For Quick Alerts
  ALLOW NOTIFICATIONS  
  For Daily Alerts

  ಜಪಾನಿಯರ ಮನಗೆದ್ದ ರಾಮ್‌-ಭೀಮ್ ಬ್ರೊಮ್ಯಾನ್ಸ್: ಹಳೇ ದಾಖಲೆ ಮುರಿದು ನಂಬರ್ ವನ್ ಸ್ಥಾನದತ್ತ RRR ಓಟ!

  |

  ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಜಪಾನ್‌ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಾಧಾರಾಣ ಓಪನಿಂಗ್ ಸಿಕ್ಕರೂ ನಿಧಾನವಾಗಿ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.

  ಮಾರ್ಚ್ 25ಕ್ಕೆ ವಿಶ್ವದಾದ್ಯಂತ ತೆರೆಕಂಡಿದ್ದ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಓಟಿಟಿಯಲ್ಲಿ ಬಂದ ಸಿನಿಮಾ ಹಾಲಿವುಡ್ ಮಂದಿಯನ್ನು ಸೆಳೆದಿತ್ತು. ರಾಜಮೌಳಿ ನಿರ್ದೇಶನ ಹಾಗೂ ರಾಮ್‌ಚರಣ್- ಜ್ಯೂ.ಎನ್‌ಟಿಆರ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳಲ್ಲಿ ಇಬ್ಬರು ನಟಿಸಿ ಗೆದ್ದಿದ್ದರು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಿತ್ತು. ಅಕ್ಟೋಬರ್ 21ಕ್ಕೆ ಸಿನಿಮಾ ಜಪಾನ್‌ನಲ್ಲಿ ರಿಲೀಸ್ ಆಗಿತ್ತು.

  ಮಹೇಶ್ ಬಾಬು ವಿಗ್ ಧರಿಸುತ್ತಾರಾ? ಸೀಕ್ರೆಟ್ ಬಿಚ್ಚಿಟ್ಟ ಪರ್ಸನಲ್ ಮೇಕಪ್‌ಮ್ಯಾನ್!ಮಹೇಶ್ ಬಾಬು ವಿಗ್ ಧರಿಸುತ್ತಾರಾ? ಸೀಕ್ರೆಟ್ ಬಿಚ್ಚಿಟ್ಟ ಪರ್ಸನಲ್ ಮೇಕಪ್‌ಮ್ಯಾನ್!

  ರಾಜಮೌಳಿ, ರಾಮ್‌ಚರಣ್, ಜ್ಯೂ.ಎನ್‌ಟಿಆರ್ ಜಪಾನ್‌ಗೆ ಹೋಗಿ ಪ್ರಮೋಷನ್ ಮಾಡಿ ಬಂದಿದ್ದರು. 34 ದಿನಗಳಿಂದ ಸಿನಿಮಾ ಅಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಮ್‌-ಭೀಮ್ ಬ್ರೋಮ್ಯಾನ್ಸ್ ಜಪಾನಿಯರ ಮನಗೆದ್ದಿದೆ.

   'ಬಾಹುಬಲಿ' ದಾಖಲೆ ಮುರಿದ 'RRR'

  'ಬಾಹುಬಲಿ' ದಾಖಲೆ ಮುರಿದ 'RRR'

  ಹೌದು ಜಪಾನ್‌ನಲ್ಲೂ 'RRR' ಸಿನಿಮಾ ಸಖತ್ ಸದ್ದು ಮಾಡಿದೆ. ಅಂದಾಜು 18 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಜಪಾನ್‌ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. 'ತ್ರೀ ಈಡಿಯಟ್ಸ್', 'ಬಾಹುಬಲಿ' ದಾಖಲೆ ಮುರಿದು ಸಿನಿಮಾ ಎಲ್ಲರ ಹುಬ್ಬೇರಿಸಿದೆ.

   ನಂಬರ್‌ ವನ್ ಸ್ಟಾನಕ್ಕೇರುತ್ತಾ ಚಿತ್ರ?

  ನಂಬರ್‌ ವನ್ ಸ್ಟಾನಕ್ಕೇರುತ್ತಾ ಚಿತ್ರ?

