For Quick Alerts
  ALLOW NOTIFICATIONS  
  For Daily Alerts

  'ನಿತಿನ್ ನಿಮ್ಮ ಮದುವೆಗೆ ನಾನೇ ಲಕ್ಕಿ': ರಶ್ಮಿಕಾ ಹೀಗ್ಯಾಕೆ ಹೇಳಿದ್ರು?

  |

  ಇತ್ತೀಚಿಗಷ್ಟೆ ತೆಲುಗು ನಟ ನಿತಿನ್ ಮತ್ತು ಶಾಲಿನಿ ನಿಶ್ಚಿತಾರ್ಥ ಸಂಪ್ರದಾಯವಾಗಿ ಜರುಗಿತ್ತು. ಏಪ್ರಿಲ್ ತಿಂಗಳಲ್ಲಿ ಇವರಿಬ್ಬರ ವಿವಾಹ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಮೇ ತಿಂಗಳಲ್ಲಿ ವಿವಾಹ ಜರುಗಿಸಲು ನಿರ್ಧರಿಸಿದ್ದಾರೆ.

  ನಿತಿನ್ ಮತ್ತು ಶಾಲಿನಿ ನಾಲ್ಕೈದು ವರ್ಷದಿಂದ ಪ್ರೀತಿಸುತ್ತಿದ್ದರು. ಈಗ ಎರಡು ಕುಟುಂಬದವರನ್ನು ಒಪ್ಪಿಸಿ, ವಿವಾಹವಾಗಲು ಎಲ್ಲ ತಯಾರಿ ನಡೆಸುತ್ತಿದ್ದಾರೆ.

  'ಪೊಗರು' ಆದ್ಮೇಲೆ ರಶ್ಮಿಕಾ ಮಂದಣ್ಣ ಮತ್ತೊಂದು ಕನ್ನಡ ಚಿತ್ರ!'ಪೊಗರು' ಆದ್ಮೇಲೆ ರಶ್ಮಿಕಾ ಮಂದಣ್ಣ ಮತ್ತೊಂದು ಕನ್ನಡ ಚಿತ್ರ!

  ಇದೀಗ, ನಟ ನಿತಿನ್ ಅವರ ವಿವಾಹಕ್ಕೆ ರಶ್ಮಿಕಾ ಮಂದಣ್ಣ ಅವರೇ ಕಾರಣ ಅಥವಾ ಲಕ್ಕಿ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ. ಇದಕ್ಕೆ ಕಾರಣ ರಶ್ಮಿಕಾ ಮಂದಣ್ಣ ಅವರ ಟ್ವೀಟ್.

  ಹೌದು, ನಿತಿನ್ ಮತ್ತು ಶಾಲಿನಿ ನಿಶ್ಚಿತಾರ್ಥಕ್ಕೆ ಶುಭಕೋರಿರುವ ರಶ್ಮಿಕಾ ಮಂದಣ್ಣ ಶುಭಕೋರಿದ್ದಾರೆ. ಈ ವೇಳೆ 'ನಿತಿನ್ ನಾನು ನಿಮಗೆ ಲಕ್ಕಿ, ಮದುವೆ ಮತ್ತು ಎಲ್ಲದರಲ್ಲೂ. ಜಸ್ಟ್ ಸುಮ್ಮನೆ, ನಿಮ್ಮಿಬ್ಬರ ಬಗ್ಗೆ ನನಗೆ ತುಂಬಾ ಖುಷಿಯಾಗಿದೆ' ಎಂದಿದ್ದಾರೆ.

  ಸಂದರ್ಶನದಲ್ಲಿ ತೆಲುಗು ನಟ ನಿತಿನ್ ಬಾಯಿಂದ ಬಂತು ಸತ್ಯ: ರಶ್ಮಿಕಾಗೆ ಮುಜುಗರ.!ಸಂದರ್ಶನದಲ್ಲಿ ತೆಲುಗು ನಟ ನಿತಿನ್ ಬಾಯಿಂದ ಬಂತು ಸತ್ಯ: ರಶ್ಮಿಕಾಗೆ ಮುಜುಗರ.!

  ಆದರೆ, ನಿಮಗೆ ನಾನು ಲಕ್ಕಿ ಎಂಬ ಮಾತು ನೆಟ್ಟಿಗರು ಗಮನ ಸೆಳೆದಿತ್ತು. ಇನ್ನುಳಿದಂತೆ ನಿತಿನ್ ನಟಿಸಿರುವ 'ಭೀಷ್ಮ' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 21 ರಂದು ಭೀಷ್ಮ ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದೆ.

  English summary
  Kannada actress Rashmika mandanna tweet about telugu actor nithin engagement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X