Don't Miss!
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Lifestyle
ದಕ್ಷಿಣ ಧ್ರುವಕ್ಕೆ ಯಾತ್ರೆ ಮಾಡಿ ಸಾಧನೆ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸಾಹೋ' ದಾಖಲೆಯೂ ಉಡೀಸ್: ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸೌತ್ ಸಿನಿಮಾಗಳ ಲಿಸ್ಟ್‌ನಲ್ಲಿ ಮತ್ತಷ್ಟು ಮೇಲೇರಿದ 'ಕಾಂತಾರ'!
ಥಿಯೇಟರ್‌ಗಳಲ್ಲಿ 'ಕಾಂತಾರ' 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗೆಲುವಿನ ಓಟ ಮುಂದುವರೆಸಿದೆ. ಇದೀಗ ಪ್ರಭಾಸ್ ನಟನೆಯ 'ಸಾಹೋ' ಸಿನಿಮಾ ದಾಖಲೆಯನ್ನು ಮೀರಿಸಿ ಸಿನಿಮಾ ಮುನ್ನುಗ್ಗುತ್ತಿದೆ.
ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಕಾಂತಾರ' ಸಿನಿಮಾ ನೂರಾರು ಕೋಟಿ ಕೊಳ್ಳೆ ಹೊಡೆದು ಸದ್ದು ಮಾಡ್ತಿದೆ. ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಲಿಸ್ಟ್‌ನಲ್ಲಿ ರಿಷಬ್ ಶೆಟ್ಟಿ ಸಿನಿಮಾ ಕಾಣಿಸಿಕೊಂಡಿದೆ. ತುಳು ಭಾಷೆಗೆ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಇಂಗ್ಲೀಷ್‌ಗೂ ಸಿನಿಮಾ ಡಬ್ ಆಗುವ ಸಾಧ್ಯತೆಯಿದೆ. ಹಾಗಾಗಿ ಸಿನಿಮಾ ಕಲೆಕ್ಷನ್ ಮತ್ತಷ್ಟು ಹೆಚ್ಚುವುದರಲ್ಲಿ ಸಂದೇಹವಿಲ್ಲ. ಕೆಲ ದಿನಗಳ ಹಿಂದೆಯಷ್ಟೆ 'ಪುಷ್ಪ' ಸಿನಿಮಾ ದಾಖಲೆ ಮುರಿದಿದ್ದ 'ಕಾಂತಾರ' ಈಗ ಮತ್ತೊಂದು ಪ್ಯಾನ್ ಸಿನಿಮಾವನ್ನು ಹಿಂದಿಕ್ಕಿದೆ.
ಇದಪ್ಪಾ
ಕಾಡುಬೆಟ್ಟು
ಶಿವನ
ಕ್ರೇಜ್
ಅಂದ್ರೆ:
ನೇರವಾಗಿ
ಹಾಲಿವುಡ್‌ಗೆ
'ಕಾಂತಾರ'?
ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಅನ್ನು ಮತ್ತೆ ಹುಟ್ಟುಹಾಕಿದ ಸಿನಿಮಾ 'ಬಾಹುಬಲಿ'. ರಾಜಮೌಳಿ ಪ್ರಯತ್ನಕ್ಕೆ ಅದ್ಭುತ ಯಶಸ್ಸು ಸಿಕ್ಕಿತ್ತು. ಈ ಚಿತ್ರದ ಮೂಲಕ ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆದರು. ಇದೇ ಕ್ರೇಜ್‌ನಲ್ಲಿ ನಟಿಸಿದ 'ಸಾಹೋ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.

'ಸಾಹೋ' ದಾಖಲೆ ಮುರಿದ 'ಕಾಂತಾರ'
3 ವರ್ಷಗಳ ಹಿಂದೆ ತೆರೆಗಪ್ಪಳಿಸಿದ್ದ 'ಸಾಹೋ' 410 ಕೋಟಿ ಕಲೆಕ್ಷನ್ ಮಾಡಿತ್ತು. 'ಬಾಹುಬಲಿ' -2 ಸಕ್ಸಸ್ ನಂತರ ಬಹಳ ತಡವಾಗಿ ಈ ಸಿನಿಮಾ ತೆರೆಗೆ ಬಂದಿತ್ತು. ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ತೆಲುಗಿನಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ ಹಿಂದಿ ಬೆಲ್ಟ್‌ನಲ್ಲಿ ಧೂಳೆಬ್ಬಿಸಿತ್ತು. ಸುಜಿತ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಒಟ್ಟು 405 ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ 'ಕಾಂತಾರ' 410 ಕೋಟಿ ಗಳಿಕೆ ಕಂಡು ಪ್ರಭಾಸ್ 'ಸಾಹೋ' ದಾಖಲೆ ಮುರಿದಿದೆ.

