For Quick Alerts
  ALLOW NOTIFICATIONS  
  For Daily Alerts

  'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಚಿತ್ರೀಕರಣ ಮುಕ್ತಾಯ; ಇದೇನು ಶಾರ್ಟ್ ಮೂವಿನಾ ಎಂದ ನೆಟ್ಟಿಗರು!

  |

  ಮೊದಲಿಗೆ ರಮ್ಯಾ ಕಮ್‌ಬ್ಯಾಕ್ ಚಿತ್ರ ಎಂದು ಘೋಷಣೆಯಾದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಚಿತ್ರೀಕರಣ 31 ದಿನಗಳಲ್ಲಿ ಮುಕ್ತಾಯಗೊಂಡಿದೆ. ಚಿತ್ರದಲ್ಲಿ ನಟನಾಗಿ ಅಭಿನಯಿಸುತ್ತಿರುವ ರಾಜ್‌ ಬಿ ಶೆಟ್ಟಿ ಅವರೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಕುಟುಂಬ ಸಮೇತ ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿದ್ದ ಸಿರಿ ರವಿಕುಮಾರ್ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

  ಇನ್ನು ಈ ಚಿತ್ರದಲ್ಲಿ ನಟಿಯಾಗಿ ರಮ್ಯಾ ನಟಿಸಲಿದ್ದಾರೆ ಎಂಬ ಪೋಸ್ಟರ್ ಅನ್ನೂ ಸಹ ಬಿಡುಗಡೆಗೊಳಿಸಲಾಗಿತ್ತು. ಅದು ಮಾತ್ರವಲ್ಲದೇ ಆಪಲ್ ಬಾಕ್ಸ್ ಸ್ಟುಡಿಯೋಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದ ನಟಿ ರಮ್ಯಾ ತಮ್ಮ ಹೊಸ ಬ್ಯಾನರ್ ಅಡಿಯಲ್ಲಿ ತಯಾರಾಗಲಿರುವ ಮೊದಲ ಚಿತ್ರ ಇದು ಎಂಬುದನ್ನೂ ಸಹ ಘೋಷಿಸಿದ್ದರು. ಆದರೆ ಕೆಲ ದಿನಗಳ ಬೆನ್ನಲ್ಲೇ ರಮ್ಯಾ ಬದಲು ನಟಿ ಸಿರಿ ರವಿಕುಮಾರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಕೂಡ ಹೊರಬಿತ್ತು.

  ಅದರಂತೆ ಸದ್ಯ ಚಿತ್ರದ ಚಿತ್ರೀಕರಣ ಮುಗಿದ ನಂತರ ಚಿತ್ರತಂಡ ಹಂಚಿಕೊಂಡಿರುವ ಚಿತ್ರದಲ್ಲಿ ರಮ್ಯಾ ಇಲ್ಲದಿದ್ದು, ಸಿರಿ ರವಿಕುಮಾರ್ ಮಾತ್ರ ಕಾಣಿಸಿಕೊಂಡಿದ್ದಾರೆ. ಆದರೆ ಈ ಫೋಟೊವನ್ನು ರಮ್ಯಾ ಒಡೆತನದ ಆಪಲ್ ಬಾಕ್ಸ್ ಸ್ಟುಡಿಯೋಸ್‌ನ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿಯೇ ಹಂಚಿಕೊಳ್ಳಲಾಗಿದ್ದು, ಇದು ಕುತೂಹಲ ಮೂಡಿಸಿದೆ. ರಮ್ಯಾ ಚಿತ್ರದಿಂದ ನಟಿಯಾಗಿ ಮಾತ್ರ ಹೊರನಡೆದಿದ್ದು, ನಿರ್ಮಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

  ಚಿತ್ರತಂಡದ ಈ ಅಪ್‌ಡೇಟ್ ಕಂಡು ಸಿನಿ ರಸಿಕರು ಅಕ್ಷರಶಃ ಆಶ್ಚರ್ಯಕ್ಕೊಳಗಾಗಿದ್ದಾರೆ. ಇಷ್ಟು ಬೇಗ ಚಿತ್ರದ ಚಿತ್ರೀಕರಣವೇ ಮುಗಿದು ಹೋಯಿತಾ, ಸೂಪರ್ ಫಾಸ್ಟ್ ಶೆಟ್ರೇ, ಇದೇನು ಶಾರ್ಟ್ ಫಿಲ್ಮ್ ಶೂಟಿಂಗ್ ಏನಾದ್ರು ಮಾಡಿದ್ರಾ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

  English summary
  Raj B Shetty starrer Swathi Mutthina Male Haniye shooting completed. Read on
  Monday, November 14, 2022, 19:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X