For Quick Alerts
  ALLOW NOTIFICATIONS  
  For Daily Alerts

  ಒರಿಸ್ಸಾದಿಂದ ಅಪ್ಸರೆಯನ್ನು ಕರೆತಂದ ರಾಮ್‌ ಗೋಪಾಲ್ ವರ್ಮಾ

  |

  ಕೊರೊನಾ ಸಂಕಷ್ಟದಿಂದಾಗಿ ಚಿತ್ರಮಂದಿರಗಳು ಬಂದ್ ಆಗಿರುವ ಈ ಸಂದರ್ಭದಲ್ಲಿಯೂ ಸಿನಿಮಾ ಮೇಲೆ ಸಿನಿಮಾ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.

  Nikhil & Revathi GYM Workout : ಪ್ರಕೃತಿ ನಡುವೆ ನಿಖಿಲ್ ಕುಮಾರಸ್ವಾಮಿ-ರೇವತಿ ವರ್ಕ್‌ಔಟ್ | Filmiibeat Kannada

  ಕೊರೊನಾದಿಂದ ಇಡೀಯ ಭಾರತದ ಚಿತ್ರರಂಗ ತಲ್ಲಣಿಸಿದೆ. ಹಲವಾರು ಸಿನಿಮಾ ನಿರ್ದೇಶಕರು, ನಿರ್ಮಾಪಕರು ತಲೆಯ ಮೇಲೆ ಕೈಹೊತ್ತು ಕೂತಿದ್ದಾರೆ. ಇಂಥಹಾ ವಿಷಮ ಸನ್ನಿವೇಶದಲ್ಲೂ ಸಹ ಸಿನಿಮಾದಿಂದಲೇ ಕೋಟ್ಯಂತರ ಹಣ ಮಾಡುತ್ತಿರುವುದು ಬಹುಷಃ ರಾಮ್‌ ಗೋಪಾಲ್ ವರ್ಮಾ ಮಾತ್ರವೇ ಎನಿಸುತ್ತದೆ.

  'ನಗ್ನಂ' ಧಮಾಕಾ: ಅರ್ಧ ಗಂಟೆಯಲ್ಲಿ 47 ಲಕ್ಷ ಗಳಿಸಿದ ರಾಮ್‌ಗೋಪಾಲ್ ವರ್ಮಾ'ನಗ್ನಂ' ಧಮಾಕಾ: ಅರ್ಧ ಗಂಟೆಯಲ್ಲಿ 47 ಲಕ್ಷ ಗಳಿಸಿದ ರಾಮ್‌ಗೋಪಾಲ್ ವರ್ಮಾ

  ಹೌದು, ಕೊರೊನಾ ಸಮಯದಲ್ಲಿಯೂ ಅವರು ಒಂದರಹಿಂದೊಂದರಂತೆ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಅಷ್ಟೆ ಅಲ್ಲ ಕೋಟ್ಯಂತರ ಹಣ ಸಹ ಗಳಿಸುತ್ತಿದ್ದಾರೆ. ಇದೀಗ ತಮ್ಮ ಹೊಸ ಸಿನಿಮಾಕ್ಕೆ ಒರಿಸ್ಸಾದಿಂದ ಅಪ್ಸರೆಯನ್ನು ಕರೆತಂದಿದ್ದಾರೆ!

  ಒರಿಸ್ಸಾದಿಂದ ಬಂದ ಅಪ್ಸರಾ

  ಒರಿಸ್ಸಾದಿಂದ ಬಂದ ಅಪ್ಸರಾ

  ಹೌದು, ರಾಮ್‌ಗೋಪಾಲ್ ವರ್ಮಾ 'ಥ್ರಿಲ್ಲರ್' ಎಂಬ ಹೊಸ ಸಿನಿಮಾವನ್ನು ಘೊಷಿಸಿದ್ದು, ಈ ಸಿನಿಮಾದ ನಾಯಕಿ ಪಾತ್ರಕ್ಕೆ ಒರಿಸ್ಸಾದ ಅಪ್ಸರಾ ಎಂಬ ಹಾಟ್ ಚೆಲುವೆನ್ನು ಆಯ್ಕೆಮಾಡಿದ್ದಾರೆ. ಆಕೆಯ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ವರ್ಮಾ.

