For Quick Alerts
  ALLOW NOTIFICATIONS  
  For Daily Alerts

  "ಪವನ್ ಕಲ್ಯಾಣ್ ಜೊತೆ ನಟಿಸೋ ಅವಕಾಶ ಸಿಕ್ರು ನಟಿಸಲ್ಲ": ಯುವ ನಟಿ ಓಪನ್ ಟಾಕ್

  |

  ಟಾಲಿವುಡ್ ಪವರ್‌ ಸ್ಟಾರ್‌ ಪವನ್ ಕಲ್ಯಾಣ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಪವನ್ ಸಿನಿಮಾಗಳಯ ನೂರಾರು ಕೋಟಿ ಬ್ಯುಸಿನೆಸ್ ಮಾಡುತ್ತದೆ. ಪವರ್ ಸ್ಟಾರ್ ಜೊತೆ ನಟಿಸೋ ಅವಕಾಶ ಸಿಕ್ಕರೆ ನಟಿಯರು ಬೇಡ ಎನ್ನುವುದಿಲ್ಲ. ಆದರೆ ಯುವ ನಟಿ ಪ್ರಿಯಾಂಕ ಜವಾಲ್ಕರ್ ಮಾತ್ರ ನಾನು ಪವನ್ ಕಲ್ಯಾಣ್ ಜೊತೆ ನಟಿಸುವುದಿಲ್ಲ ಎಂದಿದ್ದಾರೆ.

  ತೆಲುಗು ಚಿತ್ರರಂಗದಲ್ಲಿ ಪ್ರಿಯಾಂಕ ಜವಾಲ್ಕರ್ ಬ್ಯುಸಿಯಾಗಿದ್ದಾರೆ. ಯುವ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ಶಾರ್ಟ್ ಫಿಲ್ಮ್ಸ್ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ 5 ವರ್ಷಗಳ ಹಿಂದೆ 'ಕಲವರಂ ಆಯೆ' ಎನ್ನುವ ಚಿತ್ರದಲ್ಲಿ ನಟಿಸಿದ್ದರು. ನಂತರ ವಿಜಯ್ ದೇವರಕೊಂಡ ಜೋಡಿಯಾಗಿ 'ಟ್ಯಾಕ್ಸಿವಾಲ' ಚಿತ್ರದಲ್ಲೂ ಮಿಂಚಿದ್ದರು. ಆ ಸಿನಿಮಾ ಒಂದು ರೇಂಜ್‌ಗೆ ಹೆಸರು ತಂದುಕೊಟ್ಟಿತ್ತು. ಅಲ್ಲಿಂದ ಮುಂದೆ 'ತಿಮ್ಮರಸು' ಎನ್ನುವ ಮತ್ತೊಂದು ಚಿತ್ರದಲ್ಲಿ ನಟಿಸಿ ಗೆದ್ದಿದ್ದರು. 'ಎಸ್ ಆರ್ ಕಲ್ಯಾಣ ಮಂಟಪಂ', 'ಗಮನಂ' ಸಿನಿಮಾಗಳಲ್ಲೂ ಪ್ರಿಯಾಂಕ ಮಿಂಚಿದ್ದರು.

  ಜನವರಿ 10 ಮಹೇಶ್ & ಪವನ್ ಇಬ್ಬರ ಅಭಿಮಾನಿಗಳಿಗೂ ಬೇಸರದ ದಿನಜನವರಿ 10 ಮಹೇಶ್ & ಪವನ್ ಇಬ್ಬರ ಅಭಿಮಾನಿಗಳಿಗೂ ಬೇಸರದ ದಿನ

  ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಪ್ರಿಯಾಂಕ ಜವಾಲ್ಕರ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಪವನ್ ಕಲ್ಯಾಣ್ ಜೊತೆ ನಟಿಸುವ ಆಸೆ ಇಲ್ಲ. ಒಂದು ವೇಳೆ ಅವಕಾಶ ಸಿಕ್ಕಿದರೂ ನಟಿಸುವುದಿಲ್ಲ ಎಂದು ಹೇಳಿದ್ದಾರೆ.

  ನಾನು ಪವನ್ ಕಲ್ಯಾಣ್ ಅಭಿಮಾನಿ

  ನಾನು ಪವನ್ ಕಲ್ಯಾಣ್ ಅಭಿಮಾನಿ

  ನಟಿ ಪ್ರಿಯಾಂಕ ಜವಾಲ್ಕರ್ ಸಂದರ್ಶನದಲ್ಲಿ ಪವನ್ ಕಲ್ಯಾಣ್ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. "ನಾನು ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ. ಆದರೆ ಅವರೊಟ್ಟಿಗೆ ನಟಿಸುವ ಆಸೆ ಮಾತ್ರ ನನಗೆ ಇಲ್ಲ. ಒಂದು ವೇಳೆ ಅಂತಹ ಸುವರ್ಣಾವಕಾಶ ಬಂದರೆ ನೋ ಎಂದು ಹೇಳುತ್ತೇನೆ. ಒಬ್ಬ ಅಭಿಮಾನಿಯಾಗಿ ಪವನ್ ಕಲ್ಯಾಣ್ ಅವರನ್ನು ದೂರದಿಂದ ನೋಡಲು ಇಷ್ಟಪಡುತ್ತೇನೆ. ಆದರೆ ನಟಿಸುವುದಿಲ್ಲ ದೂರದ ಮಾತು" ಎಂದಿದ್ದಾರೆ.

