For Quick Alerts
  ALLOW NOTIFICATIONS  
  For Daily Alerts

  ತೆಲುಗು ಸಿನಿಮಾಗಳ ಬಗ್ಗೆ ವಿವಾದಾತ್ಮಕ ಹೇಳಿಕೆ: ಸ್ಪಷ್ಟನೆ ನೀಡಿದ ಪೂಜಾ ಹೆಗ್ಡೆ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಪೂಜಾ ಹೆಗ್ಡೆ, ಇತ್ತೀಚಿಗೆ ಸಂದರ್ಶನವೊಂದರಲ್ಲಿ ತೆಲುಗು ಸಿನಿಮಾರಂಗದ ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

  ತೆಲುಗು ಸಿನಿಮಾಗಳಲ್ಲಿ ಮಹಿಳೆಯ ಪಾತ್ರವನ್ನು ವಸ್ತುವಿನ ಹಾಗೆ ತೋರಿಸಲಾಗುತ್ತೆ ಎನ್ನುವುದನ್ನು ಒಪ್ಪಿಕೊಂಡಿರುವ ಪೂಜಾ, 'ತೆಲುಗು ಸಿನಿಮಾಗಳು ಹೆಚ್ಚಾಗಿ ಹೊಕ್ಕುಳ ಮತ್ತು ಸೊಂಟದ ಗೀಳನ್ನು ಹೊಂದಿದೆ' ಎಂದು ಹೇಳಿದ್ದಾರೆ. ಪೂಜಾ ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

  ಇಟಲಿ ಮೀಡಿಯಾಗಳಲ್ಲಿ ಪ್ರಭಾಸ್‌ ಹವಾ: ರಾಧೆ-ಶ್ಯಾಮ್ ಚಿತ್ರೀಕರಣದ ಬಗ್ಗೆ ಸುದ್ದಿ

  ತೆಲುಗು ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಪೂಜಾ, ತೆಲುಗು ಚಿತ್ರರಂಗದ ಬಗ್ಗೆಯೇ ಮಾತನಾಡಿ ತೆಲುಗು ಸಿನಿಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೂಜಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ವಿವಾದ ದೊಡ್ಡದಾಡುತ್ತಿದ್ದಂತೆ ಪೂಜಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

  ಪೂಜಾ ಹೆಗ್ಡೆ ಸ್ಪಷ್ಟನೆ

  ಪೂಜಾ ಹೆಗ್ಡೆ ಸ್ಪಷ್ಟನೆ

  ಸಂಪೂರ್ಣ ಸಂದರ್ಶನವನ್ನು ದಯವಿಟ್ಟು ನೋಡಿ ಎಂದು ಪೂಜಾ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. 'ಇತ್ತೀಚಿನ ಸಂದರ್ಶನದಲ್ಲಿ ನಾನು ಹೇಳಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಹೇಳಿದ ವಿಷಯವನ್ನು ತಿರುಚಬಹುದು ಆದರೆ ತೆಲುಗು ಸಿನಿಮಾರಂಗದ ಮೇಲೆ ಇರುವ ಪ್ರೀತಿಯನ್ನು ತಿರುಚಲು ಸಾಧ್ಯವಿಲ್ಲ.' ಎಂದಿದ್ದಾರೆ.

  ಸಮಂತಾ-ಅನುಷ್ಕಾ ಶೆಟ್ಟಿಯನ್ನು ಹಿಂದಿಕ್ಕಿ ತೆಲುಗಿನ ಟಾಪ್ ನಟಿಯಾದ ಪೂಜಾ ಹೆಗ್ಡೆ

  ತೆಲುಗು ಸಿನಿಮಾರಂಗಕ್ಕೆ ಋಣಿಯಾಗಿದ್ದೀನಿ

  ತೆಲುಗು ಸಿನಿಮಾರಂಗಕ್ಕೆ ಋಣಿಯಾಗಿದ್ದೀನಿ

  'ತೆಲುಗು ಸಿನಿಮಾರಂಗ ನನಗೆ ತುಂಬಾ ಮಹತ್ವದಾಗಿದೆ. ನನ್ನ ಚಿತ್ರಗಳನ್ನು ಪ್ರೀತಿಸುವ ನನ್ನ ಅಭಿಮಾನಿಗಳಿಗೆ ಇದು ತಿಳಿದಿದೆ. ನಾನು ತೆಲುಗು ಸಿನಿಮಾರಂಗದ ಬಗ್ಗೆ ಎಂದಿಗೂ ತಪ್ಪಾಗಿ ಹೇಳುವುದಿಲ್ಲ. ಎಂದು ಬರೆದುಕೊಂಡಿದ್ದಾರೆ.

