twitter
    For Quick Alerts
    ALLOW NOTIFICATIONS  
    For Daily Alerts

    'ಪೊನ್ನಿಯನ್ ಸೆಲ್ವನ್' ಸಿನಿಮಾವನ್ನು ನಾನು ವೆಬ್ ಸೀರಿಸ್ ಮಾಡ್ಬೇಕು ಅಂದ್ಕೊಂಡಿದ್ದೆ: ಯಾಕೆ ಮಾಡಿಲ್ಲ ರಾಜಮೌಳಿ?

    |

    ರಾಜಮೌಳಿ ಹಾಗೂ ಮಣಿರತ್ನಂ ಇಬ್ಬರೂ ದಕ್ಷಿಣ ಭಾರತ ಕಂಡ ಅತ್ಯದ್ಭುತ ನಿರ್ದೇಶಕರು. ಇಬ್ಬರ ಸಿನಿಮಾ ಮಾಡುವ ದಾಟಿ ಬೇರೆ ಬೇರೆ. ರಾಜಮೌಳಿ ಕಾಲ್ಪನಿಕ ಕಥೆಯನ್ನು ತೆರೆಮೇಲೆ ತರುವುದಕ್ಕೆ ಎಕ್ಸ್‌ಪರ್ಟ್. ಅದೇ ಮಣಿರತ್ನಂ ರಿಯಲ್ ಸ್ಟೋರಿಯನ್ನು ತೆರೆಮೇಲೆ ತರುವುದರಲ್ಲಿ ಲೆಜೆಂಡ್.

    ಆದ್ರೀಗ ಮಣಿರತ್ನಂ ಐತಿಹಾಸಿಕ ಕಥೆಯನ್ನು ತೆರೆಮೇಲೆ ತರುವುದು ಮುಂದಾಗಿದ್ದಾರೆ. ಅದುವೇ 'ಪೊನ್ನಿಯನ್ ಸೆಲ್ವನ್'. ಈ ಸಿನಿಮಾ ಕೂಡ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಮಣಿರತ್ನಂ ಟ್ರೈಲರ್ ರಿಲೀಸ್ ಮಾಡಿದ್ದು, ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದೆ. ಈಗ ರಾಜಮೌಳಿ ಇದೇ ಸಿನಿಮಾವನ್ನು ವೆಬ್ ಸೀರಿಸ್ ಮಾಡ್ಬೇಕು ಅಂದ್ಕೊಂಡಿದ್ದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಇಂತಹ ಸಿನಿಮಾ ಮಾಡೋಕೆ ಧೈರ್ಯ ಬೇಕು ಎಂದ ಜಕ್ಕಣ್ಣ: 'ವಿಕ್ರಾಂತ್ ರೋಣ'ದಲ್ಲಿ ಇಷ್ಟ ಆಗಿದ್ದೇನು?ಇಂತಹ ಸಿನಿಮಾ ಮಾಡೋಕೆ ಧೈರ್ಯ ಬೇಕು ಎಂದ ಜಕ್ಕಣ್ಣ: 'ವಿಕ್ರಾಂತ್ ರೋಣ'ದಲ್ಲಿ ಇಷ್ಟ ಆಗಿದ್ದೇನು?

    ಇಷ್ಟೇ ಅಲ್ಲ 'ಪೊನ್ನಿಯನ್ ಸೆಲ್ವನ್' ಸಿನಿಮಾ ಯಾಕೆ ವೆಬ್ ಸೀರಿಸ್ ಆಗಬೇಕು? ಅಂತಲೂ ಹೇಳಿದ್ದಾರೆ. ಅಷ್ಟಕ್ಕೂ 'ಪೊನ್ನಿಯನ್ ಸೆಲ್ವನ್' ಸಿನಿಮಾ ವೆಬ್ ಸೀರಿಸ್ ಯಾಕೆ ಮಾಡಿಲ್ಲ? ರಾಜಮೌಳಿ ಹೀಗೆ ಹೇಳಿದ್ದು ಯಾಕೆ? ಇದೆಲ್ಲವನ್ನೂ ತಿಳಿದುಕೊಳ್ಳಲು ಮುಂದೆ ಓದಿ.

