For Quick Alerts
  ALLOW NOTIFICATIONS  
  For Daily Alerts

  ಸಮಂತಾ ಅಭಿನಯದ 'ಯಶೋದಾ' ಮೊದಲ ವಾರದ ಕಲೆಕ್ಷನ್ ಎಷ್ಟು? ಲಾಭ ಪಡೆಯಲು ಇನ್ನೆಷ್ಟು ಗಳಿಸಬೇಕು?

  |

  ವಿವಾಹ ವಿಚ್ಛೇದನ ಪಡೆದುಕೊಂಡ ನಂತರ ನಟಿ ಸಮಂತಾ ರುಥ್ ಪ್ರಭು ನಾಯಕಿಯಾಗಿ ನಟಿಸಿರುವ ಮೊದಲ ತೆಲುಗು ಚಿತ್ರ ಯಶೋದಾ ಕಳೆದ ಶುಕ್ರವಾರ ( ನವೆಂಬರ್ 11 ) ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡು ಮೊದಲ ದಿನವೇ ಆರು ಕೋಟಿ ಕಲೆಕ್ಷನ್ ಮಾಡಿ ಅಬ್ಬರಿಸಿತ್ತು. ಮಹಿಳಾ ಪ್ರಧಾನ ಚಿತ್ರವಾಗಿರುವ ಯಶೋದಾ ಪ್ರೇಕ್ಷಕ ವರ್ಗದಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಸದ್ಯ ಎರಡನೇ ವಾರಕ್ಕೆ ಕಾಲಿಟ್ಟಿದೆ

  ಈ ಮೂಲಕ ನಟಿ ಸಮಂತಾ ರುಥ್ ಪ್ರಭು ವಿವಾಹ ವಿಚ್ಛೇದನ ಪಡೆದುಕೊಂಡ ಬಳಿಕ ಕೇವಲ ಹಾಟ್ ಹಾಗೂ ಬೋಲ್ಡ್ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದವರಿಗೆ ಉತ್ತರ ನೀಡಿದ್ದಾರೆ. ಹೌದು, ನಟಿ ಸಮಂತಾ ರುಥ್ ಪ್ರಭು ವಿಚ್ಛೇದನದ ಬಳಿಕ ತಮಿಳಿನಲ್ಲಿ ಕಾದುವಾಕುಲ ರೆಂಡು ಕಾದಲ್ ಎಂಬ ಚಿತ್ರದಲ್ಲಿ ನಟಿಯಾಗಿದ್ದರೂ ಸಹ ಬೋಲ್ಡ್ ಪಾತ್ರ ನಿರ್ವಹಿಸಿದ್ದರು. ಇನ್ನು ಪುಷ್ಪ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದ ಸಮಂತಾ ಕೆಲ ವರ್ಗದ ನೆಟ್ಟಿಗರಿಂದ ಟ್ರೋಲ್ ಆಗಿದ್ದರು.

  ಈ ನಾಲ್ಕು ದೊಡ್ಡ ಸಿನಿಮಾಗಳಲ್ಲಿ ನಟಿಸಬೇಕಿತ್ತು ಸಮಂತಾ! ಆದರೆ...ಈ ನಾಲ್ಕು ದೊಡ್ಡ ಸಿನಿಮಾಗಳಲ್ಲಿ ನಟಿಸಬೇಕಿತ್ತು ಸಮಂತಾ! ಆದರೆ...

  ಇನ್ನು ಮುಂಚಿನ ರೀತಿ ಉತ್ತಮ ಕಥಾಹಂದರವುಳ್ಳ ಚಿತ್ರ ಮಾಡಿ ತಿರುಗೇಟು ನೀಡಿರುವ ಸಮಂತಾ ರುಥ್ ಪ್ರಭು ಚಿತ್ರ ಬಾಕ್ಸ್ ಆಫೀಸ್ ವಿಚಾರದಲ್ಲೂ ಸಹ ಮೇಲುಗೈ ಸಾಧಿಸಿದ್ದಾರೆ. ಯಶೋದಾ ಚಿತ್ರ ಮೊದಲ ವಾರ ಪೂರೈಸಿದ್ದು ಸ್ಟಾರ್ ನಟರ ಚಿತ್ರಗಳ ರೇಂಜಿನ ಕಲೆಕ್ಷನ್ ಮಾಡಿ ಪ್ರೇಕ್ಷಕರನ್ನು ಬೆರಗಾಗಿಸಿದೆ. ಹಾಗಿದ್ದರೆ ಸಮಂತಾ ನಟನೆಯ ಯಶೋದಾ ಮೊದಲ ವಾರ ಗಳಿಸಿದ್ದೆಷ್ಟು ಹಣ ಹಾಗೂ ಲಾಭ ಪಡೆಯಲು ಆರಂಭಿಸಲು ಇನ್ನೆಷ್ಟು ಹಣ ಗಳಿಸಬೇಕು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

  ಮೊದಲ ವಾರದ ಗಳಿಕೆ ಎಷ್ಟು? ಲಾಭಕ್ಕೆ ಇನ್ನೆಷ್ಟು ಬೇಕು?