8ನೇ ಸ್ಥಾನಕ್ಕೇರಿದ 'ಕಾಂತಾರ'
'ಸಾಹೋ' ಚಿತ್ರವನ್ನು ಹಿಂದಿಕ್ಕಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸೌತ್ ಸಿನಿಮಾಗಳ ಲಿಸ್ಟ್‌ನಲ್ಲಿ 'ಕಾಂತಾರ' ಈಗ 8ನೇ ಸ್ಥಾನಕ್ಕೇರಿದೆ. 'ಬಾಹುಬಲಿ'- 2, 'KGF- 2', 'RRR', 2.0, 'ಬಾಹುಬಲಿ'-1, 'ಪೊನ್ನಿಯಿನ್ ಸೆಲ್ವನ್', 'ವಿಕ್ರಮ್' ಸಿನಿಮಾಗಳು ಮೊದಲ 7 ಸ್ಥಾನಗಳಲ್ಲಿವೆ. 16 ಕೋಟಿ ಬಜೆಟ್ಟಿನ 'ಕಾಂತಾರ' 300 ಕೋಟಿ ಬಜೆಟ್ಟಿನ 'ಸಾಹೋ' ಚಿತ್ರವನ್ನು ಹಿಂದಿಕ್ಕಿರುವುದು ವಿಶೇಷ. ಇನ್ನು ಪ್ರಭಾಸ್‌ಗೆ 'ಬಾಹುಬಲಿ' ಕ್ರೇಜ್ ಇತ್ತು. ಆದರೆ 'ಕಾಂತಾರ' ರಿಲೀಸ್ ಆಗುವವರೆಗೂ ಹೊರ ರಾಜ್ಯಗಳಲ್ಲಿ ರಿಷಬ್ ಶೆಟ್ಟಿ ಯಾರು ಎನ್ನುವುದೇ ಗೊತ್ತಿರಲಿಲ್ಲ.

50 ಸ್ಕ್ರೀನ್‌ಗಳಲ್ಲಿ 'ತುಳು' ವರ್ಷನ್
ಸಾಮಾನ್ಯವಾಗಿ ಥಿಯೇಟರ್‌ಗಳಿಂದ ತೆಗೆದ ಮೇಲೆ ಓಟಿಟಿಯಲ್ಲಿ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತದೆ. ಆದರೆ ಓಟಿಟಿಯಲ್ಲಿ ಬಂದ ಮೇಲೂ 'ಕಾಂತಾರ' ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲ ಈಗ ಮತ್ತೆ ಕನ್ನಡ ವರ್ಷನ್ 50 ಸ್ಕ್ರೀನ್ಸ್ ಹೆಚ್ಚಿಸಲಾಗುತ್ತಿದೆ. ಆ ಮೂಲಕ 'ಕಾಂತಾರ' ಕ್ರೇಜ್ ಇನ್ನು ಕಮ್ಮಿ ಆಗಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಇನ್ನು ಸಿನಿಮಾ ತುಳು ಭಾಷೆಗೆ ಡಬ್ ಆಗಿದ್ದು ನಾಳೆಯಿಂದ 50 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ.

ಹಿಂದಿ ಬೆಲ್ಟ್‌ನಲ್ಲಿ ನಿಲ್ಲದ ಶಿವನ ಆರ್ಭಟ
'ಕಾಂತಾರ' ಹಿಂದಿ ವರ್ಷನ್ ಇನ್ನು ಓಟಿಟಿಗೆ ಬಂದಿಲ್ಲ. ಥಿಯೇಟರ್‌ಗಳಲ್ಲಿ ಚಿತ್ರದ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಈಗಾಗಲೇ ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ 70 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ 'ಕಾಂತಾರ' ಹಿಂದಿ ವರ್ಷನ್ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.