For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ಹಣವನ್ನು ನಿರ್ಮಾಪಕರಿಗೆ ವಾಪಸ್ ಕೊಟ್ಟ ವಿಜಯ್ ದೇವರಕೊಂಡ!

  |

  ಕಡಿಮೆ ಅವಧಿಯಲ್ಲಿ ತೆಲುಗಿನಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿರುವ ವಿಜಯ್ ದೇವರಕೊಂಡ ಈಗ ಭಾರತೀಯ ಚಿತ್ರರಂಗದ ಸ್ಟಾರ್ ಆಗುವತ್ತ ಗಮನ ಹರಿಸಿದ್ದಾರೆ.

  ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರಚಾರವನ್ನು ಭರ್ಜರಿಯಾಗಿ ಮಾಡಿದ್ದಾರೆ ವಿಜಯ್ ಹಾಗೂ ಚಿತ್ರತಂಡ. ವಿಜಯ್ ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಮುಂಬೈ, ಪುಣೆ, ಗುಜರಾತ್‌ ಗಳಲ್ಲಿಯೂ ವಿಜಯ್ ದೇವರಕೊಂಡರನ್ನು ಕಾಣಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.

  ಹಲವು ನಗರಗಳನ್ನು ಸುತ್ತಿಹಾಕಿದ ಬಳಿಕ ಇದೀಗ ಹೈದರಾಬಾದ್‌ನಲ್ಲಿ 'ಲೈಗರ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಸಿನಿಮಾದ ನಿರ್ದೇಶಕ ಪುರಿ ಜಗನ್ನಾಥ್, ವಿಜಯ್ ದೇವರಕೊಂಡ ಬಗ್ಗೆ ಕೆಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

  ಅರ್ಜುನ್ ರೆಡ್ಡಿ ನೋಡಿ ವಿಜಯ್ ಇಷ್ಟವಾದ: ಪುರಿ ಜಗನ್ನಾಥ್

  ಅರ್ಜುನ್ ರೆಡ್ಡಿ ನೋಡಿ ವಿಜಯ್ ಇಷ್ಟವಾದ: ಪುರಿ ಜಗನ್ನಾಥ್

  ''ನನ್ನ ಪತ್ನಿ, ನನ್ನನ್ನು ಬೈದು 'ಅರ್ಜುನ್ ರೆಡ್ಡಿ' ಸಿನಿಮಾ ನೋಡುವಂತೆ ಹೇಳಿದರು. ನಾನು ಆ ಸಿನಿಮಾ ತರಿಸಿಕೊಂಡು ನೋಡಲು ಕೂತೆ. ಕೇವಲ ಒಂದು ಗಂಟೆ ಸಿನಿಮಾ ನೋಡಿದ ಬಳಿಕ ನಾನು ಆಫ್ ಮಾಡಿ ಯೋಚನೆಗೆ ಕುಳಿತೆ. ನನಗೆ ಕತೆ ಮುಂದೆ ಏನಾಗುತ್ತದೆ ಎಂಬುದು ಮುಖ್ಯವಾಗಲಿಲ್ಲ. ಆ ಹುಡುಗ ವಿಜಯ್ ದೇವರಕೊಂಡ ಅದೆಷ್ಟು ನಿಜಾಯಿತಿಯಿಂದ ನಟಿಸಿದ್ದಾನೆ ಎಂದು ಯೋಚಿಸಲು ಶುರು ಮಾಡಿದೆ. ವಿಜಯ್ ದೇವರಕೊಂಡ ನಟನೆ ಮಾತ್ರವಲ್ಲ ವ್ಯಕ್ತಿತ್ವದಲ್ಲೂ ನಿಜಾಯಿತಿ ಇದೆ'' ಎಂದರು ನಿರ್ದೇಶಕ ಪುರಿ ಜಗನ್ನಾಥ್.