  ಮೊದಲ ವಾರದ ಗಳಿಕೆ ಎಷ್ಟು? ಲಾಭಕ್ಕೆ ಇನ್ನೆಷ್ಟು ಬೇಕು?

  ಸರೋಗಸಿ ಅಂಶದ ಸುತ್ತ ಸುತ್ತುವ ಥ್ರಿಲ್ಲರ್ ಯಶೋದಾ ಚಿತ್ರ ಮೊದಲ ವಾರ ವಿಶ್ವದಾದ್ಯಂತ 23.25 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಅಂದರೆ ವಿಶ್ವದಾದ್ಯಂತ 10.88 ಕೋಟಿ ಶೇರ್ ಕಲೆಕ್ಷನ್ ಮಾಡಿದೆ. ಇನ್ನು ಚಿತ್ರ 12 ಕೋಟಿ ಶೇರ್ ಕಲೆಕ್ಷನ್ ಮಾಡಿದ ನಂತರ ಚಿತ್ರ ಖರೀದಿಸಿದ ವಿತರಕರಿಗೆ ಲಾಭ ಆರಂಭವಾಗಲಿದ್ದು ಯಶೋದಾ ಇನ್ನೂ 1.12 ಕೋಟಿ ಶೇರ್ ಕಲೆಕ್ಷನ್ ಮಾಡಿದರೆ ವಿತರಕರು ಸೇಫ್ ಆಗಲಿದ್ದಾರೆ.

  ದಿನದಿಂದ ದಿನಕ್ಕೆ ಇಳಿಯುತ್ತಿದೆ ಕಲೆಕ್ಷನ್

  ದಿನದಿಂದ ದಿನಕ್ಕೆ ಇಳಿಯುತ್ತಿದೆ ಕಲೆಕ್ಷನ್

  ಯಶೋದಾ ಚಿತ್ರದ ಮೊದಲ 7 ದಿನಗಳ ಪ್ರತಿದಿನದ ಕಲೆಕ್ಷನ್ ವಿವರ:

  ಮೊದಲನೇ ದಿನ: 5.90 ಕೋಟಿ ರೂಪಾಯಿಗಳು

  ಎರಡನೇ ದಿನ: 6.10 ಕೋಟಿ ರೂಪಾಯಿಗಳು

  ಮೂರನೇ ದಿನ: 5.80 ಕೋಟಿ ರೂಪಾಯಿಗಳು

  ನಾಲ್ಕನೇ ದಿನ: 2.20 ಕೋಟಿ ರೂಪಾಯಿಗಳು

  ಐದನೇ ದಿನ: 1.45 ಕೋಟಿ ರೂಪಾಯಿಗಳು

  ಆರನೇ ದಿನ: 1.00 ಕೋಟಿ ರೂಪಾಯಿಗಳು

  ಏಳನೇ ದಿನ: 80 ಲಕ್ಷ ರೂಪಾಯಿಗಳು

  ಈ ವಾರಾಂತ್ಯವೇ ಕಾಪಾಡಬೇಕು

  ಈ ವಾರಾಂತ್ಯವೇ ಕಾಪಾಡಬೇಕು

  ಕಳೆದ ವಾರಾಂತ್ಯದ ದಿನಗಳಲ್ಲಿ ದಿನಕ್ಕೆ ಐದರಿಂದ ಆರು ಕೋಟಿ ರೂಪಾಯಿಗಳನ್ನು ಸರಾಗವಾಗಿ ಗಳಿಸಿದ್ದ ಯಶೋದಾ ನಂತರದ ದಿನಗಳಲ್ಲಿ ತೀವ್ರ ಇಳಿಕೆ ಕಂಡಿದ್ದು ಹಿನ್ನಡೆ ಅನುಭವಿಸಿದೆ. ಚಿತ್ರಕ್ಕೆ ಮೊದಲ ಮೂರು ದಿನಗಳ ಕಾಲ ಬಂದ ಪ್ರತಿಕ್ರಿಯೆ ಹಾಗೂ ಕಲೆಕ್ಷನ್ ನೋಡಿ ವಾರ ಕಳೆಯುವ ಮುನ್ನವೇ ಯಶೋದಾ ಲಾಭ ಗಳಿಸಲು ಆರಂಭಿಸಲಿದೆ ಎಂದು ಊಹಿಸಲಾಗಿತ್ತು. ಆದರೆ ಯಶೋದಾ ನಂತರದ ದಿನಗಳಲ್ಲಿ ಡಲ್ ಹೊಡೆದಿದ್ದು, ಇದೀಗ ಎರಡನೇ ವಾರದ ಶನಿವಾರ ಹಾಗೂ ಭಾನುವಾರಗಳೇ ಯಶೋದಾ ಕೈಹಿಡಿಬೇಕಿದೆ.

  English summary
  Samantha Ruth Prabhu starrer Yashoda first week box office report. Read on
  Friday, November 18, 2022, 16:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X