For Quick Alerts
  ALLOW NOTIFICATIONS  
  For Daily Alerts

  'ಪುಷ್ಪ' ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ರಹಸ್ಯ ಮದುವೆಯಾಗಿರೋದು ನಿಜವೇ?

  |

  'ಪುಷ್ಪ' ಸಿನಿಮಾ ಹಾಡುಗಳು ಇಂದಿಗೂ ಜನಪ್ರಿಯ. ಹಾಗಂತ ಇದೊಂದೇ ಸಿನಿಮಾ ಅಲ್ಲ ಟಾಲಿವುಡ್‌ನಲ್ಲಿ ಸೂಪರ್‌ ಹಿಟ್ ಸಾಂಗ್‌ಗಳನ್ನು ನೀಡಿರೋ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್. ಇವರ ಸಿನಿಮಾದ ಹಾಡುಗಳು ಎಷ್ಟು ಫೇಮಸ್ ಆಗಿಯೋ, ಅಷ್ಟೇ ವೈಕ್ತಿಕ ಜೀವನ ಕೂಡ ಫೇಮಸ್ ಆಗಿವೆ.

  ದೇವಿ ಶ್ರೀ ಪ್ರಸಾದ್ ಟಾಲಿವುಡ್ ಕಂಡ ಜೀನಿಯಸ್ ಮ್ಯೂಸಿಕ್ ಡೈರೆಕ್ಟರ್ ಅನ್ನೋದರಲ್ಲಿ ಅನುಮಾನವಿಲ್ಲ. ಇವರ ಸಂಗೀತದಿಂದಲೇ ಅದೆಷ್ಟೋ ಸಿನಿಮಾಗಳು ಗೆದ್ದಿರೋ ಉದಾಹರಣೆಗಳು ಇವೆ. ಇಂತಹ ಸಿನಿಮಾಗಳ ಸಾಲಿನಲ್ಲಿ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾದ ಹಾಡುಗಳು ಕೂಡ ಸೇರಿವೆ.

  ಸಲ್ಮಾನ್ ಖಾನ್ ಸಿನಿಮಾಗಾಗಿ ಒಂದಾದ ದೇವಿಶ್ರೀ ಪ್ರಸಾದ್, ಯೋ ಯೋ ಹನಿಸಿಂಗ್: ಯಾವುದು ಆ ಸಿನಿಮಾ?ಸಲ್ಮಾನ್ ಖಾನ್ ಸಿನಿಮಾಗಾಗಿ ಒಂದಾದ ದೇವಿಶ್ರೀ ಪ್ರಸಾದ್, ಯೋ ಯೋ ಹನಿಸಿಂಗ್: ಯಾವುದು ಆ ಸಿನಿಮಾ?

  ಡಿಎಸ್‌ಪಿ ಅಂತಲೇ ಜನಪ್ರಿಯರಾಗಿರೋ ದೇವಿ ಶ್ರೀ ಪ್ರಸಾದ್ ರಹಸ್ಯವಾಗಿ ಮದುವೆ ಆಗಿದ್ದಾರೆ ಅನ್ನೋ ಸುದ್ದಿ ಹಲವು ದಿನಗಳಿಂದ ಓಡಾಡುತ್ತಿದೆ. ಅಷ್ಟಕ್ಕೂ ದೇವಿ ಶ್ರೀ ಪ್ರಸಾದ್ ಮದುವೆ ಆಗಿರೋದು ನಿಜವೇ? ಅದೂ ಉದಯೋನ್ಮುಖ ನಟಿಯನ್ನು ವಿವಾಹವಾಗಿದ್ದಾರೆಯೇ? ಟಾಲಿವುಡ್‌ನಲ್ಲಿ ಹರಿದಾಡುತ್ತಿರೋ ಸುದ್ದಿಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ದೇವಿ ಶ್ರೀ ಪ್ರಸಾದ್ ಸೀಕ್ರೆಟ್ ಮ್ಯಾರೇಜ್?

  ದೇವಿ ಶ್ರೀ ಪ್ರಸಾದ್ ಸೀಕ್ರೆಟ್ ಮ್ಯಾರೇಜ್?

  ದೇವಿ ಶ್ರೀ ಪ್ರಸಾದ್ ರಹಸ್ಯವಾಗಿ ಮದುವೆ ಆಗಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಜೋರಾಗಿಯೇ ಓಡಾಡುತ್ತಿದೆ. ಅದು ಇಂದು ನಿನ್ನೆಯದಲ್ಲ. ಹಲವು ದಿನಗಳಿಂದ ಟಾಲಿವುಡ್‌ನ ಉದಯೋನ್ಮುಖ ನಟಿ ಪೂಜಿತಾ ಪೊನ್ನಡ ಎಂಬುವವರನ್ನು ರಹಸ್ಯವಾಗಿ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಳೆದ 5 ವರ್ಷಗಳಿಂದ ಇವರಿಬ್ಬರ ಮದುವೆ ವಿಷಯವೇ ಬೇಜಾನ್ ಸುದ್ದಿಯಾಗುತ್ತಿದೆ. ಆದ್ರೀಗ ನಟಿ ಪೂಜಿತಾ ಪೊನ್ನಡ ತಮ್ಮ ಮದುವೆ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

  KFC ಬ್ರ್ಯಾಂಡ್ ಅಂಬಾಸಿಡರ್ ಅಲ್ಲು ಅರ್ಜುನ್: ಶೂಟಿಂಗ್ ಫೋಟೊ ವೈರಲ್!KFC ಬ್ರ್ಯಾಂಡ್ ಅಂಬಾಸಿಡರ್ ಅಲ್ಲು ಅರ್ಜುನ್: ಶೂಟಿಂಗ್ ಫೋಟೊ ವೈರಲ್!

