For Quick Alerts
  ALLOW NOTIFICATIONS  
  For Daily Alerts

  ಆಲಿಯಾ ಭಟ್‌ ಗಾಗಿ ಯೋಜನೆ ಬದಲಿಸಿದ ರಾಜಮೌಳಿ

  |

  ಕೊರೊನಾ ಲಾಕ್‌ಡೌನ್ ನಿಂದಾಗಿ ಬಂದ್ ಆಗಿದ್ದ ಸಿನಿಮಾ ಚಿತ್ರೀಕರಣ ನಿಧಾನಕ್ಕೆ ಪ್ರಾರಂಭವಾಗುತ್ತಿವೆ. ಸರ್ಕಾರ ವಿಧಿಸಿರುವ ನಿಯಮಗಳನ್ನು ಅನುಸರಿಸಿ ಸಿನಿಮಾ ಚಿತ್ರೀಕರಣ ನಡೆಯಬೇಕಿದೆ.

  ರಾಜಮೌಳಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಆರ್‌ಆರ್‌ಆರ್‌ ಸಹ ಚಿತ್ರೀಕರಣ ಪ್ರಾರಂಭವಾಗುತ್ತಿದೆ. ರಾಜಮೌಳಿ ಸಹ ಕೊರೊನಾ ಗೆ ತುತ್ತಾದ ಕಾರಣ ಇತರೆ ಸಿನಿಮಾಗಳಿಗಿಂತಲೂ ತಡವಾಗಿಯೇ ಚಿತ್ರೀಕರಣ ಪುನರ್‌ ಪ್ರಾರಂಭ ಮಾಡಲಾಗುತ್ತಿದೆ.

  'RRR' ಸಿನಿಮಾದ ಚಿತ್ರೀಕರಣ ಬಿಟ್ಟು ಕರ್ನಾಟಕಕ್ಕೆ ಬಂದ ನಿರ್ದೇಶಕ ರಾಜಮೌಳಿ'RRR' ಸಿನಿಮಾದ ಚಿತ್ರೀಕರಣ ಬಿಟ್ಟು ಕರ್ನಾಟಕಕ್ಕೆ ಬಂದ ನಿರ್ದೇಶಕ ರಾಜಮೌಳಿ

  ದೊಡ್ಡ-ದೊಡ್ಡ ನಟ-ನಟಿಯರ ದಂಡೇ ಇರುವ ಆರ್‌ಆರ್‌ಆರ್‌ ಸಿನಿಮಾಕ್ಕೆ, ಪಾತ್ರಧಾರಿಗಳ ಕಾಲ್‌ಶೀಟ್ ಹೊಂದಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ ರಾಜಮೌಳಿಗೆ. ಇದಕ್ಕೆಂದೇ ಚಿತ್ರೀಕರಣದ ಯೋಜನೆಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ರಾಜಮೌಳಿ.

  ಬಾಲಿವುಡ್‌ನಲ್ಲಿ ಹಲವಾರು ಸಿನಿಮಾ ಒಪ್ಪಿಕೊಂಡಿದ್ದಾರೆ ಆಲಿಯಾ

  ಬಾಲಿವುಡ್‌ನಲ್ಲಿ ಹಲವಾರು ಸಿನಿಮಾ ಒಪ್ಪಿಕೊಂಡಿದ್ದಾರೆ ಆಲಿಯಾ

  ಬಾಲಿವುಡ್ ನಟಿ ಆಲಿಯಾ ಭಟ್ ಸಿನಿಮಾದಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಬಾಲಿವುಡ್‌ನಲ್ಲಿ ಸಹ ಅವರು ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಆರ್‌ಆರ್‌ಆರ್‌ ಸಿನಿಮಾಕ್ಕೆ ಹೆಚ್ಚಿನ ದಿನದ ಕಾಲ್‌ಶೀಟ್ ನೀಡಲು ಅವರಿಗೆ ಸಾಧ್ಯವಾಗುತ್ತಿಲ್ಲ.