    'ರಸ್ಸೋ ಬ್ರದರ್ಸ್' ಜೊತೆ ರಾಜಮೌಳಿ

    'ರಸ್ಸೋ ಬ್ರದರ್ಸ್' ಜೊತೆ ರಾಜಮೌಳಿ

    'ಕ್ಯಾಪ್ಟನ್ ಅಮೆರಿಕ: ಸಿವಿಲ್ ವಾರ್', 'ಅವೆಂಜರ್ಸ್: ಇನ್ಫಿನಿಟಿ ವಾರ್', 'ಅವೆಂಜರ್ಸ್: ಎಂಡ್‌ ಗ್ರೇಮ್' ಅಂತ ಹಾಲಿವುಡ್‌ ಸಿನಿಮಾಗಳನ್ನು ನಿರ್ದೇಶಿಸಿರೋ ರಸ್ಸೋ ಬ್ರದರ್ಸ್ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಧನುಷ್ ಅಭಿನಯದ 'ದಿ ಗ್ರೇಮ್ ಮ್ಯಾನ್' ಸಿನಿಮಾವನ್ನು ನಿರ್ದೇಶಿಸಿದ್ದ ಈ ಜೋಡಿ, ಭಾರತದ ಮೂವಿ ಮಾಂತ್ರಿಕ ರಾಜಮೌಳಿ ಜೊತೆ ಸಂವಾದ ನಡೆಸಿದ್ದರು. ಈ ವೇಳೆ ಮಣಿರತ್ನಂ ನಿರ್ದೇಶಿಸುತ್ತಿರುವ 'ಪೊನ್ನಿಯನ್ ಸೆಲ್ವನ್' ಸಿನಿಮಾ ಬಗ್ಗೆ ಮಾತಾಡಿದ್ದಾರೆ.

    ಸಲ್ಮಾನ್ ಖಾನ್‌ಗೆ ಕತೆ ಕೊಟ್ಟಿದ್ದಕ್ಕೆ ತಂದೆ ಮೇಲೆ ಬೇಸರಿಸಿಕೊಂಡಿದ್ದ ರಾಜಮೌಳಿಸಲ್ಮಾನ್ ಖಾನ್‌ಗೆ ಕತೆ ಕೊಟ್ಟಿದ್ದಕ್ಕೆ ತಂದೆ ಮೇಲೆ ಬೇಸರಿಸಿಕೊಂಡಿದ್ದ ರಾಜಮೌಳಿ

    'ಪೊನ್ನಿಯನ್ ಸೆಲ್ವನ್' ಮಾಡ್ಬೇಕಿತ್ತು!

    'ಪೊನ್ನಿಯನ್ ಸೆಲ್ವನ್' ಮಾಡ್ಬೇಕಿತ್ತು!

    ರಸ್ಸೊ ಬ್ರದರ್ಸ್ ಜೊತೆ ರಾಜಮೌಳಿ ಸಂವಾದಕ್ಕೆ ಇಳಿದಿದ್ದರು. ಈ ವೇಳೆ ವೆಬ್ ಸಿರೀಸ್‌ ಬಗ್ಗೆ ನಿರೂಪಕ ಪ್ರಶ್ನೆ ಮಾಡಿದ್ದರು. ಆಗ ರಾಜಮೌಳಿ 'ಪೊನ್ನಿಯನ್ ಸೆಲ್ವನ್' ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ಹೊರಹಾಕಿದ್ದಾರೆ. " ಪೊನ್ನಿಯನ್ ಸೆಲ್ವನ್ ಸಿನಿಮಾವನ್ನು ಮಣಿರತ್ನಂ ಸರ್ ಮಾಡುತ್ತಿದ್ದಾರೆ. ಆದರೆ, ಬಹಳ ದಿನಗಳಿಂದ ನಾನು ಇದನ್ನು ಸೀರಿಸ್ ಮಾಡಬೇಕು ಅಂತ ನನ್ನ ಮನಸ್ಸಿನಲ್ಲಿ ಇತ್ತು. ಇದನ್ನು ಸೀರಿಸ್ ಮಾಡಬೇಕು ಅಂತಿತ್ತು." ಎಂದು ರಾಜಮೌಳಿ ರಿವೀಲ್ ಮಾಡಿದ್ದಾರೆ.

