For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿಯ ಮುಂದಿನ ಸಿನಿಮಾಕ್ಕೆ ಈ ಸಿನಿಮಾವೇ ಸ್ಪೂರ್ತಿ

  |

  'RRR' ಮೂಲಕ ನಿರ್ದೇಶಕ ರಾಜಮೌಳಿ ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕನಾಗಿ ಬದಲಾಗಿದ್ದಾರೆ. ಇದೀಗ ಸಿನಿಮಾ ಆಸ್ಕರ್‌ಗೆ ಸಹ ಆಯ್ಕೆ ಆಗುವ ಹಂತದಲ್ಲಿದೆ.

  ಈ ನಡುವೆ ರಾಜಮೌಳಿ ಹೊಸ ಸಿನಿಮಾವೊಂದನ್ನು ಘೋಷಿಸಿದ್ದು, ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಸಿನಿಮಾದಲ್ಲಿ ಮಹೇಶ್ ಬಾಬು ನಾಯಕ ನಟರಾಗಿದ್ದು, ಸಿನಿಮಾವು ಸಾಹಸಮಯ ಜರ್ನಿಯ ಕತೆಯನ್ನು ಹೊಂದಿರಲಿದೆ ಎಂದು ಮಹೇಶ್ ಬಾಬು ಈ ಹಿಂದೆಯೇ ಹೇಳಿದ್ದರು.

  'ಕೆಜಿಎಫ್ 2', 'RRR' ಎರಡರ ಕಲೆಕ್ಷನ್ ಅನ್ನೂ ಒಂದೇ ವಾರಕ್ಕೆ ಹಿಂದಿಕ್ಕಿತು ಈ ಸಿನಿಮಾ!'ಕೆಜಿಎಫ್ 2', 'RRR' ಎರಡರ ಕಲೆಕ್ಷನ್ ಅನ್ನೂ ಒಂದೇ ವಾರಕ್ಕೆ ಹಿಂದಿಕ್ಕಿತು ಈ ಸಿನಿಮಾ!

  ಇದೀಗ ಸಿನಿಮಾ ಬಗ್ಗೆ ಕೆಲವು ಮಾಹಿತಿಯನ್ನು ರಾಜಮೌಳಿ ಬಿಚ್ಚಿಟ್ಟಿದ್ದು, ಈ ಸಾಹಸಮಯ ಕತೆಯನ್ನು ಆಯ್ಕೆ ಮಾಡಿಕೊಳ್ಳಲ್ಲಿಕ್ಕೆ ಕಾರಣವೇನು ಎಂಬುದನ್ನು ಸಹ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

  ''ನಾನು, ನಮ್ಮ ತಂದೆ ಹಾಗೂ ನನ್ನ ಸಹೋದರ ಮೂವರು ಸೇರಿ ಕತೆಯನ್ನು ಡೆವೆಲಪ್ ಮಾಡುತ್ತಿದ್ದೇವೆ. ಕತೆ ಆರಂಭಿಸಿ ಕೆಲವು ತಿಂಗಳುಗಳಷ್ಟೆ ಆಗಿದೆ. ಇದೊಂದು ಸಾಹಸಮಯ ಜರ್ನಿ ಒಳಗೊಂಡಿರುವ ಕತೆಯಾಗಿದೆ. ನಾನು ಬಹಳ ವರ್ಷಗಳಿಂದ ಅಡ್ವೇಂಚರ್ ವಿಷಯ ಹೊಂದಿರುವ ಕತೆಯೊಂದನ್ನು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ'' ಎಂದಿದ್ದಾರೆ.

