For Quick Alerts
  ALLOW NOTIFICATIONS  
  For Daily Alerts

  ರವಿ ತೇಜ ಜೊತೆ ಸಿನಿಮಾ ರಿಜೆಕ್ಟ್ ಮಾಡಿದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟಿ ತಮನ್ನಾ

  By ಫಿಲ್ಮ್ ಡೆಸ್ಕ್
  |

  ಟಾಲಿವುಡ್ ನಟಿ ತಮನ್ನಾ ಸಂಭಾವನೆ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚಿಗೆ ತಮನ್ನಾ ಬಗ್ಗೆ ಹೆಚ್ಚು ಸಂಭಾವನೆ ಬೇಡಿಕೆ ಇಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅಲ್ಲದೆ ಕಥೆ ಕೇಳುವ ಮೊದಲೆ ತಮನ್ನಾ ಸಂಭಾವನೆ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

  Boycott Prabhas !! ಕನ್ನಡಿಗರು ಗರಂ | Filmibeat Kannada

  ನಟ ರವಿ ತೇಜಾ ಸಿನಿಮಾಗೆ ಆಫರ್ ಬಂದಾಗ ಕಥೆ ಕೇಳುವ ಮೊದಲೆ ತಮನ್ನಾ ಸಿನಿಮಾ ರಿಜೆಕ್ಟ್ ಮಾಡಿದ್ದಾರಂತೆ. ಭಾರಿ ಮೊತ್ತದ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿನಿಮಾತಂಡ ಮಿಲ್ಕಿ ಬ್ಯೂಟಿ ಕೇಳಿದ್ದಷ್ಟು ಸಂಭಾವನೆ ನೀಡಲು ತಯಾರಿರಲಿಲ್ಲದೆ ಸಿನಿಮಾದಿಂದ ಕೈಬಿಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೀಗ ಈ ಬಗ್ಗೆ ತಮನ್ನಾ ಮಾತನಾಡಿದ್ದಾರೆ. ಇತ್ತೀಚಿಗೆ ಸಂದರ್ಶವೊಂದರಲ್ಲಿ ತಮನ್ನಾ ಸಂಭಾವನೆ ವಿಚಾರವಾಗಿ ಹೇಳಿದ್ದು ಹೀಗೆ. ಮುಂದೆ ಓದಿ...

  'ನೆಪೋಟಿಸಂ' ಎಲ್ಲಾ ಕ್ಷೇತ್ರದಲ್ಲಿಯೂ ಇದೆ, ಕಠಿಣ ಶ್ರಮ-ಸಾಮರ್ಥ್ಯದ ಮುಂದೆ ಯಾವುದೂ ಇಲ್ಲ- ನಟಿ ತಮನ್ನಾ'ನೆಪೋಟಿಸಂ' ಎಲ್ಲಾ ಕ್ಷೇತ್ರದಲ್ಲಿಯೂ ಇದೆ, ಕಠಿಣ ಶ್ರಮ-ಸಾಮರ್ಥ್ಯದ ಮುಂದೆ ಯಾವುದೂ ಇಲ್ಲ- ನಟಿ ತಮನ್ನಾ

  2.5 ಕೋಟಿ ಬೇಡಿಕೆ ಇಟ್ಟಿದ್ರಾ ತಮನ್ನಾ?

  2.5 ಕೋಟಿ ಬೇಡಿಕೆ ಇಟ್ಟಿದ್ರಾ ತಮನ್ನಾ?

  ನಟ ರವಿತೇಜಾ ಜೊತೆ ನಟಿಸಲು ತಮನ್ನಾ ಬರೋಬ್ಬರಿ 2.5 ಕೋಟಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಂಭಾವನೆ ಕಡಿತದ ಬಗ್ಗೆ ಚರ್ಚೆಯಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮನ್ನಾ ಭಾರಿ ಮೊತ್ತದ ಸಂಭಾವನೆ ಬೇಡಿಕೆ ಇಟ್ಟಿದ್ದು ನೋಡಿ ಚಿತ್ರತಂಡಕ್ಕೆ ಶಾಕ್ ಆಗಿದೆಯಂತೆ. ಹಾಗಾಗಿ ಸಿನಿಮಾ ಸಿನಿಮಾದಿಂದ ತಮನ್ನಾ ಅವರನ್ನು ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

