Don't Miss!
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Automobiles
ಬಹುನೀರಿಕ್ಷಿತ 'ಅಲ್ಟ್ರಾವೈಲೆಟ್ F77' ಬೈಕ್ ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರಭಾಸ್ ಫಾಲೋ ಮಾಡುತ್ತಿರುವ ನಟಿಯರ ಪಟ್ಟಿಯಲ್ಲಿದ್ದಾರೆ 'ಗುಸಗುಸು ಪ್ರೇಯಸಿ'; ಅನುಷ್ಕಾ ಶೆಟ್ಟಿ ಇಲ್ಲ!
ಪ್ರಭಾಸ್ ವಿವಾಹ ಯಾವಾಗ, ಪ್ರಭಾಸ್ ಕೈ ಹಿಡಿಯಲಿರುವ ನಟಿ ಯಾರು, ಪ್ರಭಾಸ್ ಮದುವೆಯಾಗುವ ಹುಡುಗಿ ಈ ನಟಿಯಂತೆ ಎಂಬ ಸುದ್ದಿಗಳು ಈ ಹಿಂದಿನಿಂದಲೂ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಿದಾಡಿವೆ ಹಾಗೂ ಭಾರೀ ಚರ್ಚೆಗೀಡಾಗಿವೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಭಾಸ್ ಯಾರನ್ನು ವಿವಾಹವಾಗ್ತಾರೆ ಎಂದು ಚರ್ಚೆಯಾಗಿರುವಷ್ಟು ಉಳಿದ ಯಾವುದೇ ನಟ ಹಾಗೂ ನಟಿಯ ವಿವಾಹದ ಬಗ್ಗೆ ಚರ್ಚೆ ನಡೆದಿಲ್ಲ ಎನ್ನಬಹುದು.
ಈ ಹಿಂದಿನಿದಲೂ ಪ್ರಭಾಸ್ ವಿವಾಹ ವಿಷಯಕ್ಕೆ ಹಲವು ನಟಿಯರ ಹೆಸರುಗಳು ತಳುಹಿ ಹಾಕಿಕೊಂಡಿದ್ದು, ಹೆಚ್ಚಾಗಿ ಹಾಗೂ ಸತತವಾಗಿ ಚಾಲ್ತಿಯಲ್ಲಿರುವ ಹೆಸರು ಅನುಷ್ಕಾ ಶೆಟ್ಟಿಯದ್ದು. ಹೌದು, ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಸತತವಾಗಿ ಹರಿದಾಡಿದೆ. ಕೆಲವೊಮ್ಮೆ ಈ ಇಬ್ನರೂ ವಿವಾಹವಾಗುವ ದಿನವೂ ಸಹ ಬಹಿರಂಗಗೊಂಡಿದೆ ಎಂಬ ಸುದ್ದಿಗಳೂ ಸಹ ವೈರಲ್ ಆಗಿದ್ದವು.
ಆದರೆ ಈ ಯಾವ ಸುದ್ದಿಗಳೂ ಸಹ ನಿಜವಾಗಲೇ ಇಲ್ಲ. ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಈ ಪ್ರಶ್ನೆಗಳು ಎದುರಾದಾಗ ಇಬ್ಬರಲ್ಲಿ ಯಾರೂ ಸಹ ಉತ್ತರ ನೀಡಲು ಮುಂದಾಗಿರಲಿಲ್ಲ. ಈ ಮೂಲಕ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಹಲವು ದಿನಗಳಿಂದ ಜೋಡಿ ಹಕ್ಕಿಗಳು ಎಂದೇ ಕರೆಸಿಕೊಳ್ಳುತ್ತಿದ್ದು, ಇದೀಗ ಅನುಷ್ಕಾ ಬದಲಾಗಿ ಬೇರೆ ನಟಿಯ ಹೆಸರು ಈ ವಿಚಾರದಲ್ಲಿ ಕೇಳಿಬರತೊಡಗಿದೆ. ಹೌದು, ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ಜತೆ ನಾಯಕಿಯಾಗಿ ನಟಿಸುತ್ತಿರುವ ಕೃತಿ ಸನೂನ್ ಹೆಸರು ಸದ್ಯ ಪ್ರಭಾಸ್ ಪ್ರೇಯಸಿ ಎಂದು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ.