  ಪೂಜಿತಾ ಪೊನ್ನಡ ಯಾರು?

  ಪೂಜಿತಾ ಪೊನ್ನಡ ಯಾರು?

  ಪೂಜಿತಾ ಪೊನ್ನಡ ಹೆಸರು ಕೇಳಿದರೆ, ಇವರು ಕೊಡಗಿನವರು ಇರಬಹುದೇನೋ ಅಂತ ಅನಿಸಬಹುದು. ಆದರೆ, ಆಂಧ್ರದ ವಿಶಾಖಪಟ್ಟಣಂ ಮೂಲದ ಪೂಜಿತಾ ಎಂಜಿನಿಯರಿಂಗ್ ಮುಗಿಸಿದ್ದಾರೆ. ಇದೂವರೆಗೂ 'ಓಪಿರಿ', 'ರಂಗಸ್ಥಳಂ', 'ಕಲ್ಕಿ', 'ಮಿಸ್ ಇಂಡಿಯಾ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾಸ್ ಮಹಾರಾಜ ರವಿತೇಜ ನಟಿಸುತ್ತಿರುವ 'ರಾವಣಾಸುರ' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಲ್ಲದೆ ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ಹರಿಹರ ವೀರ ಮಲ್ಲು' ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಇವರನ್ನೇ ದೇವಿ ಶ್ರೀ ಪ್ರಸಾದ್ ರಹಸ್ಯವಾಗಿ ವಿವಾಹವಾಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

  ತಳುಕು ಹಾಕೊಂಡ ನಟಿಯರು ಯಾರು?

  ತಳುಕು ಹಾಕೊಂಡ ನಟಿಯರು ಯಾರು?

  ದೇವಿ ಶ್ರೀ ಪ್ರಸಾದ್ ಯಾವ ಹೀರೊಗೂ ಕಮ್ಮಿಯಿಲ್ಲ. ಟಾಲಿವುಡ್ ಹೀರೊಯಿನ್‌ಗಳಿಗೆ ದೇವಿ ಶ್ರೀ ಪ್ರಸಾದ್ ಅಂದ್ರೆ ಬಲು ಇಷ್ಟ. ಅವರ ಟ್ಯೂನ್‌ಗಳಿಗೆ ಫಿದಾ ಆಗಿರೋ ನಟಿಯೇ ಹೆಚ್ಚು. ಅಂದ್ಹಾಗೆ ಈ ಹಿಂದೆ ಕೂಡ ಚಾರ್ಮಿ ಕೌರ್, ಪ್ರಣಿತಾ, ಸೇರಿದಂತೆ ಹಲವು ನಟಿಯರ ಹೆಸರು ಇವರೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಪೂಜಿತಾ ಪೊನ್ನಡರನ್ನು ರಹಸ್ಯವಾಗಿ ವಿವಾಹವಾಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿತ್ತು. ಈ ಸುದ್ದಿಗೆ ಪೂಜಿತಾ ಪೊನ್ನಡ ಪ್ರತಿಕ್ರಿಯೆ ನೀಡಿದ್ದಾರೆ.

  ಏನಂತಾರೆ ಪೂಜಿತಾ ಪೊನ್ನಡ?

  ಏನಂತಾರೆ ಪೂಜಿತಾ ಪೊನ್ನಡ?

  ಇತ್ತೀಚೆಗೆ ಪೂಜಿತಾ ಪೊನ್ನಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ದೇವಿ ಶ್ರೀ ಪ್ರಸಾದ್ ಜೊತೆ ರಹಸ್ಯವಾಗಿ ವಿವಾಹವಾಗಿರುವ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ. ಈ ಸುದ್ದಿಗಳಿಗೆಲ್ಲ ಅರ್ಥವೇ ಇಲ್ಲ. ಯಾವುದೇ ರಿಲೇಷನ್‌ಶಿಪ್‌ನಲ್ಲಿ ಇಲ್ಲ. ಯಾರನ್ನೂ ಮದುವೆನೂ ಆಗಿಲ್ಲ. ಇಂತಹ ಗಾಳಿ ಸುದ್ದಿಗಳೆಲ್ಲ ಹೇಗೆ ಹರಡುತ್ತವೆ ಎಂದು ಅರ್ಥವೇ ಆಗುತ್ತಿಲ್ಲ" ಎಂದು ಮಾಧ್ಯಮಗಳಿಗೆ ಪೂಜಿತಾ ಪೊನ್ನಡ ಪ್ರತಿಕ್ರಿಯಿಸಿದ್ದಾರೆ.

  English summary
  Pushpa Movie Music Director Devi Sri Prasad And Pujitha Ponnada Secret Marriage, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X