  ಪವನ್ ಜೊತೆ ನಟಿಸುವುದಿಲ್ಲ

  ಪವನ್ ಜೊತೆ ನಟಿಸುವುದಿಲ್ಲ

  "ಪವನ್ ಕಲ್ಯಾಣ್ ಅವರನ್ನು ನೋಡಿ ಸಂಭ್ರಮಿಸುತ್ತೇನೆ. ಅದಕ್ಕಿಂತ ಹೆಚ್ಚು ಏನು ಕೋರಿಕೊಳ್ಳುವುದಿಲ್ಲ. ಅವರ ಜೊತೆ ನಟಿಸುವ ಆಸೆ ನನಗೆ ಇಲ್ಲ. ಒಂದು ವೇಳೆ ಅಂತಹ ಅವಕಾಶ ಸಿಕ್ಕಿದ್ರು ನಟಿಸುವುದಿಲ್ಲ. ನಟಿಸೋಕೆ ನನ್ನ ಸಾಧ್ಯವಾಗುವುದಿಲ್ಲ. ಆದರೆ ಪವರ್ ಸ್ಟಾರ್ ಅಂದರೆ ಪಂಚಪ್ರಾಣ. ಅವರನ್ನು ನೋಡುತ್ತಾ ಬೆಳೆದವಳು ನಾನು, ಅವರ ಸಿನಿಮಾಗಳನ್ನು ಅದೆಷ್ಟು ಬಾರಿ ನೋಡಿದ್ದೇನೆ ಎನ್ನುವುದರ ಲೆಕ್ಕವಿಲ್ಲ"

  'ಖುಷಿ' ಡೈಲಾಗ್ಸ್ ಪಟ ಪಟ ಹೇಳ್ತೀನಿ

  'ಖುಷಿ' ಡೈಲಾಗ್ಸ್ ಪಟ ಪಟ ಹೇಳ್ತೀನಿ

  "ಪವನ್ ಕಲ್ಯಾಣ್ ನಟನೆಯ 'ತಮ್ಮುಡು' ಚಿತ್ರವನ್ನು 20 ಬಾರಿ ನೋಡಿದ್ದೇನೆ. ಇನ್ನು ಎವರ್‌ಗ್ರೀನ್ 'ಖುಷಿ' ಚಿತ್ರವನ್ನು ಅದೆಷ್ಟು ಬಾರಿ ನೋಡಿದ್ದೇನೆ ಎನ್ನುವುದೇ ಗೊತ್ತಿಲ್ಲ. ಆ ಚಿತ್ರದ ಪ್ರತಿ ಡೈಲಾಗ್ ನನ್ನ ಬಾಯಲ್ಲಿದೆ. ಅಷ್ಟು ದೊಡ್ಡ ಸ್ಟಾರ್‌ಡಮ್ ಇದ್ದರೂ ಬಹಳ ಸಿಂಪಲ್ ಆಗಿ ಇರುತ್ತಾರೆ. ಅದೇ ಬಹಳ ಇಷ್ಟ" ಎಂದು ಪ್ರಿಯಾಂಕ ಜವಾಲ್ಕರ್ ಹೇಳಿದ್ದಾರೆ.

  3 ಸಿನಿಮಾಗಳಲ್ಲಿ ಪವನ್ ನಟನೆ

  3 ಸಿನಿಮಾಗಳಲ್ಲಿ ಪವನ್ ನಟನೆ

  ಇನ್ನು ಪವನ್ ಕಲ್ಯಾಣ್ ವಿಚಾರಕ್ಕೆ ಬಂದರೆ ಒಂದ್ಕಡೆ ಜನಸೇನಾ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದರೂ ಮತ್ತೊಂದು ಕಡೆ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. 'ಹರಿಹರ ವೀರ ಮಲ್ಲು' ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. 'ಉಸ್ತಾದ್ ಭಗತ್ ಸಿಂಗ್' ಎನ್ನುವ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಚಿತ್ರಕ್ಕೆ ಹರೀಶ್ ಶಂಕರ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನು 'ಸಾಹೋ' ಸಿನಿಮಾ ಖ್ಯಾತಿಯ ಸುಜಿತ್ ನಿರ್ದೇಶನದ 'ಓಜಿ' ಎನ್ನುವ ಮತ್ತೊಂದು ಚಿತ್ರಕ್ಕೂ ಪವರ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  English summary
  Priyanka Jawalkar Intresting Comments on her favorite Actor Pawan Kalyan. She made her acting debut in 2017 with the film Kala Varam Aaye. know more.
  Tuesday, January 17, 2023, 23:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X