ಅಲ್ಲು ಅರ್ಜುನ್ ಹೇರ್ ಸ್ಟೈಲ್ ಬಗ್ಗೆ ಕಾಲೆಳೆದ ನಟಿ

ಟಾಲಿವುಡ್ ನಟ ಅಲ್ಲು ಅರ್ಜುನ್ ಅವರನ್ನು ಸ್ಟೈಲಿಶ್ ಸ್ಟಾರ್ ಎಂದು ಕರೆಯುತ್ತಾರೆ. ಆ ಬಿರುದಿಗೆ ತಕ್ಕಂತೆ ಅಲ್ಲು ಅರ್ಜುನ್‌ ಪ್ರತಿಯೊಂದು ಚಿತ್ರದಲ್ಲೂ ವಿಭಿನ್ನವಾದ ಲುಕ್, ಹೇರ್ ಸ್ಟೈಲ್ ಮೂಲಕ ಗಮನ ಸೆಳೆಯುತ್ತಾರೆ.

ಸದ್ಯ ಅಲಾ ವೈಕುಂಠಪುರಂಲ್ಲೊ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ್ದು, ಜನವರಿ 12 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಹೇರ್ ಸ್ಟೈಲ್ ವಿಚಾರಕ್ಕೆ ತೆಲುಗು ನಟಿ ಶ್ರೀ ರೆಡ್ಡಿ, ಅಲ್ಲು ಅರ್ಜುನ್ ಅವರನ್ನು ಟ್ರೋಲ್ ಮಾಡಿದ್ದಾರೆ.

ಅಲ್ಲು ಅರ್ಜುನ್ ಅವರು ಸಿನಿಮಾಗಳಲ್ಲಿ ನಿಜವಾದ ಹೇರ್ ಸ್ಟೈಲ್ ಹೊಂದಿರುತ್ತಾರಾ ಅಥವಾ ವಿಗ್ ಬಳಸುತ್ತಾರಾ? ಎಂದು ಕೇಳುವ ಮೂಲಕ ಸ್ಟೈಲಿಶ್ ಸ್ಟಾರ್ ಕುರಿತು ಕಾಮೆಂಟ್ ಮಾಡಿದ್ದಾರೆ. ಇದು ಅಲ್ಲು ಅರ್ಜುನ್ ಅಭಿಮಾನಿಗಳನ್ನು ಕೆರಳಿಸಿದ್ದು, ಶ್ರೀರೆಡ್ಡಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Sri Reddy Trolled To Allu Arjun

ಇದಕ್ಕೂ ಮುಂಚೆ ಕೂಡ ಅಲ್ಲು ಅರ್ಜುನ್ ಅವರನ್ನು ಶ್ರೀರೆಡ್ಡಿ ಟಾರ್ಗೆಟ್ ಮಾಡಿದ್ದರು. ಕೇರಳದಲ್ಲಿ ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ಅಲ್ಲು ಅರ್ಜುನ್ ಬಗ್ಗೆ ಕಾಮೆಂಟ್ ಮಾಡಿದ್ದ ನಟಿ ''ನಿನಗೆ 10 ಕೋಟಿ ವೆಚ್ಚದಲ್ಲಿ ವ್ಯಾನಿಟಿ ವ್ಯಾನ್ ತಯಾರಿಸಲು ದುಡ್ಡಿದೆ. ಕೇರಳದ ಜನತೆಗೆ ಸಹಾಯ ಮಾಡಲು ದುಡ್ಡಿಲ್ಲ'' ಎಂದು ಪ್ರಶ್ನಿಸಿದ್ದರು.

ಸಾಮಾನ್ಯವಾಗಿ ಅಲ್ಲು ಅರ್ಜುನ್ ಅವರು ಇಂತಹ ಹೇಳಿಕೆಗಳಿಗೆ, ಟ್ರೋಲ್ ಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಮೌನವಾಗಿದ್ದು ಇಂತಹ ವಿವಾದಗಳಿಂದ ದೂರ ಉಳಿಯುವುದು ಅವರ ವ್ಯಕ್ತಿತ್ವ.

More from Filmibeat

English summary
Tollywood actress Sri Reddy trolled to stylish star allu arjun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X