  ಕೊಟ್ಟ ಸಂಭಾವನೆ ವಾಪಸ್ ಕೊಟ್ಟಿದ್ದಾನೆ: ಪುರಿ ಜಗನ್ನಾಥ್

  ಕೊಟ್ಟ ಸಂಭಾವನೆ ವಾಪಸ್ ಕೊಟ್ಟಿದ್ದಾನೆ: ಪುರಿ ಜಗನ್ನಾಥ್

  ವಿಜಯ್ ದೇವರಕೊಂಡಗೆ ಇರುವ ನಿಜಾಯಿತಿ ಬಗ್ಗೆ ಮಾತನಾಡುತ್ತಾ, ಆತ ತನಗೆ ಕೊಟ್ಟ ಹಣವನ್ನು ಸಹ ವಾಪಸ್ ಕೊಟ್ಟುಬಿಡುತ್ತಾನೆ. ಸಿನಿಮಾದ ನಿರ್ಮಾಪಕನೂ ಆಗಿರುವ ನಾನು ಆಗ್ಗಾಗ್ಗೆ ವಿಜಯ್ ದೇವರಕೊಂಡಗೆ ಸಂಭಾವನೆ ರೂಪದಲ್ಲಿ ಒಂದು ಕೋಟಿ, ಎರಡು ಕೋಟಿ ಚೆಕ್‌ಗಳನ್ನು ಕೊಡುತ್ತಿದ್ದೆ. ಆದರೆ ನಾವು ಬೇರೆಯವರ ಸಾಲ ತೀರಿಸಬೇಕಾಗಿರುವುದು ತಿಳಿದು ತನಗೆ ಕೊಟ್ಟ ಹಣವನ್ನು ಸಹ ಆತ ವಾಪಸ್ ನೀಡುತ್ತಿದ್ದ. ಎಲ್ಲ ಮುಗಿದ ಮೇಲೆ ನನಗೆ ಕೊಡಿ ಪರ್ವಾಗಿಲ್ಲ ಎಂದು ಹೇಳುತ್ತಿದ್ದ. ಈ ಕಾಲದಲ್ಲಿ ಯಾರು ಹೀಗೆ ಮಾಡುತ್ತಾರೆ'' ಎಂದು ಪ್ರಶಂಸಿದ್ದಾರೆ ಪುರಿ.

  ಇಷ್ಟು ನಿಜಾಯಿತಿಯುಳ್ಳ ನಟನ ನೋಡಿಲ್ಲ: ಪುರಿ

  ಇಷ್ಟು ನಿಜಾಯಿತಿಯುಳ್ಳ ನಟನ ನೋಡಿಲ್ಲ: ಪುರಿ

  'ವಿಜಯ್ ದೇವರಕೊಂಡ ಅಷ್ಟು ನಿಜಾಯಿತಿಯುಳ್ಳ ನಟರನ್ನು ನಾನು ನೋಡಿಲ್ಲ. ಆತ ಕೋಪಿಸಿಕೊಂಡರೂ, ಪ್ರೀತಿಸಿದರೂ, ಅತ್ತರು ಎಲ್ಲದರಲ್ಲಿಯೂ ನಿಜಾಯಿತಿ ಕಾಣಿಸುತ್ತದೆ. ಆತನದ್ದು ನಿಜವಾದ ಎಮೋಶನ್ ಎನಿಸುತ್ತದೆ. ನಾವು ಎಂಥಹುದೇ ಸೀನ್ ಬರೆದರು ನಟನ ನಟನೆ ಕೃತಕವಾಗಿದ್ದರೆ ಅದು ಪ್ರೇಕ್ಷಕರನ್ನು ತಲುಪುವಿದಲ್ಲ. ಆದರೆ ಆತನ ಎಮೋಶನ್ ನಿಜವಾಗಿದ್ದರೆ ಅದು ಥಟ್ಟನೆ ಪ್ರೇಕ್ಷಕನನ್ನು ತಲುಪುತ್ತದೆ. ಇದೇ ಕಾರಣಕ್ಕೆ ವಿಜಯ್ ದೇವರಕೊಂಡ ಇಷ್ಟು ಬೇಗ ಇಷ್ಟು ಜನರನ್ನು ಕನೆಕ್ಟ್ ಆಗಲು ಸಾಧ್ಯವಾಗಿದೆ'' ಎಂದಿದ್ದಾರೆ.

  ಆಗಸ್ಟ್ 25 ರಂದು ಸಿನಿಮಾ ಬಿಡುಗಡೆ

  ಆಗಸ್ಟ್ 25 ರಂದು ಸಿನಿಮಾ ಬಿಡುಗಡೆ

  'ಲೈಗರ್' ಸಿನಿಮಾದ ಟ್ರೈಲರ್, ಹಾಗೂ ಕೆಲವು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಭಾರಿ ವೈರಲ್ ಆಗಿವೆ. ಸಿನಿಮಾದಲ್ಲಿ ವಿಜಯ್ ದೆವರಕೊಂಡ ಸ್ಲಂ ಹುಡುಗನಾಗಿ ಹಾಗೂ ಫೈಟರ್ ಆಗಿ ನಟಿಸಿದ್ದಾರೆ. ಭರ್ಜರಿ ಆಕ್ಷನ್ ದೃಶ್ಯಗಳು ಸಿನಿಮಾದಲ್ಲಿವೆ. ರಮ್ಯಕೃಷ್ಣ, ವಿಜಯ್ ದೇವರಕೊಂಡ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ಫೈಟರ್ ಮೈಕಲ್ ಜಾಕ್ಸನ್ ಸಹ ಸಿನಿಮಾದಲ್ಲಿದ್ದಾರೆ. ಪುರಿ ಜಗನ್ನಾತ್ ನಿರ್ದೇಶಿಸಿರುವ ಈ ಸಿನಿಮಾಕ್ಕೆ ಕರಣ್ ಜೋಹರ್ ಸಹ ಬಂಡವಾಳ ಹೂಡಿದ್ದಾರೆ. ಸಿನಿಮಾವು ಆಗಸ್ಟ್ 25 ರಂದು ಸಿನಿಮಾ ಬಿಡುಗಡೆ ಆಗಲಿದೆ.

  English summary
  Director Puri Jagannath said Vijay Devarkonda returned his remuneration cheque. His all emotions were true.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X