  ಚಿತ್ರೀಕರಣ ಯೋಜನೆ ಪೂರ್ಣ ಬದಲು

  ಚಿತ್ರೀಕರಣ ಯೋಜನೆ ಪೂರ್ಣ ಬದಲು

  ಹಾಗಾಗಿ ರಾಜಮೌಳಿ, ತಮ್ಮ ಚಿತ್ರೀಕರಣದ ಯೋಜನೆಯನ್ನು ಪೂರ್ಣ ಬದಲಾಯಿಸಿದ್ದು, ಮೊದಲಿಗೆ ಆಲಿಯಾ ಭಟ್ ಅಭಿನಯದ ದೃಶ್ಯಗಳನ್ನೇ ಚಿತ್ರೀಕರಣ ಮಾಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಸೆಟ್‌ಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ.

  ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಸಿನಿಮಾಕ್ಕೆ ಎದುರಾದ ವಿಘ್ನ?ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಸಿನಿಮಾಕ್ಕೆ ಎದುರಾದ ವಿಘ್ನ?

  ಕಡಿಮೆ ಅವಧಿಯ ಕಾಲ್‌ಶೀಟ್ ಕೊಟ್ಟಿದ್ದಾರೆ ಆಲಿಯಾ

  ಕಡಿಮೆ ಅವಧಿಯ ಕಾಲ್‌ಶೀಟ್ ಕೊಟ್ಟಿದ್ದಾರೆ ಆಲಿಯಾ

  ಆಲಿಯಾ ಭಟ್ ಒಂದು ತಿಂಗಳ ಕಾಲ್‌ಶೀಟ್ ಮಾತ್ರವೇ ನೀಡಿದ್ದಾರಂತೆ. ಹಾಗಾಗಿ ಆಲಿಯಾ ಭಟ್ ಹಾಗೂ ರಾಮ್ ಚರಣ್ ಇರುವ ದೃಶ್ಯಗಳ ಚಿತ್ರೀಕರಣ ಮೊದಲಿಗೆ ಮುಗಿಸಲಿದ್ದಾರೆ ರಾಜಮೌಳಿ. ಆ ನಂತರ ಜೂ.ಎನ್‌ಟಿಆರ್ ದೃಶ್ಯಗಳ ಚಿತ್ರೀಕರಣ ಪ್ರಾರಂಭವಾಗಲಿದೆ.

  ಮಗಳಿಗೆ ಮುದ್ದೆ, ಬಸ್ಸಾರು, ಸಪ್ಪಿನ ಪಲ್ಯ ತಿನ್ನಿಸಿದ Shwetha Srivatsav | Filmibeat Kannada
  ನವೆಂಬರ್ ನಿಂದ ಸೆಟ್‌ಗೆ ಬರಲಿದ್ದಾರೆ ಜೂ.ಎನ್‌ಟಿಆರ್

  ನವೆಂಬರ್ ನಿಂದ ಸೆಟ್‌ಗೆ ಬರಲಿದ್ದಾರೆ ಜೂ.ಎನ್‌ಟಿಆರ್

  ಜೂ.ಎನ್‌ಟಿಆರ್ ಕಾಲ್‌ಶೀಟ್ ನವೆಂಬರ್ ನಿಂದ ಪ್ರಾರಂಭವಾಗುತ್ತದೆ, ಹಾಗಾಗಿ ಆ ಒಳಗೆ ಆಲಿಯಾ ಭಟ್ ಅಭಿನಯದ ಎಲ್ಲಾ ದೃಶ್ಯಗಳ ಚಿತ್ರೀಕರಣ ಮುಗಿಸಲೇಬೇಕಾದ ಒತ್ತಡದಲ್ಲಿದ್ದಾರೆ ರಾಜಮೌಳಿ. ನವೆಂಬರ್‌ನಿಂದ ಜೂ.ಎನ್‌ಟಿಆರ್ ಹಾಗೂ ಬ್ರಿಟಿಷ್‌ ನಟಿಯ ಭಾಗಗಳ ಚಿತ್ರೀಕರಣ ನಡೆಸಬೇಕಿದೆ.

  ಪ್ರಭಾಸ್ ಏಕೆ ನನ್ನ ಆತ್ಮೀಯ ಗೆಳೆಯ: ರಾಜಮೌಳಿ ನೀಡಿದ ಕಾರಣಗಳುಪ್ರಭಾಸ್ ಏಕೆ ನನ್ನ ಆತ್ಮೀಯ ಗೆಳೆಯ: ರಾಜಮೌಳಿ ನೀಡಿದ ಕಾರಣಗಳು

  English summary
  Director Rajamouli starting RRR movie shooting with Bollywood star Alia Bhat. She given less days call sheet so Rajamouli finishing shooting of her scenes first.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X