  ತಮನ್ನಾ ಪ್ರತಿಕ್ರಿಯೆ

  ತಮನ್ನಾ ಪ್ರತಿಕ್ರಿಯೆ

  ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದಿರುವ ತಮನ್ನಾ ಮಾರುಕಟ್ಟೆ ಮೌಲ್ಯದ ಬಗ್ಗೆ ಮಾತನಾಡಿದ್ದಾರೆ. "ಒಬ್ಬ ನಟನ ಮೌಲ್ಯವನ್ನು ಬಾಕ್ಸ್ ಆಫೀಸ್ ನಿಂದ ನಿರ್ಧರಿಸುತ್ತೆ. ಆದರೀಗ ನಾನು ಬಾಕ್ಸ್ ಆಫೀಸ್ ನಲ್ಲಿ ನಿರ್ದಿಷ್ಟ ಪ್ರಮಾಣದ ಹಣ ದೋಚಲು ಸಮರ್ಥಳಾಗಿದ್ದೀನಿ. ಅದು ನನ್ನ ಹಣಕಾಸಿನ ಮೌಲ್ಯವನ್ನು ನಿರ್ಧರಿಸುತ್ತೆ. ಇದರಿಂದ ನಿರ್ಮಾಪಕರು ನನಗೆ ಒಂದು ನಿರ್ಧಿಷ್ಟ ಮೊತ್ತದ ಸಂಭಾವನೆ ನೀಡಲು ಸಿದ್ಧರಾಗಿರುತ್ತಾರೆ. ನಾನು ಕೇಳಿದೆ ಅಂತ ಮಾತ್ರವಲ್ಲ, ನಾನು ಆ ಹಣಕ್ಕೆ ಯೋಗ್ಯಳಾಗಿರುವುದರಿಂದ ಮಾತ್ರ. ಏಕೆಂದರೆ ಅದು ನನ್ನ ಮಾರುಕಟ್ಟೆ ಮೌಲ್ಯವಾಗಿದೆ. ಎಂದು ಹೇಳಿದ್ದಾರೆ.

  ದೊಡ್ಡ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡಲು ತಮನ್ನಾ ಕೇಳಿದ್ರು ಭಾರಿ ಮೊತ್ತದೊಡ್ಡ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡಲು ತಮನ್ನಾ ಕೇಳಿದ್ರು ಭಾರಿ ಮೊತ್ತ

  ಮಾರುಕಟ್ಟೆ ಮೌಲ್ಯದ ಬಗ್ಗೆ ತಮನ್ನಾ ಮಾತು

  ಮಾರುಕಟ್ಟೆ ಮೌಲ್ಯದ ಬಗ್ಗೆ ತಮನ್ನಾ ಮಾತು

  "ಬಾಕ್ಸ್ ಆಫೀಸ್ ಯಶಸ್ಸಿನ ಮೇಲೆ ಅವಲಂಬಿತವಾಗಿರುತ್ತೆ. ನಾನು ನಿರ್ಧಿಷ್ಟಮೊತ್ತವನ್ನು ಕೇಳಲು ಸಾಧ್ಯವಿಲ್ಲ. ಆದರೆ ಅದನ್ನು ನೀಡಲಾಗುತ್ತೆ ಎಂದು ನಿರೀಕ್ಷಿಸಲಾಗಿದೆ. ಅದಕ್ಕೆ ನಾನು ಯೋಗ್ಯಳಾಗಿರಬೇಕು. ಮಾರುಕಟ್ಟೆ ಆ ಮೊತ್ತದ ಹಣವನ್ನು ಬೇಡಿಕೆ ಇಡಲು ಅವಕಾಶ ನೀಡಬೇಕು" ಎಂದು ಹೇಳಿದ್ದಾರೆ.

  ಮಿಲ್ಕಿ ಬ್ಯೂಟಿಯ ಸಿನಿಮಾಗಳು

  ಮಿಲ್ಕಿ ಬ್ಯೂಟಿಯ ಸಿನಿಮಾಗಳು

  ತಮನ್ನಾ ಕೊನೆಯದಾಗಿ ತಮಿಳಿನ ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ತಮನ್ನಾ ಬಳಿ ಮೂರು ಸಿನಿಮಾಗಳಿವೆ. ಎರಡು ತೆಲುಗು ಮತ್ತು ಒಂದು ಹಿಂದಿ ಸಿನಿಮಾದಲ್ಲಿಯೂ ಬ್ಯುಸಿಯಾಗಿದ್ದಾರೆ.

  English summary
  Actress Tamanna Bhatia reaction about rejecting the offer to work with Ravi Teja over Remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X