For Quick Alerts
  ALLOW NOTIFICATIONS  
  For Daily Alerts

  ಸೀರೆಯುಟ್ಟು ವೈರಲ್ ಆದ ಅಪ್ಪು ಸಿನಿಮಾದ ಹೀರೊಯಿನ್ ಅದಾ ಶರ್ಮಾ!

  By ಫಿಲ್ಮಿಬೀಟ್ ಡೆಸ್ಕ್
  |

  ಅದಾ ಶರ್ಮಾ ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ದಕ್ಷಿಣ ಭಾರತದಲ್ಲಿ ಅದಾ ಶರ್ಮಾ ತುಂಬಾನೇ ಚಿರಪರಿಚಿತ. ಟಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾ ಮಿಂಚಿದ್ದಾರೆ. ಅದರಲ್ಲೂ ಪುರಿ ಜಗನ್ನಾಥ್ ನಿರ್ದೇಶಿಸಿ, ನಿತಿನ್ ನಟಿಸಿದ್ದ 'ಹಾರ್ಟ್ ಅಟ್ಯಾಕ್' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶ ಮಾಡಿದ್ದರು.

  ಇದೇ ನಟಿ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದರು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ರಣವಿಕ್ರಮ' ಸಿನಿಮಾದಲ್ಲಿ ಜೋಡಿಯಾಗಿದ್ದರು. ಹೀಗಾಗಿ ಸಿನಿಪ್ರಿಯರಿಗೆ ಅದಾ ಶರ್ಮಾ ಹೊಸ ಫೇಸ್ ಏನಲ್ಲ.

  ಮೂರು ವರ್ಷ ಹಿಂದೆ ಅದಾ ಶರ್ಮಾ ನಟಿಸಿದ ಸಿನಿಮಾಗಳು ರಿಲೀಸ್ ಆಗಿದ್ದವು. ಅಲ್ಲಿಂದ ಬೇರೆ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಸದ್ಯ 'ಕೇರಳ ಸ್ಟೋರಿಸ್'ನಲ್ಲಿ ಈ ಗ್ಲಾಮರಸ್ ಬ್ಯೂಟಿ ನಟಿಸುತ್ತಿದ್ದಾರೆ. ಹಾಗಂತ ಸಿನಿಮಾ ರಿಲೀಸ್ ಆಗಿಲ್ಲ ಸುಮ್ಮನೆ ಅಂತೂ ಕೂತಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅದಾ ಶರ್ಮಾ ಸದಾ ಬ್ಯುಸಿಯಾಗೇ ಇರುತ್ತಿದ್ದರು.

  ಈಗ ಬಿಳಿ ಸೀರೆಯುಟ್ಟು ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಆಗಾಗ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಅದಾ ಶರ್ಮಾ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಸದ್ದು ಮಾಡುತ್ತಿದೆ.

  ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದರೂ, ಟಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್-ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಸನ್ ಆಫ್ ಸತ್ಯಮೂರ್ತಿ' ಹಾಗೇ 'ಸುಬ್ರಹ್ಮಣ್ಯಂ ಫಾರ್ ಸೇಲ್', 'ಕಲ್ಕಿ' ಸೇರಿದಂತೆ ಹಲವು ಕ್ರೇಜಿ ಸಿನಿಮಾಗಳಲ್ಲಿ ನಟಿಸಿದ್ದರು. ಅವು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು.

  Puneeth Rajkumar Rana Vikrama Actress Adah Sharma White Saree Photo Viral

  ಟಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದ್ದರೂ, ಯಶಸ್ಸು ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಟಾಲಿವುಡ್‌ ಸಿನಿಮಾಗಳಲ್ಲೂ ಅವಕಾಶಗಳು ಸಿಕ್ಕಿರಲಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆಕ್ಟಿವ್ ಆಗಿದ್ದರು. ಕೆಲವು ವರ್ಷಗಳಿಂದ ಹಾಟ್ ಹಾಗೂ ಗ್ಲಾಮರಸ್ ಫೋಟೊಗಳನ್ನೇ ಶೇರ್ ಮಾಡುತ್ತಿದ್ದಾರೆ. ಈಗ ಬಿಳಿ ಸೀರೆಯಲ್ಲಿ ಪೋಸ್ ಕೊಟ್ಟ ಫೋಟೊ ಸದ್ದು ಮಾಡೋಕೆ ಶುರು ಮಾಡಿದೆ.

  English summary
  Puneeth Rajkumar Rana Vikrama Actress Adah Sharma White Saree Photo Viral, Know More.
  Thursday, November 10, 2022, 23:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X