For Quick Alerts
  ALLOW NOTIFICATIONS  
  For Daily Alerts

  'ಯಶೋಧ' ಯಶಸ್ಸು, ಭಾಗ 2, 3ಕ್ಕೆ ತಯಾರಿ, ಸಮಂತಾನೇ ನಾಯಕಿ

  |

  ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟಿ ಸಮಂತಾ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆಸ್ಪತ್ರೆಯಲ್ಲಿರುವಾಗಲೇ ಅವರು ನಟಿಸಿರುವ 'ಯಶೋಧ' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಆರೋಗ್ಯ ಸಮಸ್ಯೆಯ ಕಾರಣದಿಂದ ಸಿನಿಮಾದ ಪ್ರಚಾರವನ್ನೂ ಮಾಡಲಿಲ್ಲ ಸಮಂತಾ.

  ಪ್ರಚಾರದ ಕೊರತೆ ಎದುರಿಸಿದರೂ ಸಹ 'ಯಶೋಧ' ಸಿನಿಮಾ ಹಿಟ್ ಆಗಿದೆ. ನವೆಂಬರ್ 11 ರಂದು ಬಿಡುಗಡೆ ಆದ ಈ ಸಿನಿಮಾ ಕ್ಲಾಸ್ ಹಾಗೂ ಮಾಸ್ ಎರಡೂ ವಿಧದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿದೆ.

  ಸಿನಿಮಾ ಯಶಸ್ವಿಯಾದ ಖುಷಿಗೆ ಚಿತ್ರತಂಡವು ನಿನ್ನೆಯಷ್ಟೆ ಸಕ್ಸಸ್ ಮೀಟ್ ಮಾಡಿದ್ದು, ಸಮಂತಾರ ಹೊರತಾಗಿ ನಡೆದ ಈ ಸಕ್ಸಸ್‌ಮೀಟ್‌ನಲ್ಲಿ ಸಿನಿಮಾದ ಬಗ್ಗೆ ಮಹತ್ವದ ನಿರ್ಧಾರವೊಂದನ್ನು ಹೊರಗೆಡವಿದೆ ಚಿತ್ರತಂಡ.

  'ಯಶೋಧ' ಸಿನಿಮಾದ ಭಾಗ ಎರಡು ಮಾಡಿರೆಂದು ಸಿನಿಮಾದ ನಿರ್ಮಾಪಕರೇ ನಿರ್ದೇಶಕ ಹರಿ ಮತ್ತು ಹರೀಶ್ ಅವರನ್ನು ಸಕ್ಸಸ್‌ ಮೀಟ್‌ನಲ್ಲಿ ಕೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿರುವ ನಿರ್ದೇಶಕ ಜೋಡಿ ಹರಿ-ಹರೀಶ್, 'ಯಶೋಧ' ಸಿನಿಮಾವು ಕ್ರೈಂ ಥ್ರಿಲ್ಲರ್ ಆಗಿದ್ದು, ದೇಶದಲ್ಲಿ ಹೊಸ-ಹೊಸ ಮಾದರಿಯ ಕ್ರೈಂಗಳು ಕಾಲ ಕಾಲಕ್ಕೆ ಆಗುತ್ತಲೇ ಇರುತ್ತವೆ ಹಾಗಾಗಿ 'ಯಶೋಧ' ಸಿನಿಮಾ ಸಹ ಮುಂದುವರೆಯುತ್ತದೆ ಎಂದಿದ್ದಾರೆ.

