ಹೇಳಿದ್ದಾರೆ ಪವನ್. ರಾಣಾ ದಗ್ಗುಬಾಟಿ ಸಹ 30 ದಿನದ ಡೇಟ್ಸ್ ಅಷ್ಟೇ ಕೊಟ್ಟಿದ್ದಾರಂತೆ.
Recommended Video

ಜನವರಿಯಿಂದ ಚಿತ್ರೀಕರಣ ಪ್ರಾರಂಭ
ಜನವರಿಯಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಸಿನಿಮಾದ ನಿರ್ದೇಶನವನ್ನು ಸಾಗರ್ ಕೆ ಚಂದ್ರ ಮಾಡಲಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸಿತಾರಾ ಎಂಟರ್ಟೈನ್‌ಮೆಂಟ್ ಸಿನಿಮಾದ ಮುಹೂರ್ತ ಎರಡು ದಿನದ ಹಿಂದಷ್ಟೆ ಮುಗಿದಿದ್ದು, ನಾಯಕಿಯರ ಆಯ್ಕೆ ಇನ್ನಷ್ಟೆ ಆಗಬೇಕಿದೆ.