  ಅಪ್ಸರಾ ಹುಟ್ಟಿದ್ದು ದೆಹರಾದೂನ್‌ನಲ್ಲಿ

  ಅಪ್ಸರಾ ಹುಟ್ಟಿದ್ದು ದೆಹರಾದೂನ್‌ನಲ್ಲಿ

  ಒರಿಸ್ಸಾದ ಅಪ್ಸರಾ ರಾಣಿ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ದೆಹರಾದೂನ್‌ನಲ್ಲಿ. ಸದ್ಯಕ್ಕೆ ಹೈದರಾಬಾದ್‌ನಲ್ಲಿ ನೆಲೆಸಿದ್ದು, ಥ್ರಿಲ್ಲರ್ ಸಿನಿಮಾಕ್ಕಾಗಿ ಅವರು ಹೈದರಾಬಾದ್‌ಗೆ ಬಂದಿದ್ದಾರಂತೆ. ಇದು ಅವರ ಮೊದಲನೇ ಸಿನಿಮಾ. ಅವರು ಒಬ್ಬ ಉತ್ತಮ ನೃತ್ಯಗಾರ್ತಿ.

  ಕಳಪೆ ಸಿನಿಮಾ ಮಾಡಿಯೂ ಕೋಟಿ-ಕೋಟಿ ಗಳಿಸಿದ ರಾಮ್‌ಗೋಪಾಲ್ ವರ್ಮಾ!ಕಳಪೆ ಸಿನಿಮಾ ಮಾಡಿಯೂ ಕೋಟಿ-ಕೋಟಿ ಗಳಿಸಿದ ರಾಮ್‌ಗೋಪಾಲ್ ವರ್ಮಾ!

  ವೆಬ್‌ಸೈಟ್‌ ಮೂಲಕ ಸಿನಿಮಾ ಬಿಡುಗಡೆ

  ವೆಬ್‌ಸೈಟ್‌ ಮೂಲಕ ಸಿನಿಮಾ ಬಿಡುಗಡೆ

  ಥ್ರಿಲ್ಲರ್ ಸಿನಿಮಾ ಅಪ್ಸರಾ ರಾಣಿ ಸುತ್ತ ನಡೆಯುವ ಥ್ರಿಲ್ಲರ್ ಕತೆಯಾಗಿದ್ದು, ಸಿನಿಮಾವನ್ನು ರಾಮ್‌ ಗೋಪಾಲ್ ವರ್ಮಾ ನಿರ್ದೇಶಿಸುತ್ತಿದ್ದಾರೆ. ಇದು ಒಂದೇ ಮನೆಯಲ್ಲಿ ನಡೆಯುವ ಕತೆ ಎನ್ನಲಾಗುತ್ತಿದ್ದು, ರಾಮ್ ಗೋಪಾಲ್ ವರ್ಮಾ ಅವರೇ ನಿರ್ಮಿಸುತ್ತಿದ್ದಾರೆ. ಅವರದ್ದೇ ಆಪ್ ಮತ್ತು ವೆಬ್‌ಸೈಟ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

  ಕ್ಲೈಮ್ಯಾಕ್ಸ್‌ ಮತ್ತು ನಗ್ನಂ ಸಿನಿಮಾ ಮಾಡಿದ್ದಾರೆ

  ಕ್ಲೈಮ್ಯಾಕ್ಸ್‌ ಮತ್ತು ನಗ್ನಂ ಸಿನಿಮಾ ಮಾಡಿದ್ದಾರೆ

  ಕ್ಲೈಮ್ಯಾಕ್ಸ್‌ ಮತ್ತು ನಗ್ನಂ ಅಥವಾ ನೇಕೆಡ್‌ ನಂತಹಾ ಸಿನಿಮಾಗಳನ್ನು ನಿರ್ಮಿಸಿ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿ ಕೋಟಿಗಟ್ಟಲೆ ಹಣ ಗಳಿಸಿರುವ ರಾಮ್‌ ಗೋಪಾಲ್ ವರ್ಮಾ ಈ ಸಿನಿಮಾವನ್ನೂ ಸಹ ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಬಿಡುಗಡೆ ಮಾಡುವ ಯೋಜನೆ ಹೊಂದಿದ್ದಾರೆ.

  RRR ಸಿನಿಮಾ ಫ್ಲಾಪ್ ಆದರೆ ಯಾರು-ಯಾರು ಸಂಭ್ರಮಿಸುತ್ತಾರೆ?RRR ಸಿನಿಮಾ ಫ್ಲಾಪ್ ಆದರೆ ಯಾರು-ಯಾರು ಸಂಭ್ರಮಿಸುತ್ತಾರೆ?

  English summary
  Director Ram Gopal Varma introducing Apsara Rani as heroine for his next movie Thriller.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X