For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನತ್ತ ಹೊರಟಿದೆ RRR ಟೀಂ: ಪ್ರಚಾರಕ್ಕೆ ಸಿದ್ಧತೆ

  |

  ಭಾರತೀಯ ಸಿನಿಮಾರಂಗದ ಬಹು ನಿರೀಕ್ಷಿತ ಸಿನಿಮಾ RRR ರಿಲೀಸ್ ಹತ್ತಿರ ಆಗುತ್ತಿದೆ. ಹಾಗಾಗಿ ನಿತ್ಯ ಒಂದಲ್ಲ ಒಂದು ವಿಚಾರಕ್ಕೆ RRR ಸಿನಿಮಾ ಸುದ್ದಿ ಆಗುತ್ತಿದೆ.

  ಇತ್ತೀಚೆಗೆ ರಾಜಮೌಳಿ ಮುಂಬೈಗೆ ಹೋಗಿದ್ದರು. ಅಲ್ಲಿ ನಟ ಸಲ್ಮಾನ್‌ ಖಾನ್‌ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು.

  ಈಗ RRR ಚಿತ್ರ ತಂಡ ಬೆಂಗಳೂರಿಗೆ ಆಗಮಿಸುತ್ತಾ ಇದೆ. ಹೌದು ಇಡಿ ಆರ್‌ಆರ್‌ಆರ್‌ ಚಿತ್ರ ತಂಡ ಬೆಂಗಳೂರಿನತ್ತ ಪಯಣ ಬೆಳೆಸಿದೆ. ಯಾಕೆ ಎನ್ನುವುದನ್ನು, ಮುಂದೆ ಓದಿ...

  ಕನ್ನಡ ಪ್ರೇಕ್ಷಕರೊಂದಿಗೆ ರಾಜಮೌಳಿ ಮಾತು!

  ಕನ್ನಡ ಪ್ರೇಕ್ಷಕರೊಂದಿಗೆ ರಾಜಮೌಳಿ ಮಾತು!

  RRR ಸಿನಿಮಾ ದೇಶ, ಭಾಷೆಯ ಗಡಿ ದಾಟಿ ತನ್ನ ಪ್ರಭಾವ ಬೀರಿದೆ. ಈ ಚಿತ್ರ ಸದ್ಯ ಭಾರತೀಯ ಸಿನಿಮಾ ರಂಗದ ಬಹು ನಿರೀಕ್ಷಿತ ಸಿನಿಮಾ. ತ್ರಿಬಲ್ ಆರ್‌ ಚಿತ್ರಕ್ಕಾಗಿ ಇಡಿ ವಿಶ್ವದಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ. ರಾಜಮೌಳಿ ನಿರ್ದೇಶನಕ್ಕೆ ಸಾಕಷ್ಟು ಕನ್ನಡ ಅಭಿಮಾನಿಗಳು ಇದ್ದಾರೆ. ಹಾಗಾಗಿ ಕರ್ನಾಟಕದಲ್ಲೂ ರಾಜಮೌಳಿ ಸಿನಿಮಾಗಳು ಉತ್ತಮ ಪ್ರಶಂಸೆ ಪಡೆದುಕೊಳ್ಳುತ್ತವೆ.

  ಇದೀಗ ಆರ್‌ಆರ್‌ಆರ್‌ ಸಿನಿಮಾವನ್ನು ನೋಡಲು ಕನ್ನಡದ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಸದ್ಯ ಚಿತ್ರ ತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಹಾಗಾಗಿ ಇದೆ ಕಾರಣಕ್ಕೆ ಈಗ ಚಿತ್ರ ತಂಡ ಬೆಂಗಳೂರಿಗೆ ಭೇಟಿ ಕೊಡುತ್ತಿದೆ. ಇದೇ ನವೆಂಬರ್‌ 26ರಂದು ಬೆಂಗಳೂರಿಗೆ ಆರ್‌ಆರ್‌ಆರ್‌ ಸಿನಿಮಾ ತಂಡ ಆಗಮಿಸಲಿದೆ. ಚಿತ್ರದ ಪ್ರಚಾರವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

  ಕನ್ನಡದಲ್ಲೂ RRR ತೆರೆಗೆ!

  ಕನ್ನಡದಲ್ಲೂ RRR ತೆರೆಗೆ!

  ಈ ಹಿಂದೆ ರಿಲೀಸ್‌ ಆಗಿದ್ದ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ಮೊದಲು ಕನ್ನಡದಲ್ಲಿ ರಿಲೀಸ್‌ ಆಗಿರಲಿಲ್ಲ. ಆದರೆ ಈಗ ಆರ್‌ಆರ್‌ಆರ್‌ ಸಿನಿಮಾ ಒಟ್ಟು ಐದು ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂನಲ್ಲೂ 'ತ್ರಿಬಲ್ ಆರ್‌' ಒಟ್ಟಿಗೆ ತೆರೆಗೆ ಬರಲಿದೆ.

