For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡ ಜೊತೆ ಡೇಟಿಂಗ್: ಕೊನೆಗೂ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ

  |

  ನಟಿ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್‌ಮೆಂಟ್ ಮುರಿದುಕೊಂಡು ತೆಲುಗು ಚಿತ್ರರಂಗದತ್ತ ಮುಖ ಮಾಡಿದ ಬಳಿಕ ಅವರ ಹೆಸರು ಹೆಚ್ಚಾಗಿ ಕೇಳಿ ಬಂದಿದ್ದು ವಿಜಯ್ ದೇವರಕೊಂಡ ಜೊತೆಗೆ.

  'ಗೀತಾ ಗೋವಿಂದಂ', 'ಡಿಯರ್ ಕಾಮ್ರೆಡ್' ಸಿನಿಮಾಗಳನ್ನು ಮಾಡಿದ ಬಳಿಕ ಇಬ್ಬರ ಪ್ರೇಮ ಪ್ರಕರಣದ ಸುದ್ದಿಗಳು ತುಸು ಜೋರಾಗಿಯೇ ಹರಿದಾಡಲು ಆರಂಭಿಸಿದವು. ಒಂದು ಹಂತದಲ್ಲಂತೂ ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಮಂದಣ್ಣ ಎಂಗೇಜ್‌ಮೆಂಟ್ ಮುರಿದುಕೊಳ್ಳಲು ಕಾರಣವೇ ವಿಜಯ್ ದೇವರಕೊಂಡ ಎನ್ನಲಾಗಿತ್ತು.

  ನಟಿ ಗೀತಾ ಭಾರತಿ ಭಟ್‌ ತೂಕ ಇಳಿಸಿಕೊಳ್ಳಲು ಏನೆಲ್ಲಾ ಕರಸತ್ತು ಮಾಡ್ತಿದ್ದಾರೆ ಗೊತ್ತಾ?ನಟಿ ಗೀತಾ ಭಾರತಿ ಭಟ್‌ ತೂಕ ಇಳಿಸಿಕೊಳ್ಳಲು ಏನೆಲ್ಲಾ ಕರಸತ್ತು ಮಾಡ್ತಿದ್ದಾರೆ ಗೊತ್ತಾ?

  2018 ರಿಂದಲೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವಿನ ಗಾಸಿಪ್‌ಗಳು ಹರಿದಾಡುತ್ತಲೇ ಇವೆ. ಅದಕ್ಕೆ ತಕ್ಕಂತೆ ಆಗಾಗ್ಗೆ ಅವರು ಹೈದರಾಬಾದ್, ಮುಂಬೈ ನಗರಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಪರಸ್ಪರರ ಮನೆಗಳಿಗೆ ಭೇಟಿ ಸಹ ನೀಡುತ್ತಿರುತ್ತಾರೆ. ಆದರೆ ಇದೀಗ ಮೊದಲ ಬಾರಿಗೆ ತಮ್ಮ ಹಾಗೂ ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ, ತಮ್ಮಿಬ್ಬರ ಬಗ್ಗೆ ಹಬ್ಬಿರುವ ಸುದ್ದಿಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

  ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಮಾತು

  ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಮಾತು

  ಸಂದರ್ಶನವೊಂದರಲ್ಲಿ ವಿಜಯ್ ಜೊತೆಗಿನ ಡೇಟಿಂಗ್ ಸುದ್ದಿಗಳ ಬಗ್ಗೆ ಕೇಳಿದಾಗ ಮಾತನಾಡಿರುವ ರಶ್ಮಿಕಾ, ಆ ಸುದ್ದಿಗಳನ್ನೆಲ್ಲ ಕೇಳಿದಾಗ 'ಅಯ್ಯೋ ಬಾಬು' ಎಂದುಕೊಳ್ಳುತ್ತಿದ್ದೆ ಎಂದಿದ್ದಾರೆ. ಮುಂದುವರೆದು, ''ನಾನು ಹಾಗೂ ವಿಜಯ್ ಸಾಕಷ್ಟು ಸಿನಿಮಾಗಳನ್ನು, ಜಾಹೀರಾತುಗಳನ್ನು ಒಟ್ಟಿಗೆ ಮಾಡಿದ್ದೇವೆ. ಅದೂ ನನ್ನ ವೃತ್ತಿ ಜೀವನದ ಆರಂಭದಲ್ಲಿಯೇ ಹಾಗಾಗಿ ಈ ರೀತಿ ಸುದ್ದಿಗಳು ಹಬ್ಬಿರಬಹುದು'' ಎಂದಿದ್ದಾರೆ.

