For Quick Alerts
  ALLOW NOTIFICATIONS  
  For Daily Alerts

  ಆರಂಭದಲ್ಲಿ '96' ರೀಮೇಕ್ ರಿಜೆಕ್ಟ್ ಮಾಡಿದ್ರಂತೆ ಸಮಂತಾ!

  |

  ತಮಿಳಿನ ಸೂಪರ್ ಹಿಟ್ ಚಿತ್ರ 96 ತೆಲುಗಿನಲ್ಲಿ ರೀಮೇಕ್ ಆಗಿದೆ. ತೆಲುಗಿನಲ್ಲಿ ಜಾನು ಎಂಬ ಹೆಸರಿನಲ್ಲಿ ಸಿನಿಮಾ ತಯಾರಾಗಿದ್ದು, ಸಮಂತಾ ಮತ್ತು ಶಾರ್ವಾನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  ತಮಿಳಿನಲ್ಲಿ ಚಿತ್ರ ನಿರ್ದೇಶನ ಮಾಡಿದ್ದ ನಿರ್ದೇಶಕ ಪ್ರೇಮ್ ಕುಮಾರ್ ತೆಲುಗು ಅವತರಣಿಗೆ ಆಕ್ಷನ್ ಕಟ್ ಹೇಳಿದ್ದರು. ಫೆಬ್ರವರಿ 7 ರಂದು ಸಿನಿಮಾ ತೆರೆಕಾಣುತ್ತಿದೆ.

  'ಐ ಲವ್ ಯು ಸ್ಯಾಮ್' ಎಂದ ಅಭಿಮಾನಿಗೆ ಸಮಂತಾ ನೀಡಿದ ಪ್ರತಿಕ್ರಿಯೆ ಏನು.?'ಐ ಲವ್ ಯು ಸ್ಯಾಮ್' ಎಂದ ಅಭಿಮಾನಿಗೆ ಸಮಂತಾ ನೀಡಿದ ಪ್ರತಿಕ್ರಿಯೆ ಏನು.?

  ಈ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದ ನಟಿ ಸಮಂತಾ ಆರಂಭದಲ್ಲಿ ಈ ಸಿನಿಮಾ ತಿರಸ್ಕರಿಸಿದ್ದರು ಎಂಬ ವಿಚಾರವನ್ನು ಬಿಟ್ಟುಕೊಟ್ಟಿದ್ದಾರೆ. ''ನಿರ್ಮಾಪಕ ದಿಲ್ ರಾಜು ಮೊದಲ ಈ ಚಿತ್ರಕ್ಕೆ ಆಫರ್ ಮಾಡಿದರು. ಆದರೆ ನಾನು ಈ ಚಿತ್ರವನ್ನು ಬೇಡ ಎಂದು ರಿಜೆಕ್ಟ್ ಮಾಡಿದ್ದೆ. ನನ್ನಿಂದ ಈ ಸಿನಿಮಾ ಮಾಡಲು ಸಾಧ್ಯವಾಗಲ್ಲ ಎಂದು ನಿರಾಕರಿಸಿದ್ದೆ'' ಎಂಬ ವಿಷಯ ಬಿಚ್ಚಿಟ್ಟಿದ್ದಾರೆ.

  ಪ್ರೇಕ್ಷಕರ ತಿರಸ್ಕಾರಕ್ಕೆ ಒಳಗಾದ ಸಮಂತಾ: ಕಾರಣ ಏನು?ಪ್ರೇಕ್ಷಕರ ತಿರಸ್ಕಾರಕ್ಕೆ ಒಳಗಾದ ಸಮಂತಾ: ಕಾರಣ ಏನು?

  ''ಆದರೆ ಥ್ಯಾಂಕ್ ಯೂ ದಿಲ್ ರಾಜು ಸರ್, ಎರಡನೇ ಸಲ ನನಗೆ ಈ ಸಿನಿಮಾ ಮಾಡಲು ಒತ್ತಾಯಿಸಿದ್ದಕ್ಕೆ. ನಾವು ಪ್ರತಿದಿನವೂ ಸೆಟ್ ನಲ್ಲಿ ಮ್ಯಾಜಿಕ್ ಮಾಡುತ್ತಿದ್ದೇವೆ ಎಂದು ಅನಿಸುತ್ತಿದೆ. ತೆಲುಗಿನಲ್ಲಿ ಕ್ಲಾಸ್ ಚಿತ್ರವನ್ನು ಮತ್ತೆ ಮರುಕಳಿಸುತ್ತಿದ್ದೇವೆ. ರಿಲೀಸ್ ಗೂ ಮೊದಲು ನಾನು ಕಡಿಮೆ ಮಾತನಾಡಬೇಕು ಎಂದುಕೊಂಡಿದ್ದೇನೆ, ಫೆಬ್ರವರಿ 7 ರ ನಂತರ ಹೆಚ್ಚಿನ ವಿಷಯ ಹಂಚಿಕೊಳ್ಳುವುದು ಬಾಕಿ ಇದೆ'' ಎಂದು ಹೇಳಿಕೊಂಡಿದ್ದಾರೆ.

  Samantha Rejected 96 Remake When Offered First Time

  ಅಂದ್ಹಾಗೆ, ತಮಿಳಿನಲ್ಲಿ 96 ಚಿತ್ರ ದೊಡ್ಡ ಹಿಟ್ ಆಗಿತ್ತು. ತ್ರಿಷಾ ಮತ್ತು ವಿಜಯ್ ಸೇತುಪತಿ ನಟಿಸಿದ್ದರು. ಅದೇ ಪಾತ್ರಗಳಲ್ಲಿ ತೆಲುಗಿನಲ್ಲಿ ಸಮಂತಾ ಮತ್ತು ಶಾರ್ವಾನಂದ್ ಅಭಿನಯಿಸಿದ್ದಾರೆ. ಕನ್ನಡದಲ್ಲೂ ಈ ಚಿತ್ರ ರೀಮೇಕ್ ಆಗಿತ್ತು. ಗಣೇಶ್ ಮತ್ತು ಭಾವನಾ ಬಣ್ಣ ಹಚ್ಚಿದ್ದರು.

  English summary
  Tollywood actress Samantha Akkineni rejected 96 movie remake when offered first time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X