    ಸಿನಿಮಾದಲ್ಲಿ ಹೇಳಲಾಗುವುದಿಲ್ಲ

    ಅಷ್ಟಕ್ಕೂ ರಾಜಮೌಳಿ 'ಪೊನ್ನಿಯನ್ ಸೆಲ್ವನ್' ಅನ್ನು ಸಿನಿಮಾ ಮಾಡದೆ ಇರಲು ತೀರ್ಮಾನಿಸಿದ್ದಕ್ಕೂ ಒಂದು ಕಾರಣವಿತ್ತು. ದೊಡ್ಡ ಇತಿಹಾಸವಿರುವ ಕಥೆಯನ್ನು ಒಂದೆರಡೆ ಗಂಟೆಗಳಲ್ಲಿ ಹೇಳಲು ಸಾಧ್ಯವಿಲ್ಲ ಎನ್ನುವುದು ರಾಜಮೌಳಿ ಅಭಿಪ್ರಾಯ. " ಈ ಕಥೆಯನ್ನು ಸಿನಿಮಾದಲ್ಲಿ ಹೇಳಲು ಸಾಧ್ಯವಿಲ್ಲ. ವೆಬ್ ಸೀರಿಸ್ ಅಂತ ವೇದಿಕೆ ಇರುವಾಗ ನೀವು ಕಥೆಯನ್ನು 8 ಗಂಟೆಗಳಲ್ಲಿ 15 ಗಂಟೆಗಳಲ್ಲಿ ಅಥವಾ 20 ಗಂಟೆಗಳಲ್ಲಿ ಹೇಳಬಹುದು." ಎಂದು ರಾಜಮೌಳಿ ಹೇಳಿದ್ದಾರೆ.

    'ಬಜರಂಗಿ ಭಾಯಿಜಾನ್' ನಿರ್ದೇಶಿಸಲು ಇಷ್ಟವಿತ್ತು.

    'ಬಜರಂಗಿ ಭಾಯಿಜಾನ್' ನಿರ್ದೇಶಿಸಲು ಇಷ್ಟವಿತ್ತು.

    ಇಷ್ಟೇ ಅಲ್ಲ ಹಾಲಿವುಡ್‌ನ ರಸ್ಸೋ ಬದ್ರರ್ಸ್ ಜೊತೆ ಇನ್ನೂ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಕಥೆ ಹೆಣೆದಿದ್ದರು. ಈ 'ಬಜರಂಗಿ ಭಾಯಿಜಾನ್' ಈ ಸಿನಿಮಾವನ್ನು ನಿರ್ದೇಶನ ಮಾಡಬೇಕು ಅನ್ನೋ ಆಸೆ ರಾಜಮೌಳಿಗೆ ಇತ್ತಂತೆ. ಆದರೆ ಸಾಧ್ಯವಾಗಿಲ್ಲ ಅಂತನೂ ಹೇಳಿದ್ದಾರೆ. ಒಂದ್ವೇಳೆ ಎಲ್ಲಾ ಕೈ ಹಿಡಿದಿದ್ದರೆ, 'ಬಜರಂಗಿ ಭಾಯಿಜಾನ್' ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದರು.

    English summary
    Rajamouli Wants to Direct Bajrangi Bhaijaan And Ponniyin Selvan Web Series, Know More.
    Sunday, July 31, 2022, 16:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X