  ಇಬ್ಬರಿಗೂ ಸಾಕಷ್ಟು ಗೆಳೆಯರಿದ್ದಾರೆ: ರಶ್ಮಿಕಾ

  ಇಬ್ಬರಿಗೂ ಸಾಕಷ್ಟು ಗೆಳೆಯರಿದ್ದಾರೆ: ರಶ್ಮಿಕಾ

  ''ನನಗೆ ಉದ್ಯಮ ಏನು ಎಂಬುದು ಅಷ್ಟಾಗಿ ಗೊತ್ತಿಲ್ಲದೇ ಇರುವಾಗ ನಾನು ವಿಜಯ್ ಜೊತೆ ಕೆಲಸ ಮಾಡಿದೆ. ವಿಜಯ್‌ಗೂ ಸಹ ನಾಯಕನಾಗಿ ಆಗಷ್ಟೆ ಮೇಲೆ ಬರುತ್ತಿದ್ದ ಇಬ್ಬರಿಗೂ ಈ ಉದ್ಯಮ ಹೊಸದು. ಆ ಸಮಯದಲ್ಲಿ ಒಂದೇ ಮನಸ್ಥಿತಿಯ ಇಬ್ಬರು ಒಟ್ಟಿಗೆ ನಟಿಸಿದಾಗ ಗೆಳೆಯರಾಗುವುದು ಸಹಜ. ಅಲ್ಲದೆ, ನನಗೆ ಹೈದರಾಬಾದ್‌ನಲ್ಲಿ ಒಂದು ಗೆಳೆಯರ ಗ್ಯಾಂಗ್ ಇತ್ತು, ವಿಜಯ್‌ಗೂ ಒಂದು ಗ್ಯಾಂಗ್ ಇತ್ತು. ನಾವೆಲ್ಲರೂ ಒಟ್ಟಿಗೆ ಸೇರಿ ಚಿಲ್ ಮಾಡುತ್ತಿದ್ದೆವು, ಇದನ್ನೇ ಜನ ಲವ್, ಡೇಟಿಂಗ್ ಎಂದುಕೊಂಡರು'' ಎಂದಿದ್ದಾರೆ ರಶ್ಮಿಕಾ ಮಂದಣ್ಣ.

  ನಾನೂ-ವಿಜಯ್ ಒಟ್ಟಿಗೆ ಸಿನಿಮಾ ಮಾಡ್ತೇವೆ: ರಶ್ಮಿಕಾ

  ನಾನೂ-ವಿಜಯ್ ಒಟ್ಟಿಗೆ ಸಿನಿಮಾ ಮಾಡ್ತೇವೆ: ರಶ್ಮಿಕಾ

  ''ಜನರು ನಮ್ಮ ಬಗ್ಗೆ ಮಾತನಾಡುವುದು ಕೇಳಿಸಿಕೊಂಡಾಗ ಸಿಟ್ಟೇನು ಬರುವುದಿಲ್ಲ ಆದರೆ ಪಾಪ ಎನ್ನಿಸುತ್ತದೆ. ಆದರೆ ಜನ ನಾವಿಬ್ಬರೂ ಮತ್ತೆ ಸಿನಿಮಾ ಮಾಡಬೇಕು ಎಂದುಕೊಳ್ಳುತ್ತಿದ್ದಾರೆ ಎಂಬುದು ಕೇಳಿದಾಗ ನಾನು ಹಾಗೂ ವಿಜಯ್ ಶೀಘ್ರದಲ್ಲಿಯೇ ಒಂದು ಸಿನಿಮಾ ಮಾಡಬೇಕು, ಅದೂ ಪ್ರೇಮಕತೆಯನ್ನೇ ಮಾಡಬೇಕು ಎನಿಸುತ್ತದೆ ಎಂದು ಸಹ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಅಲ್ಲದೆ, ನಾವಿಬ್ಬರೂ ಒಳ್ಳೆಯ ನಟರು ಹಾಗಾಗಿ ನಿಮಗೆ ನಿರಾಶೆ ಮಾಡುವುದಿಲ್ಲ'' ಎಂದು ಭರವಸೆ ನೀಡಿದ್ದಾರೆ ರಶ್ಮಿಕಾ ಮಂದಣ್ಣ.

  ರಶ್ಮಿಕಾ-ವಿಜಯ್ ಬ್ರೇಕ್‌ಅಪ್?

  ರಶ್ಮಿಕಾ-ವಿಜಯ್ ಬ್ರೇಕ್‌ಅಪ್?

  ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಡೇಟಿಂಗ್ ಮಾಡುತ್ತಿದ್ದಾರೆಂದು ಇತ್ತೀಚಿನ ವರೆಗೂ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಆದರೆ ಇದೀಗ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮಾತನಾಡಿ, 'ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿ, ''ಆತನ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತು ನನಗೆ ತಿಳಿದಿರುವ ಪ್ರಕಾರ ಆತ ಸಿಂಗಲ್, ಆತ ಅಧಿಕೃತವಾಗಿ ಸಿಂಗಲ್ ಎಂದು ಒತ್ತಿ ಒತ್ತಿ ಹೇಳಿದರು. ಈ ಮೂಲಕ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಪ್ರೀತಿ ಪ್ರೇಮದ ಸಂಬಂಧವಿಲ್ಲ ಎಂದು ಕರಣ್ ಜೋಹರ್ ತಿಳಿಸಿದ್ದಾರೆ.

  English summary
  Actress Rashmika Mandanna talks about her relationship with Vijay Devarkonda. She said we both are just friends.
  Tuesday, October 4, 2022, 14:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X