twitter
    For Quick Alerts
    ALLOW NOTIFICATIONS  
    For Daily Alerts

    ಭಿನ್ನ ಮಾದರಿಯಲ್ಲಿ ಸಿನಿಮಾ ಮಾರಾಟಕ್ಕಿದ್ದ ಆರ್‌ಜಿವಿ: ಭಾರತದಲ್ಲಿ ಇದೇ ಮೊದಲು

    |

    ಒಂದು ಕಾಲದ ಅತ್ಯುತ್ತಮ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ಕೇವಲ ಸಿ-ಕ್ಲಾಸ್ ಸಿನಿಮಾ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ವಯಸ್ಕರ ಸಿನಿಮಾಗಳನ್ನು ನಿರ್ಮಿಸಿ ಅವನ್ನು ಪೇ ಪರ್ ವೀವ್ ಮಾದರಿಯಲ್ಲಿ ಬಿಡುಗಡೆ ಮಾಡಿ ದೊಡ್ಡ ಮಟ್ಟದ ಲಾಭವನ್ನೇ ಗಳಿಸುತ್ತಿದ್ದಾರೆ.

    ಇದೀಗ ರಾಮ್ ಗೋಪಾಲ್ ವರ್ಮಾ ಮತ್ತೊಂದು ಸಿ-ಕ್ಲಾಸ್ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದು, ಸಿನಿಮಾವನ್ನು ಭಿನ್ನ ಮಾದರಿಯಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ.

    ಇದೀಗ ಬಿಟ್‌ಕಾಯಿನ್‌ಗಳು ಬಹಳ ವೇಗವಾಗಿ ಚಾಲ್ತಿಗೆ ಬರುತ್ತಿವೆ, ಇದೇ ಮಾದರಿಯಲ್ಲಿ ತಮ್ಮ ಹೊಸ ಸಿನಿಮಾ 'ಡೇಂಜರಸ್' ಅನ್ನು ಎನ್‌ಎಫ್‌ಟಿ (ನಾನ್ ಫಂಜಿಬೆಲ್ ಟೋಕನ್) ಬ್ಲಾಕ್‌ಚೈನ್ ಮೂಲಕ ಮಾರಾಟಕ್ಕೆ ಇಟ್ಟಿದ್ದಾರೆ ವರ್ಮಾ.

    Ram Gopal Varma Selling His Dangerous Movie As NFT On Blockchain

    ಎನ್‌ಎಫ್‌ಟಿ ಮಾದರಿಯಲ್ಲಿ ಕಾಲಕೃತಿಗಳನ್ನು ಮಾರಾಟಕ್ಕೆ ಇಡುವ ಅಭ್ಯಾಸ ಇತ್ತೀಚೆಗೆ ಹೆಚ್ಚಾಗಿದೆ. ಹಲವರು ತಮ್ಮ ಕಲಾಕೃತಿಗಳನ್ನು, ಹಾಡುಗಳನ್ನು, ವಿಡಿಯೋಗಳನ್ನು ಎನ್‌ಎಫ್‌ಟಿ ಮಾದರಿಯಲ್ಲಿ ಮಾರಾಟಕ್ಕೆ ಇಡುತ್ತಿದ್ದಾರೆ.

    ರಾಮ್ ಗೋಪಾಲ್ ವರ್ಮಾ ತಮ್ಮ 'ಡೇಂಜರಸ್' ಸಿನಿಮಾವನ್ನು 600000 ಯುನಿಟ್‌ ಮೌಲ್ಯವನ್ನು ನಿಗದಿಪಡಿಸಿದ್ದಾರೆ. ಒಂದು ಯುನಿಟ್‌ಗೆ 100 ರು ಬೆಲೆ. ಖರೀದಿಸುವವರು ಒಮ್ಮೆಲೆ 500000 ಯುನಿಟ್ ಖರೀದಿ ಮಾಡಬಹುದು. ಅಥವಾ ಬಿಡಿಯಾಗಿಯೂ ಖರೀದಿಸಬಹುದು. ಒಂದು ಲಕ್ಷ ಯುನಿಟ್‌ ಪಾಲನ್ನು ರಾಮ್ ಗೋಪಾಲ್ ವರ್ಮಾ ಹಾಗೂ ಸಿನಿಮಾದ ಇಬ್ಬರು ನಾಯಕಿಯರಾದ ಅಪ್ಸರಾ ರಾಣಿ, ನಯನಾ ಗಂಗೂಲಿ ಹೊಂದಿರುತ್ತಾರೆ.