ಕೃತಿ ಹಿಂಬಾಲಕ ಪ್ರಭಾಸ್!
ಪ್ರಭಾಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು ಐವರು ನಟಿಯರನ್ನು ಹಿಂಬಾಲಿಸುತ್ತಿದ್ದಾರೆ. ಈ ಐವರೂ ನಟಿಯರೂ ಸಹ ಪ್ರಭಾಸ್ ಜತೆ ಇತ್ತೀಚೆಗೆ ತೆರೆ ಹಂಚಿಕೊಂಡವರೇ. ಸಾಹೋ ಚಿತ್ರದಲ್ಲಿ ಪ್ರಭಾಸ್ ಜತೆ ನಟಿಸಿದ್ದ ಶ್ರದ್ಧಾ ಕಪೂರ್, ಪ್ರಾಜೆಕ್ಟ್ ಕೆ ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ನಟಿಸುತ್ತಿರುವ ದೀಪಿಕಾ ಪಡುಕೋಣೆ, ಸಲಾರ್ ಚಿತ್ರದಲ್ಲಿ ನಾಯಕಿಯಾಗಿರುವ ಶೃತಿ ಹಾಸನ್, ರಾಧೆ ಶ್ಯಾಮ್ ನಟಿ ಪೂಜಾ ಹೆಗ್ಡೆ ಹಾಗೂ ಆದಿಪುರುಷ್ ನಾಯಕಿ ಕೃತಿ ಸನೂನ್ ಅವರನ್ನು ಪ್ರಭಾಸ್ ಹಿಂಬಾಲಿಸುತ್ತಿದ್ದಾರೆ. ಈ ಪೈಕಿ ಪ್ರಭಾಸ್ ಕೃತಿ ಸನೂನ್ ಅವರನ್ನು ಹಿಂಬಾಲಿಸುತ್ತಿರುವ ವಿಷಯ ತುಸು ಇಂಟರೆಸ್ಟಿಂಗ್ ಎನಿಸಿದೆ.

ಪಟ್ಟಿಯಲ್ಲಿಲ್ಲ ಅನುಷ್ಕಾ!
ಇನ್ನು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರ ನಡುವೆ ಲವ್ ಇದೆ ಎಂಬ ಸುದ್ದಿ ಅತಿದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಅಷ್ಟೇ ಅಲ್ಲದೇ ನಂತರದ ದಿನಗಳಲ್ಲಿ ಇಬ್ಬರ ಕುರಿತಾಗಿ ಬ್ರೇಕ್ ಅಪ್ ಸುದ್ದಿಯೂ ಕೂಡ ಹರಿದಾಡಿತ್ತು. ಆದರೆ ಈ ಎರಡೂ ವಿಚಾರಗಳ ಬಗ್ಗೆ ಇಬ್ಬರಲ್ಲಿ ಯಾರೂ ಬಾಯಿ ಬಿಟ್ಟಿರಲಿಲ್ಲ. ಇನ್ನು ಇದೀಗ ಪ್ರಭಾಸ್ ಇನ್ಸ್ಟಾಗ್ರಾಮ್‌ನಲ್ಲಿ ಹಿಂಬಾಲಿಸುತ್ತಿರುವ ಪಟ್ಟಿಯಲ್ಲಿ ಅನುಷ್ಕಾ ಶೆಟ್ಟಿ ಇಲ್ಲದಿರುವುದು ಅನುಮಾನ ಮೂಡಿಸಿದೆ. ಇಬ್ಬರೂ ಸಹ ಪರಸ್ಪರ ಪ್ರೀತಿಯಲ್ಲಿರಬೇಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಹಿಂಬಾಲಿಸಬೇಕಲ್ವ ಎಂದು ಕೆಲ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

ಪ್ರಭಾಸ್ ಫಾಲೋ ಮಾಡ್ತಿದ್ದಾರೆ ಅನುಷ್ಕಾ
ಇತ್ತ ಅನುಷ್ಕಾ ಶೆಟ್ಟಿಯನ್ನು ಪ್ರಭಾಸ್ ಫಾಲೋ ಮಾಡದೇ ಇದ್ದರೂ ಸಹ ಪ್ರಭಾಸ್ ಅವರನ್ನು ಅನುಷ್ಕಾ ಶೆಟ್ಟಿ ಮಾತ್ರ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫಾಲೋ ಮಾಡುತ್ತಿದ್ದಾರೆ. ಈ ಕುರಿತಾಗಿಯೂ ಸಹ ಕೆಲ ವಿವಾದ ಉಂಟಾಗಿದ್ದು, ಅನುಷ್ಕಾ ಶೆಟ್ಟಿ ಪ್ರಭಾಸ್ ಅವರನ್ನು ಹಿಂಬಾಲಿಸುತ್ತಿರುವಾಗ ಪ್ರಭಾಸ್ ಏಕೆ ಅನುಷ್ಕಾ ಅವರನ್ನು ಹಿಂಬಾಲಿಸುತ್ತಿಲ್ಲ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳತೊಡಗಿದ್ದಾರೆ. ಈ ಮೂಲಕ ಇಬ್ಬರ ನಡುವೆ ಪ್ರೀತಿ ಪ್ರೇಮ ಎಂದು ಹೇಳಲಾಗುತ್ತಿದ್ದ ಮಾತುಗಳೆಲ್ಲಾ ಕೇವಲ ಗಾಳಿಸುದ್ದಿ ಇರಬಹುದಾ ಎಂಬ ಅನುಮಾನವೂ ಮೂಡಿದೆ..