  ಕನ್ನಡಕ್ಕೂ ಡಬ್ ಆಗಿ ಈ ಚಿತ್ರ ತೆರೆಗೆ ಬರ್ತಿದೆ. ಹಾಗಾಗಿ 'ಆರ್‌ಆರ್‌ಆರ್‌' ಸಿನಿಮಾವನ್ನು ಪರಭಾಷೆಯಲ್ಲಿ ನೋಡುವುದಕ್ಕಿಂತ ಕನ್ನಡದಲ್ಲೇ ಕನ್ನಡಿಗರು ನೋಡಬಹುದಾಗಿದೆ. ತೆಲುಗು ಸಿನಿಮಾಗಳಿಗೆ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚಿನ ಬೇಡಿಕೆ ಇದೆ. ಇಲ್ಲಿ ತೆಲುಗು ಸಿನಿಮಾ ನೋಡುವ ಪ್ರೇಕ್ಷಕರು ಇದ್ದಾರೆ ಹಾಗಾಗಿ 'ಆರ್‌ಆರ್‌ಆರ್‌' ಸಿನಿಮಾ ಬೆಂಗಳೂರಿಗೆ ಬರುತ್ತಿದೆ, ಇಲ್ಲಿ ಪ್ರಚಾರ ಕಾರ್ಯ ಕೈಗೊಂಡಿದೆ.

  ಡಿಸೆಂಬರ್‌ ಮೊದಲ ವಾರದಲ್ಲಿ 'RRR' ಚಿತ್ರ ಟ್ರೈಲರ್!

  ಡಿಸೆಂಬರ್‌ ಮೊದಲ ವಾರದಲ್ಲಿ 'RRR' ಚಿತ್ರ ಟ್ರೈಲರ್!

  ಈಗಾಗಲೇ ಚಿತ್ರದ ಟೀಸರ್‌ಗಳು ಮತ್ತು ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈಗ ಚಿತ್ರದ ಟ್ರೈಲರ್‌ ರಿಲೀಸ್‌ ಬಗ್ಗೆ ಚಿತ್ರ ತಂಡ ಸುಳಿವು ಕೊಟ್ಟಿದೆ. ಡಿಸೆಂಬರ್‌ ಮೊದಲ ವಾರದಲ್ಲಿ ಚಿತ್ರದ ಟ್ರೈಲರ್‌ ರಿಲೀಸ್‌ ಮಾಡಲಿದೆ ಚಿತ್ರ ತಂಡ.

  'RRR' ಟ್ರೈಲರ್‌ ಕನ್ನಡದಲ್ಲೂ ರಿಲೀಸ್ ಆಗಲಿದೆ. ಈಗಾಗಲೆ 'ಆರ್‌ಆರ್‌ಆರ್‌' ಹಾಡುಗಳು ಕನ್ನಡದಲ್ಲಿ ರಿಲೀಸ್‌ ಆಗಿ ಉತ್ತಮ ಪ್ರಶಂಸೆ ಪಡೆದುಕೊಂಡಿವೆ. ಕನ್ನಡಿಗರು 'RRR' ಚಿತ್ರದ ಕನ್ನಡ ಅವರಣಿಕೆಯನ್ನೂ ಮೆಚ್ಚಿ ಕೊಳ್ಳಲಿದ್ದಾರೆ ಎನ್ನುವ ಭರವಸೆ ಚಿತ್ರ ತಂಡಕ್ಕಿಂದೆ.

  ದುಬೈ ಬಿಟ್ಟು ಬೆಂಗಳೂರಿನತ್ತ 'ಆರ್‌ಆರ್‌ಆರ್' ಟೀಂ!

  ದುಬೈ ಬಿಟ್ಟು ಬೆಂಗಳೂರಿನತ್ತ 'ಆರ್‌ಆರ್‌ಆರ್' ಟೀಂ!

  ಇನ್ನು 'RRR' ಚಿತ್ರದ ಪೂರ್ವ ಬಿಡುಗಡೆ ಕಾರ್ಯಕ್ರಮದ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡಿದ್ದವು. ದುಬೈನಲ್ಲಿ ಚಿತ್ರ ತಂಡ ಅದ್ದೂರಿ ಕಾರ್ಯಕ್ರಮ ಮಾಡಲಿದೆ ಎನ್ನಲಾಗಿತ್ತು. ಆದರೆ ಬಳಿಕ ಈ ಯೋಜನೆಯನ್ನು ಚಿತ್ರ ತಂಡ ಕೈ ಬಿಟ್ಟಿದೆ ಎನ್ನಲಾಗುತ್ತಿದೆ. ದುಬೈನಲ್ಲಿ ಕಾರ್ಯಕ್ರಮ ಮಾಡಲು ಹೆಚ್ಚಿನ ಬಜೆಟ್ ಬೇಕಾಗಿರುವ ಕಾರಣ ಈ ಯೋಜನೆ ಕೈ ಬಿಡಲಾದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  English summary
  'RRR' Movie Team Coming To Bangalore Know More About This,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X