  ಸಂದರ್ಶನದಲ್ಲಿ ಪೂಜಾ ಹೇಳಿದ್ದೇನು?

  ಸಂದರ್ಶನದಲ್ಲಿ ಪೂಜಾ ಹೇಳಿದ್ದೇನು?

  ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಪೂಜಾಗೆ ನಿರೂಪಕರು, ತೆಲುಗು ಸಿನಿಮಾಗಳಲ್ಲಿ ಸ್ತ್ರಿ ಪಾತ್ರವನ್ನು ವಸ್ತುವಿನ ಹಾಗೆ ತೋರಿಸಲಾಗುತ್ತೆ, ಇದನ್ನು ಹೇಗೆ ನಿಭಾಯಿಸುತ್ತೀರಿ? ಎಂದು ಕೇಳಿದ ಪ್ರಶ್ನೆಗೆ ಪೂಜಾ, ದಕ್ಷಿಣ ಭಾರತೀಯ ಸಿನಿಮಾಗಳು ಹೆಚ್ಚಾಗಿ ಹೊಕ್ಕುಳ ಮತ್ತು ಸೊಂಟವನ್ನೇ ಹೆಚ್ಚಾಗಿ ತೋರಿಸುತ್ತಾರೆ. ಅಲಾ ವೈಕುಂಠಪುರಮುಲೋ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪಾತ್ರ ನನ್ನ ಕಾಲುಗಳ ಗೀಳಿಗೆ ಒಳಗಾಗಿರುತ್ತಾರೆ.'

  ರಾಧೆ-ಶ್ಯಾಂ ಟೀಸರ್: ರಗಡ್‌ ಲುಕ್‌ ನಿಂದ ಲವರ್ ಬಾಯ್ ಲುಕ್ ಕಡೆಗೆ ಪ್ರಭಾಸ್

  ಸಿನಿಮಾದಲ್ಲಿ ಕೆಲವು ದೃಶ್ಯಗಳನ್ನು ಸೇರಿಸಲಾಯಿತು

  ಸಿನಿಮಾದಲ್ಲಿ ಕೆಲವು ದೃಶ್ಯಗಳನ್ನು ಸೇರಿಸಲಾಯಿತು

  'ಈ ದೃಶ್ಯ ಹೇಗೆ ಬಿಂಬಿತವಾಗುತ್ತೆ ಎಂದು ನಿರ್ದೇಶಕ ತ್ರಿವಿಕ್ರಮ್ ಅವರಿಗೆ ಹೇಳಿದ ಬಳಿಕ ಸ್ವಲ್ಪ ಬದಲಾವಣೆ ಮಾಡಲಾಯಿತು. ನಾಯಕ ಹೀಗೆ ಮಾಡುವುದರಿಂದ ಆತನಿಗೆ ಶಿಕ್ಷೆಯಾಗುವ ದೃಶ್ಯಗಳನ್ನು ಸೇರಿಸಲಾಯಿತು. ಪ್ರತಿಯೊಬ್ಬರಿಗೂ ಅದನ್ನು ಗ್ರಹಿಸಲು ಸಾಧ್ಯವಾಗಿಲ್ಲ. ಹೆಣ್ಣನ್ನು ವಸ್ತುವಿನ ಹಾಗೆ ತೋರಿಸುವುದು ಸರಿಯಲ್ಲ' ಎಂದು ಹೇಳಿದ್ದಾರೆ.

  ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಅಗ್ನಿಸಾಕ್ಷಿ ಖ್ಯಾತಿಯ Priyanka | Filmibeat Kannada
  ಪೂಜಾ ಹೆಗ್ಡೆ ಬಳಿ ಇರುವ ಸಿನಿಮಾಗಳು

  ಪೂಜಾ ಹೆಗ್ಡೆ ಬಳಿ ಇರುವ ಸಿನಿಮಾಗಳು

  ಪೂಜಾ ಹೆಗ್ಡೆ ಸದ್ಯ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ದಪ್ಪಟ್ಟಾಗಿದೆ. ಇತ್ತೀಚಿಗಷ್ಟೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಸಿನಿಮಾ ಜೊತೆಗೆ ಪೂಜಾ, ಅಖಿಲ್ ಅಕ್ಕಿನೇನಿ ಅಭಿನಯದ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾಗಳ ಜೊತೆಗೆ ಬಾಲಿವುಡ್ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ.

  English summary
  Actress Pooja Hegde clarification about recent statement about Telugu industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X