For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್21, ಆದಿಪುರುಷ್ ಯಾವುದಾಗಲಿದೆ ಪ್ರಭಾಸ್ ಮುಂದಿನ ಸಿನಿಮಾ?

  |

  ರಾಧೆಶ್ಯಾಮ್ ಸಿನಿಮಾದ ಚಿತ್ರೀಕರಣ ಮುಗಿಸಿ ಇಟಲಿಯಿಂದ ವಾಪಸ್ಸಾಗಿದ್ದಾರೆ ನಟ ಪ್ರಭಾಸ್. ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು, ಕೆಲವೇ ದಿನಗಳಲ್ಲಿ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ ಪ್ರಭಾಸ್.

  ಆದರೆ ಪ್ರಭಾಸ್ ಮುಂದೆ ಈಗ ಎರಡು ಬಿಗ್ ಬಜೆಟ್ ಸಿನಿಮಾಗಳಿವೆ. ಎರಡರಲ್ಲಿ ಯಾವ ಸಿನಿಮಾ ಮೊದಲು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

  ಪ್ರಭಾಸ್ 'ಆದಿಪುರುಷ್' ಸಿನಿಮಾದ ಪೋಸ್ಟರ್ ವೈರಲ್

  ಭಾರಿ ದೊಡ್ಡ ಬಜೆಟ್‌ನ ಬಹುಭಾಷೆಗಳಲ್ಲಿ ಒಟ್ಟಿಗೆ ನಿರ್ಮಿಸುವ ಗುರಿ ಹೊಂದಿರುವ 'ಆದಿಪುರುಷ್' ಹಾಗೂ ದೀಪಿಕಾ ಪಡುಕೋಣೆ,ಅಮಿತಾಬ್ ಬಚ್ಚನ್ ಅಂಥಹಾ ದೊಡ್ಡ ನಟರಿರುವ 'ಪ್ರಭಾಸ್ 21' ಸಿನಿಮಾ ಇವೆರಡರಲ್ಲಿ ಒಂದು ಸಿನಿಮಾವನ್ನು ಪ್ರಭಾಸ್ ಆರಿಸಬೇಕಿದೆ. ಮೂಲಗಳ ಪ್ರಕಾರ ಈಗಾಗಲೇ ಪ್ರಭಾಸ್, ತಾವು ನಟಿಸಲಿರುವ ಮುಂದಿನ ಸಿನಿಮಾವನ್ನು ಆರಿಸಿ ಆಗಿದೆಯಂತೆ.

  ಆದಿಪುರುಷ್ ಸಿನಿಮಾದಲ್ಲಿ ಮೊದಲು ನಟನೆ

  ಆದಿಪುರುಷ್ ಸಿನಿಮಾದಲ್ಲಿ ಮೊದಲು ನಟನೆ

  ದೀಪಿಕಾ ನಾಯಕಿಯಾಗಿ ನಟಿಸುತ್ತಿರುವ ನಾಗಚೈತನ್ಯ ನಿರ್ದೇಶಿಸುತ್ತಿರುವ ಪ್ರಭಾಸ್ 21 ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅದನ್ನು ಸುಳ್ಳು ಮಾಡಿ ಆದಿಪುರುಷ್ ಸಿನಿಮಾವನ್ನು ಮೊದಲು ಕೈಗೆತ್ತಿಕೊಂಡಿದ್ದಾರಂತೆ ಪ್ರಭಾಸ್.

  ಅಬ್ಬಾ.! ಪ್ರಭಾಸ್ 'ರಾಧೆ ಶ್ಯಾಮ್' ಚಿತ್ರದ ಕ್ಲೈಮ್ಯಾಕ್ಸ್ ಗೆ ಇಷ್ಟೊಂದು ಕೋಟಿ ಖರ್ಚು ಮಾಡುತ್ತಿದ್ದಾರಾ?

  ಡಯಟ್ ಆರಂಭಿಸಿರುವ ಪ್ರಭಾಸ್

  ಡಯಟ್ ಆರಂಭಿಸಿರುವ ಪ್ರಭಾಸ್

  ಆದಿಪುರುಷ್ ಸಿನಿಮಾ ನಿರ್ದೇಶಿಸಲಿರುವ ಓಮ್ ರಾವತ್ ಅನ್ನು ಈಗಾಗಲೇ ಪ್ರಭಾಸ್ ಭೇಟಿಯಾಗಿದ್ದು, ರಾಮನ ಪಾತ್ರಕ್ಕಾಗಿ ದೇಹ ಆಕಾರ ಪಡೆದುಕೊಳ್ಳಲು ಈಗಾಗಲೇ ಡಯಟ್ ಪ್ರಾರಂಭಿಸಿದ್ದಾರಂತೆ. ಮುಂದಿನ ಜನವರಿ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

  ಪ್ರಭಾಸ್ 21 ಗೆ ಇನ್ನಷ್ಟು ಸಮಯ ಬೇಕಿದೆ

  ಪ್ರಭಾಸ್ 21 ಗೆ ಇನ್ನಷ್ಟು ಸಮಯ ಬೇಕಿದೆ

  ಪ್ರಭಾಸ್ 21 ಸಿನಿಮಾದ ನಾಯಕಿಯಾದ ದೀಪಿಕಾ ಪಡುಕೋಣೆ ಸಹ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಡೇಟ್ಸ್‌ಗಳು ಸನಿಹದಲ್ಲಿಲ್ಲ, ಹಾಗೂ ಆ ಸಿನಿಮಾ ಚಿತ್ರೀಕರಣ ಸಂಪೂರ್ಣ ಸೆಟ್‌ಗಳಲ್ಲಿಯೇ ಆಗಬೇಕಿರುವ ಕಾರಣ ಯೋಜನೆಗೆ ಸಾಕಷ್ಟು ಕಾಲಾವಕಾಶ ಬೇಕಿದೆ ಎನ್ನಲಾಗಿದೆ.

  ಸಿನಿಮಾದಲ್ಲಿ ಇರುವುದು ಎಲ್ಲವೂ ಸತ್ಯ ಅಲ್ಲ ಅಂದ್ರು ರಿಯಲ್ ಲೈಫ್ ಹೀರೊ ಗೋಪಿನಾಥ್ | Filmibeat Kannada
  400 ಕೋಟಿ ಬಜೆಟ್‌ನ ಸಿನಿಮಾ

  400 ಕೋಟಿ ಬಜೆಟ್‌ನ ಸಿನಿಮಾ

  ಪ್ರಭಾಸ್ ಅವರ ಆದಿಪುರುಷ್ ಸಿನಿಮಾ ರಾಮಾಯಣ ಕತೆ ಆಧರಿಸಿದ ಸಿನಿಮಾ ಆಗಿದ್ದು, ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೀತೆಯಾಗಿ ಕೀರ್ತಿ ಸುರೇಶ್ ನಟಿಸುವ ಸಾಧ್ಯತೆ ಇದೆ. ರಾವಣನಾಗಿ ಸೈಫ್ ಅಲಿ ಖಾನ್ ನಟಿಸಲಿದ್ದಾರೆ ಎನ್ನಲಾಗಿದೆ. ಸಿನಿಮಾದ ಬಜೆಟ್ ಬರೋಬ್ಬರಿ 400 ಕೋಟಿಯಂತೆ. ಸಿನಿಮಾದ ನಿರ್ಮಾಪಕ ಟಿ-ಸೀರೀಸ್‌ನ ಭೂಷಣ್ ಕುಮಾರ್

  English summary
  Actor Prabhas will start shooting for Adhi Purush movie in January. Movie directing by Om Raut and producer is Bhushan Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X