ತೆಲುಗು ನಟ ಶ್ರೀಕಾಂತ್ ಅವರ ತಂದೆ ನಿಧನ
ತೆಲುಗು ನಟ ಶ್ರೀಕಾಂತ್ ಅವರ ತಂದೆ ಪರಮೇಶ್ವರ ರಾವ್ (70) ನಿಧನರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಪರಮೇಶ್ವರ ರಾವ್ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಹಲವು ವರ್ಷಗಳಿಂದ ಶ್ರೀಕಾಂತ್ ಅವರ ತಂದೆಗೆ ಉಸಿರಾಟ ತೊಂದರೆ ಕಾಡುತ್ತಿತ್ತು. ನಾಲ್ಕೈದು ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಮೂಲತಃ ಕರ್ನಾಟಕದವರಾಗಿದ್ದ ಪರಮೇಶ್ವರ್ ರಾವ್ ಕರ್ನಾಟಕದ ಗಂಗಾವತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿದ್ದರು. ಈಗ ಪತ್ನಿ ಝಾನ್ಸಿ ಮತ್ತು ಶ್ರೀಕಾಂತ್, ಅನಿಲ್ ಹಾಗೂ ನಿರ್ಮಲ ಅವರನ್ನು ಬಿಟ್ಟು ಅಗಲಿದ್ದಾರೆ.

ಶ್ರೀಕಾಂತ್ ಅವರ ತಂದೆ ನಿಧನಕ್ಕೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ. ಚಿರಂಜೀವಿ ಸೇರಿದಂತೆ ಹಲವು ನಟರು, ನಿರ್ದೇಶಕ, ನಿರ್ಮಾಪಕರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆದಿದೆ.
More from Filmibeat
English summary
Telugu actor srikanth's father Parameshwar Rao (70) passed away last mid night.


Click it and Unblock the Notifications