  ಜಪಾನ್‌ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾ ಅಂದರೆ ಅದು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಮುತ್ತು'. 90ರ ದಶಕದಲ್ಲೇ ಈ ಸಿನಿಮಾ ಜಪಾನಿಯರ ಮನಗೆದ್ದು ಸಂಚಲನ ಸೃಷ್ಟಿಸಿತ್ತು. ರಾಜಮೌಳಿ 'RRR' ಸಿನಿಮಾ 'ಮುತ್ತು' ಸಿನಿಮಾ ದಾಖಲೆ ಮುರಿಯುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಕೆಲವರು ಅವತ್ತಿನ ಕಾಲಕ್ಕೆ 'ಮುತ್ತು' ದಾಖಲೆ ಮುಂದೆ 'RRR' ಕಲೆಕ್ಷನ್ ಏನೇನು ಅಲ್ಲ ಎನ್ನುತ್ತಿದ್ದಾರೆ. ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನ ಜಪಾನ್‌ನಲ್ಲಿ 'RRR' ಸಿನಿಮಾ ನೋಡಿದ್ದಾರೆ.

   'RRR' ಸೀಕ್ವೆಲ್ ಪ್ಲ್ಯಾನ್

  'RRR' ಸೀಕ್ವೆಲ್ ಪ್ಲ್ಯಾನ್

  ರಾಜಮೌಳಿ ಸದ್ಯ ಯಾವುದೇ ಹೊಸ ಸಿನಿಮಾ ಕೈಗೆತ್ತಿಕೊಂಡಿಲ್ಲ. 'RRR' ಸಕ್ಸಸ್ ನಂತರ ಅದರ ಸೀಕ್ವೆಲ್ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಈಗಾಗಲೇ ವಿಜಯೇಂದ್ರ ಪ್ರಸಾದ್ ರಾಮ್‌-ಭೀಮ್ ಕಥೆ ಮುಂದುವರೆಸುವ ಕೆಲಸ ಶುರು ಮಾಡಿದ್ದಾರೆ. 'RRR' ಸಿನಿಮಾ ನೋಡಿದವರಿಗೆ ಸೀಕ್ವೆಲ್ ಮಾಡಲು ಹೇಗೆ ಸಾಧ್ಯ ಎನ್ನುವ ಅನುಮಾನ ಮೂಡಿತ್ತು. ಆದರೆ ರಾಜಮೌಳಿ ಮತ್ತವರ ತಂಡ ಅದನ್ನು ಮಾಡಿ ತೋರಿಸುವ ಹಠಕ್ಕೆ ಬಿದ್ದಿದ್ದಾರೆ.

   ಮಹೇಶ್ ಬಾಬುಗೆ ಆಕ್ಷನ್ ಕಟ್

  ಮಹೇಶ್ ಬಾಬುಗೆ ಆಕ್ಷನ್ ಕಟ್

  ಬಹಳ ವರ್ಷಗಳಿಂದ ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿತ್ತು. 'RRR' ನಂತರ ಆ ಚಿತ್ರವನ್ನು ಜಕ್ಕಣ್ಣ ಕೈಗೆತ್ತಿಕೊಳ್ಳುತ್ತಿದ್ದಾರೆ. ಅಫೀಷಿಯಲ್ ಆಗಿ ಸಿನಿಮಾ ಘೋಷಣೆ ಆಗದೇ ಇದ್ದರೂ ಸಂದರ್ಶನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ಯಾನ್‌ ವರ್ಲ್ಡ್ ಲೆವೆಲ್‌ನಲ್ಲಿ ಈ ಆಕ್ಷನ್ ಅಡ್ವೆಂಚರಸ್ ಸಿನಿಮಾ ಮೂಡಿ ಬರಲಿದೆ.

  English summary
  Rajamouli's RRR crossed Baahubali 2 full run at Japan boxoffice in just 34 days. Movie Became The fastest Indian film to earn 300M+ ¥ and an all time ranking of no. 2 Indian film, in Japan. Know more.
  Friday, November 25, 2022, 12:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X