For Quick Alerts
  ALLOW NOTIFICATIONS  
  For Daily Alerts

  ಸೊಸೆ ಸಮಂತಾ ಅಡುಗೆಯೇ ಮಾಡಿಲ್ಲ ಎಂದ ಅತ್ತೆ ಅಮಲಾ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಅಡುಗೆ ವಿಚಾರವನ್ನು ಅತ್ತೆ ಅಮಲಾ ಅಕ್ಕಿನೇನಿ ಬಹಿರಂಗಪಡಿಸಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಾಗಾರ್ಜುನ ಪತ್ನಿ ಅಮಲಾ ಸೊಸೆಯ ಬಗ್ಗೆ ಹೇಳುತ್ತ ಪತಿ ನಾಗಾರ್ಜುನ ಅಡುಗೆ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.

  ನಟಿ ಸಮಂತಾ 2017ರಲ್ಲಿ ನಟ ನಾಗ್ ಚೈತನ್ಯ ಜೊತೆ ಹಣೆಮಣೆ ಏರಿದ್ದಾರೆ. ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದ ನಾಗ್-ಸ್ಯಾಮ್ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾಗಿ ಎರಡೂ ವರ್ಷಗಳು ಕಳೆದಿವೆ. ಸಮಂತಾ ಅಕ್ಕಿನೇನಿ ಕುಟುಂಬದ ಜೊತೆ ಹೇಗಿದ್ದಾರೆ? ಅಡುಗೆ ಮಾಡುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಸಮಂತಾ ಅಡುಗೆ ವಿಚಾರದ ಬಗ್ಗೆ ಅತ್ತೆ ಅಮಲಾ ಮಾತನಾಡಿದ್ದಾರೆ. ಮುಂದೆ ಓದಿ..

  ಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆ

  ಸಮಂತಾ ಮನೆಯಲ್ಲಿ ಅಡುಗೆಯೇ ಮಾಡಲ್ಲ

  ಸಮಂತಾ ಮನೆಯಲ್ಲಿ ಅಡುಗೆಯೇ ಮಾಡಲ್ಲ

  ಪತ್ರಕರ್ತರೊಬ್ಬರು ಸಮಂತಾ ಮನೆಯಲ್ಲಿ ಅಡುಗೆ ಮಾಡುತ್ತಾರಾ? ನ್ನುವ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಮಲಾ, "ಇಲ್ಲ" ಎಂದು ಹೇಳಿದ್ದಾರೆ. ನಂತರ ನಗುತ್ತಾ ನಮ್ಮ ಕುಟುಂಬದಲ್ಲಿ ಉತ್ತಮ ಕುಕ್ ನಾಗಾರ್ಜುನ ಇದ್ದಾರೆ. ಹೀಗಿರುವಾಗ ಅಡುಗೆಯವರ ಅವಶ್ಯಕತೆ ಇಲ್ಲ" ಎಂದು ಹೇಳಿದ್ದಾರೆ.

  ನಾಗಾರ್ಜುನ ಉತ್ತಮ ಕುಕ್ ಎಂದ ಪತ್ನಿ

  ನಾಗಾರ್ಜುನ ಉತ್ತಮ ಕುಕ್ ಎಂದ ಪತ್ನಿ

  ನಟ ನಾಗಾರ್ಜುನ ಅದ್ಭುತ ನಟಮಾತ್ರವಲ್ಲ, ಅತ್ಯುತ್ತಮ ಕುಕ್ ಕೂಡ ಎನ್ನುವ ರಹಸ್ಯವನ್ನು ಪತ್ನಿ ಅಮಲಾ ಬಹಿರಂಗ ಪಡಿಸಿದ್ದಾರೆ. ನಾಗಾರ್ಜುನ ಮನೆಯಲ್ಲಿ ಆಗಾಗ ವಿಶೇಷ ತಿನಿಸುಗಳನ್ನು ಮಾಡುತ್ತಿರುತ್ತಾರಂತೆ.

  ಫ್ಲಾಪ್ ನಟಿ ಎಂದವರ ವಿರುದ್ಧ ಕಿಡಿಕಾರಿದ ತೆಲುಗು ನಟಿ ಸಮಂತಾಫ್ಲಾಪ್ ನಟಿ ಎಂದವರ ವಿರುದ್ಧ ಕಿಡಿಕಾರಿದ ತೆಲುಗು ನಟಿ ಸಮಂತಾ

  ಅಡುಗೆ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದ ಸಮಂತಾ

  ಅಡುಗೆ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದ ಸಮಂತಾ

  ಲಾಕ್ ಡೌನ್ ಪರಿಣಾಮ ಮನಯಲ್ಲಿಯೇ ಕಾಲಕಳೆಯುತ್ತಿರುವ ನಟಿ ಸಮಂತಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅಡುಗೆ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಜೊತೆಗೆ ನಾನೆ ಅಡುಗೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೀಗ ಅತ್ತೆ ಅಮಲಾ ಕುಟುಂಬಕ್ಕಾಗಿ ಸೊಸೆ ಅಡುಗೆಯೇ ಮಾಡಿಲ್ಲ ಎಂದು ಹೇಳಿದ್ದಾರೆ.

  ತಾಯಿಯಾಗುತ್ತಿದ್ದಾರಾ ಸಮಂತಾ? ನಯನತಾರಾ ಜತೆಗಿನ ಸಿನಿಮಾ ಕೈಬಿಡಲು ಕಾರಣ ಇದು?ತಾಯಿಯಾಗುತ್ತಿದ್ದಾರಾ ಸಮಂತಾ? ನಯನತಾರಾ ಜತೆಗಿನ ಸಿನಿಮಾ ಕೈಬಿಡಲು ಕಾರಣ ಇದು?

  ನಾಗ್ ಚೈತನ್ಯಸಹ ಉತ್ತಮ ಕುಕ್

  ನಾಗ್ ಚೈತನ್ಯಸಹ ಉತ್ತಮ ಕುಕ್

  ನಟ ನಾಗ್ ಚೈತನ್ಯ ಸಹ ಅಡುಗೆ ಮಾಡುತ್ತಾರಂತೆ. "ಅನೇಕ ಸಂದರ್ಭದಲ್ಲಿ ನಾನೆ ಅಡುಗೆ ಮಾಡಿದ್ದೇನೆ" ಎಂದು ನಾಗ್ ಚೈತನ್ಯ ಹೇಳಿಕೊಂಡಿದ್ದರು. ಅಷ್ಟೆಯಲ್ಲ ಅಡುಗೆ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಇನ್ನೂ ನಟ ನಾಗ್ ಚೈತನ್ಯ ಸದ್ಯ ಲವ್ ಸ್ಟೋರಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇನ್ನೂ ಸಮಂತಾ ಜಾನು ಸಿನಿಮಾದ ಬಳಿಕ ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ನಲ್ಲಿ ಕಾಣಿಸಿಕಳ್ಳುತ್ತಿದ್ದಾರೆ

  English summary
  Actress Samantha Akkineni does not cook for Family said her mother in law Amala.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X