  ''ಇಂಡಿಯಾನಾ ಜೋನ್ಸ್' ಸಿನಿಮಾ ನನ್ನ ಸಾರ್ವಕಾಲಿಕ ಮೆಚ್ಚಿನ ಸಿನಿಮಾ. ಅದೇ ರೀತಿಯ ಸಿನಿಮಾ ಒಂದನ್ನು ಮಾಡಬೇಕು ಎಂದು ಬಹಳ ದಿನಗಳಿಂದ ಅಂದುಕೊಂಡಿದ್ದೆ. ಕತೆಗಾರ ಡ್ಯಾನ್ ಬ್ರೌನ್ಸ್ ಮಾದರಿಯ ಕಾದಂಬರಿಗಳು ಸಹ ನನಗೆ ಬಹಳ ಇಷ್ಟ. ಈ ಮಾದರಿಯಲ್ಲಿಯೇ ಏನನ್ನಾದರೂ ಪ್ರಯತ್ನವನ್ನು ನಾವು ಈ ಸಿನಿಮಾದಲ್ಲಿ ಮಾಡುತ್ತಿದ್ದೇವೆ'' ಎಂದಿದ್ದಾರೆ ರಾಜಮೌಳಿ.

  ''ವಿಶ್ವದ ಹಲೆವೆಡೆ ನಡೆಯುವ ಸಾಹಸ ಪಯಣದ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ಮೂಲ ವಿನ್ಯಾಸ ಇದೇ ಆದರೂ ಕತೆಯನ್ನು ನಾವು ಇನ್ನಷ್ಟು ಡೆವೆಲಪ್ ಮಾಡುತ್ತಿದ್ದೇವೆ. ಅದಕ್ಕೆ ಇನ್ನಷ್ಟು ಸಮಯ ಬೇಕಾಗಲಿದೆ'' ಎಂದಿದ್ದಾರೆ ರಾಜಮೌಳಿ.

  SS Rajamouli Said He Is Huge Fan Of Indiana Jones

  ಮತ್ತೊಂದು ಸಂದರ್ಶನದಲ್ಲಿ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಅವರು ಸಹ ಮಹೇಶ್ ಬಾಬು ಸಿನಿಮಾದ ಬಗ್ಗೆ ಮಾತನಾಡುತ್ತಾ, ''ಇದೊಂದು ಅಪ್ಪಟ ಸಾಹಸಮಯ ವಸ್ತುವುಳ್ಳ ಸಿನಿಮಾ. ಅದರಲ್ಲಿಯೂ ಅರಣ್ಯದಲ್ಲಿ ನಡೆಯುವ ಸಾಹಸಗಳು ಸಿನಿಮಾದಲ್ಲಿರಲಿವೆ. ಅಮೆಜಾನ್ ಕಾಡುಗಳಲ್ಲಿ ಸಿನಿಮಾದ ಚಿತ್ರೀಕರಣ ಆಗಲಿದೆ'' ಎಂದಿದ್ದರು.

  ರಾಜಮೌಳಿ ಈಗಾಗಲೇ ತಮ್ಮ ಮುಂದಿನ ಸಿನಿಮಾಕ್ಕಾಗಿ ತಯಾರಿ ಆರಂಭಿಸಿದ್ದು, ವಿಶ್ವದ ಹಲವೆಡೆ ಸಂಚಾರ ನಡೆಸಿ ಹಲವು ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿ ತಮ್ಮ ಸಿನಿಮಾಕ್ಕೆ ಬಳಸಿಕೊಳ್ಳಲು ಯೋಜಿಸಿದ್ದಾರೆ. ಜೊತೆಗೆ ಸಿನಿಮಾದ ಲೊಕೇಶನ್‌ ಆಯ್ಕೆಯನ್ನೂ ಮಾಡುತ್ತಿದ್ದಾರೆ.

  ಮಹೇಶ್ ಬಾಬು ಪ್ರಸ್ತುತ ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಆರಂಭಿಸಲಿದ್ದಾರೆ. ಸಿನಿಮಾದ ಇನ್ನುಳಿದ ಪಾತ್ರಗಳ ಆಯ್ಕೆ ನಡೆಯಬೇಕಿದೆ.

  English summary
  SS Rajamouli said he is huge fan of Indiana Jones movie. He tells he is trying to make that kind of movie next.
  Tuesday, November 22, 2022, 6:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X