    'ಡೇಂಜರಸ್' ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ಗಳಿಸುವ ಹಣವನ್ನು ಎನ್‌ಎಫ್‌ಟಿ ಮಾದರಿಯಲ್ಲಿ ಖರೀದಿಸಿರುವ ಪಾಲುದಾರರಿಗೂ ಹಂಚಲಾಗುತ್ತದೆ. ಸಿನಿಮಾವು ಚಿತ್ರಮಂದಿರದಲ್ಲಿ ಗಳಿಸುವ ಗಳಿಕೆ, ಒಟಿಟಿ ಹಾಗೂ ಪೇ ಪರ್ ವೀವ್ ಮಾದರಿಯಲ್ಲಿ ಗಳಿಸುವ ಹಣವನ್ನು ಸಹ ಪಾಲುದಾರರೊಂದಿಗೆ ಹಂಚಿಕೆ ಮಾಡಿಕೊಳ್ಳಲಾಗುತ್ತದೆ.

    ಇಷ್ಟು ಮಾತ್ರವೇ ಅಲ್ಲದೆ ಸಿನಿಮಾಕ್ಕೆ ಸಂಬಂಧಿಸಿದಂತೆ ಪ್ರಚಾರ ಸಾಮಗ್ರಿ (ಡಿಜಿಟಲ್) ಅನ್ನು ಪಾಲುದಾರರಿಗೆ ನೀಡಲಾಗುತ್ತಿದ್ದು, ಸಿನಿಮಾವನ್ನು ಪಾಲುದಾರರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಬಹುದಾಗಿರುತ್ತದೆ. ಇದರ ಜೊತೆಗೆ ಪಾಲುದಾರರಿಗೆ ರಾಮ್ ಗೋಪಾಲ್ ವರ್ಮಾ ಹಾಗೂ ಚಿತ್ರತಂಡದಿಂದ ವಿಶೇಷ ಪಾರ್ಟಿ ಆಯೋಜಿಸಲಾಗುತ್ತದೆ. ಸಿನಿಮಾ ಖರೀದಿಸುವವರ ಹೆಸರನ್ನು ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿ ಸಹ ಸೇರಿಸಲಾಗುತ್ತದೆ.

    ಇನ್ನು 'ಡೇಂಜರಸ್' ಸಿನಿಮಾವು ಯುವತಿಯರ ಸಲಿಂಗ ಪ್ರೇಮದ ಕತೆಯನ್ನು ಹೊಂದಿದೆ. ಈ ಸಿನಿಮಾವು ಭಾರತದ ಮೊದಲ ಲೆಸ್ಬಿಯನ್ ಕ್ರೈಂ, ಆಕ್ಷನ್, ಥ್ರಿಲ್ಲರ್ ಕತೆಯೆಂದು ವರ್ಮಾ ಬಣ್ಣಿಸಿದ್ದಾರೆ. ಸಿನಿಮಾವು 90 ನಿಮಿಷ ಅವಧಿಯದ್ದಾಗಿದ್ದು ಸಿನಿಮಾದಲ್ಲಿ ಸಲಿಂಗಿ ಪ್ರೇಮಿಗಳ ಪಾತ್ರದಲ್ಲಿ ಅಪ್ಸರಾ ರಾಣಿ ಮತ್ತು ನಯನಾ ಗಂಗೂಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಹಿಂದಿಯ ಹಾಸ್ಯ ನಟ ರಾಜ್‌ಪಾಲ್ ಯಾದವ್ ಸಹ ಇದ್ದಾರೆ.

    English summary
    Director Ram Gopal Varma selling his Dangerous movie as NFT on blockchain. He set 6 lakh unit value for his movie he and movie heroines kept 1 lakh unit shares. one unit is equal to 100 rs.
    Wednesday, October 27, 2021, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X