  'ಯಶೋಧ' ಸಿನಿಮಾದ ಭಾಗ 2 ಮಾತ್ರವಲ್ಲ ಭಾಗ ಮೂರು ಸಹ ಮಾಡುವ ಇರಾದೆ ಇದೆ. ಅಲ್ಲದೆ ಆ ಎಲ್ಲ ಸಿನಿಮಾಗಳಲ್ಲಿ ಸಮಂತಾ ಅವರೇ ನಾಯಕಿಯಾಗಿ ನಟಿಸಲಿದ್ದಾರೆ. ಎಲ್ಲರ ಜೀವನದಲ್ಲಿ ಏರು-ಪೇರು ಇರುವಂತೆಯೇ ಸಮಂತಾ ಸಹ ಈ ಹಿನ್ನೆಡೆ ಅನುಭವಿಸುತ್ತಿದ್ದಾರೆ ಆದರೆ ಅವರು ದೊಡ್ಡ ಮಟ್ಟದ ಎನರ್ಜಿಯೊಂದಿಗೆ ಮರಳಲಿದ್ದಾರೆ ಎಂದಿದ್ದಾರೆ ನಿರ್ದೇಶಕರು.

  'ಯಶೋಧ' ಸಿನಿಮಾವು ಸೆರೊಗಸಿ (ಬಾಡಿಗೆ ತಾಯ್ತನ) ಬ್ಯುಸಿನೆಸ್‌ ಬಗೆಗೆ ಬೆಳು ಚೆಲ್ಲುವ ಕತೆಯಾಗಿದೆ. ಹಣಕ್ಕಾಗಿ ಹೆಣ್ಣು ಮಕ್ಕಳನ್ನು ಬಾಡಿಗೆ ತಾಯಿಯರನ್ನಾಗಿ ಮಾಡುವ ಜಾಲವನ್ನು ಸಮಂತಾ ಭೇದಿಸುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಸಮಂತಾ ಆಕ್ಷನ್ ದೃಶ್ಯಗಳಲ್ಲಿ ಸಹ ನಟಿಸಿದ್ದಾರೆ.

  ನವೆಂಬರ್ 11 ರಂದು ಬಿಡುಗಡೆ ಆಗಿರುವ 'ಯಶೋಧ' ಸಿನಿಮಾ ಕಡಿಮೆ ಅವಧಿಯಲ್ಲಿಯೇ 25 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಸಿನಿಮಾಕ್ಕೆ ಹಾಕಿದ ಬಂಡವಾಳ ಮೀರಿ ಚಿತ್ರಮಂದಿರದಲ್ಲಿಯೇ ಲಾಭವನ್ನು ಸಿನಿಮಾ ಗಳಿಸಿದೆ. ಒಟಿಟಿ ಹಾಗೂ ಟಿವಿ ರೈಟ್ಸ್ ಮೂಲಕ ಇನ್ನೂ ದೊಡ್ಡ ಮಟ್ಟದ ಲಾಭವನ್ನು ಸಿನಿಮಾ ಗಳಿಸುವ ನಿರೀಕ್ಷೆ ಇದೆ.

  ಅನಾರೋಗ್ಯದಿಂದ ಬಳಲುತ್ತಿರುವ ಸಮಂತಾ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ನಟನೆಯಿಂದ ಬಿಡುವು ಪಡೆದಿದ್ದಾರೆ. ಅವರ ನಟನೆಯ 'ಖುಷಿ' ಸಿನಿಮಾ ಸಹ ಶೀಘ್ರವೇ ಬಿಡುಗಡೆ ಆಗಬೇಕಿದೆ ಆ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕ. ಇದರ ಹೊರತಾಗಿ ಇಂಗ್ಲೀಷ್ ಸಿನಿಮಾ 'ಅರೇಂಜ್‌ಮೆಂಟ್ಸ್ ಆಫ್ ಲವ್' ಸಿನಿಮಾ, ಬಾಲಿವುಡ್‌ನ ಒಂದು ಸಿನಿಮಾ ಹಾಗೂ ಒಂದು ವೆಬ್‌ ಸರಣಿಯಲ್ಲಿ ಸಹ ಸಮಂತಾ ನಟಿಸಲಿದ್ದಾರೆ.

  English summary
  Actress Samantha starrer Yashodha movie became hit in theaters. Collects 25 crore rs in five days. preperations start for Part 2 and 3.
  Friday, November 18, 2022, 9:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X