For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್‌ ಸಿನಿಮಾದ ಹೊಸ ಬಿಡುಗಡೆ ದಿನಾಂಕ!

  |

  ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್‌ಟಿಆರ್ ಒಟ್ಟಿಗೆ ನಟಿಸುತ್ತಿರುವ ಆರ್ ಆರ್ ಆರ್ ಚಿತ್ರಕ್ಕೆ ಮತ್ತೊಮ್ಮೆ ಬ್ರೇಕ್ ಬಿದ್ದಿದೆ. ಬಾಹುಬಲಿ ನಂತರ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಮೆಗಾ ಪ್ರಾಜೆಕ್ಟ್‌ಗೆ ಒಂದರ ಹಿಂದೆ ಒಂದರಂತೆ ಸಂಕಷ್ಟ ಎದುರಾಗುತ್ತಲೇ ಇದೆ. ಹಾಗಾಗಿ, ಅಂದುಕೊಂಡಿದ್ದ ದಿನಕ್ಕೆ ತೆರೆಗೆ ಬರಲು ಸಾಧ್ಯವಾಗುತ್ತಿಲ್ಲ.

  ಈ ಮೊದಲೇ ಘೋಷಿಸಿದಂತೆ ಆಗಿದ್ದರೆ 2021 ಜನವರಿ 8 ರಂದು ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದ್ರೆ, ಕೊರೊನಾ ಲಾಕ್‌ಡೌನ್ ಕಾರಣದಿಂದ ರಿಲೀಸ್ ಯೋಜನೆ, ಶೂಟಿಂಗ್ ಯೋಜನೆ ಎಲ್ಲವೂ ತಲೆಕೆಳಗಾಗಿದೆ. ಮತ್ತೆ ಚಿತ್ರೀಕರಣ ಆರಂಭಿಸಿರುವ ಆರ್ ಆರ್ ಆರ್ ಈಗ ಹೊಸ ಬಿಡುಗಡೆ ದಿನಾಂಕವನ್ನು ಟಾರ್ಗೆಟ್ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

  ಆರ್ ಆರ್ ಆರ್ ಹೊಸ ರಿಲೀಸ್ ದಿನಾಂಕ

  ಆರ್ ಆರ್ ಆರ್ ಹೊಸ ರಿಲೀಸ್ ದಿನಾಂಕ

  2021ರ ದಸರಾ ಹಬ್ಬದ ವಿಶೇಷವಾಗಿ ಆರ್ ಆರ್ ಆರ್ ಸಿನಿಮಾವನ್ನು ಬಿಡುಗಡೆ ಮಾಡುವುದು ಉತ್ತಮ ಎಂದು ಚಿತ್ರತಂಡ ನಿರ್ಧರಿಸಿದೆಯಂತೆ. ನವೆಂಬರ್ ತಿಂಗಳಿಗೆ ರಿಲೀಸ್ ಪಕ್ಕಾ ಅಂದುಕೊಂಡರೆ ಪ್ರಚಾರ, ಪೋಸ್ಟ್ ಪ್ರೊಡಕ್ಷನ್ ಹಾಗೂ ಇನ್ನಿತರ ಕೆಲಸಗಳಿಗೂ ಹೆಚ್ಚು ಸಮಯ ಸಿಕ್ಕಂತಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರಂತೆ.

  ನಟ ರಾಮ್ ಚರಣ್ ಗೆ ಕೊರೊನಾ ಪಾಸಿಟಿವ್: ಶೀಘ್ರ ಗುಣಮುಖರಾಗುವಂತೆ ಅಭಿಮಾನಿಗಳ ಹಾರೈಕೆ

  ಮಾರ್ಚ್‌ನಲ್ಲಿ ಶೂಟಿಂಗ್ ಮುಗಿಯಬೇಕು

  ಮಾರ್ಚ್‌ನಲ್ಲಿ ಶೂಟಿಂಗ್ ಮುಗಿಯಬೇಕು

  ಸದ್ಯದ ಲೆಕ್ಕಾಚಾರದ ಪ್ರಕಾರ ಮಾರ್ಚ್ ತಿಂಗಳಷ್ಟರಲ್ಲಿ ಆರ್ ಆರ್ ಆರ್ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿಸಬೇಕು ಅಂದುಕೊಂಡಿದ್ದಾರೆ. ಶೂಟಿಂಗ್ ಮುಗಿಯುತ್ತಿದ್ದಂತೆ ಹೊಸ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

  ರಾಮ್ ಚರಣ್‌ಗೆ ಕೊರೊನಾ

  ರಾಮ್ ಚರಣ್‌ಗೆ ಕೊರೊನಾ

  ಆರ್ ಆರ್ ಆರ್ ಚಿತ್ರದ ಪ್ರಮುಖ ನಟ ರಾಮ್ ಚರಣ್ ತೇಜ ಅವರಿಗೆ ಕೊರೊನಾ ವೈರಸ್ ತಗುಲಿದೆ. ಈ ಹಿನ್ನೆಲೆ ಆರ್ ಆರ್ ಆರ್ ಚಿತ್ರಕ್ಕು ತಲೆಬಿಸಿ ಉಂಟಾಗಿದ್ದು, ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆಯಂತೆ. ಚಿರು ಪುತ್ರ ಚೇತರಿಕೆ ಕಂಡ ಮೇಲೆ ಶೂಟಿಂಗ್ ಪುನರ್ ಆರಂಭಿಸಲಾಗುವುದು ಎಂದು ತಿಳಿದು ಬಂದಿದೆ.

  ಇಂದು ಅಲಿಯಾ ಭಟ್-ರಣಬೀರ್ ಕಪೂರ್ ನಿಶ್ಚಿತಾರ್ಥ? ಜೈಪುರದಲ್ಲಿ ನಡೆಯುತ್ತಿದೆ ಸಮಾರಂಭ

  ಆಲಿಯಾ ಭಟ್ ನಿಶ್ಚಿತಾರ್ಥ

  ಆಲಿಯಾ ಭಟ್ ನಿಶ್ಚಿತಾರ್ಥ

  ಆರ್‌ಆರ್‌ಆರ್‌ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಆಲಿಯಾ ಭಟ್ ಒಂದು ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಈಗ ಹೊಸ ವರ್ಷದ ವಿಶೇಷವಾಗಿ ಬ್ರೇಕ್ ತೆಗೆದುಕೊಂಡಿರುವ ನಟಿ ರಾಜಸ್ಥಾನಕ್ಕೆ ತೆರಳಿದ್ದಾರೆ. ಈ ಮಧ್ಯೆ ನಟ ರಣ್ಬೀರ್ ಕಪೂರ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೂ ವರದಿಯಾಗಿದೆ.

  'RRR' ಸಿನಿಮಾದ ಡೈಲಾಗ್ ಕಲಿಯಲು ಇಷ್ಟು ಸಮಯ ತೆಗೆದುಕೊಂಡಿದ್ರಾ ಅಲಿಯಾ ಭಟ್?

  English summary
  SS Rajamouli directorial Ram charan and Jr Ntr starrer RRR Movie getting to ready to release on November.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X