For Quick Alerts
  ALLOW NOTIFICATIONS  
  For Daily Alerts

  'ನನ್ನ ಹಾಗೂ ಪವಿತ್ರಾ ಲೋಕೇಶ್ ಸಂಬಂಧ ರಮ್ಯಾಗೆ ಹೇಳುವ ಅಗತ್ಯವಿಲ್ಲ': ತೆಲುಗು ನಟ ನರೇಶ್!

  |

  ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಟಾಲಿವುಡ್‌ ಅಷ್ಟೇ ಅಲ್ಲ ಸ್ಯಾಂಡಲ್‌ವುಡ್‌ನಲ್ಲೂ ಚರ್ಚೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಮಾಧಮ್ಯಗಳ ಮುಂದೆ ಪ್ರತಿಕ್ರಿಯೆ ನೀಡಿದ್ದರು. ನರೇಶ್ ಬಗ್ಗೆ ಹತ್ತು ಹಲವು ಆರೋಪಗಳನ್ನು ಮಾಡಿದ್ದರು.

  ನರೇಶ್ ಹಾಗೂ ಪವಿತ್ರಾ ಲೋಕೇಶ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಆದರೂ, ತೆಲುಗು ನರೇಶ್ ಆಗಲಿ, ಪವಿತ್ರಾ ಲೋಕೇಶ್ ಆಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ತೆಲುಗು ನಟ ನರೇಶ್ ಕನ್ನಡದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

  ಆಕೆಗೆ ಆಸೆ ಜಾಸ್ತಿ, ಆ ಮಹಾನುಭಾವನೊಂದಿಗೂ ಇನ್ನು 6 ತಿಂಗಳು ಅಷ್ಟೇ': ಸುಚೇಂದ್ರ ಪ್ರಸಾದ್! ಆಕೆಗೆ ಆಸೆ ಜಾಸ್ತಿ, ಆ ಮಹಾನುಭಾವನೊಂದಿಗೂ ಇನ್ನು 6 ತಿಂಗಳು ಅಷ್ಟೇ': ಸುಚೇಂದ್ರ ಪ್ರಸಾದ್!

  ತನ್ನ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಅಷ್ಟಕ್ಕೂ ರಮ್ಯಾ ರಘುಪತಿ ತನ್ನ ಪತಿ ನರೇಶ್ ಬಗ್ಗೆ ಮಾಡಿದ ಆರೋಪವೇನು? ಈ ಆರೋಪಗಳಿಗೆ ನರೇಶ್ ಕೊಟ್ಟ ತಿರುಗೇಟು ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ..

  Exclusive:ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟನ ನರೇಶ್‌ ಮದುವೆ: ಅಸಲಿ ಮ್ಯಾಟರ್ ಏನು?Exclusive:ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟನ ನರೇಶ್‌ ಮದುವೆ: ಅಸಲಿ ಮ್ಯಾಟರ್ ಏನು?

  'ಹೆಣ್ಣು ಬಾಕ' ಎಂದರೇನು?

  'ಹೆಣ್ಣು ಬಾಕ' ಎಂದರೇನು?

  ಟಾಲಿವುಡ್‌ ನಟ ನರೇಶ್ ಇಂದು (ಜೂನ್ 30) ಮಾಧ್ಯಮಗಳ ಮುಂದೆ ಪ್ರತ್ಯಕ್ಷ ಆಗಿದ್ದಾರೆ. ತನ್ನ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಆರೋಪಗಳಿಗೆ ತಿರುಗೇಟು ನೀಡುತ್ತಿದ್ದಾರೆ. ಅಲ್ಲದೆ ತನ್ನ ಹಾಗೂ ಪವಿತ್ರ ಲೋಕೇಶ್ ಅವರ ಸಂಬಂಧದ ಬಗ್ಗೆನೂ ಮಾತಾಡಿದ್ದಾರೆ. ಟಿವಿ9 ಕನ್ನಡಗೆ ನರೇಶ್ ನೀಡಿದ ಸಂದರ್ಶನದಲ್ಲಿ ರಮ್ಯಾ ರಘುಪತಿಗೆ ಟಕ್ಕರ್ ಕೊಟ್ಟಿದ್ದಾರೆ. " ಆಕೆ ಹೆಣ್ಣು ಬಾಕ ಎಂದು ಹೇಳಿದ್ದಾರೆ. ಹೆಣ್ಣುಬಾಕ ಎಂದು ಏನು? ಅದರ ಅರ್ಥ ಅವರಿಗೆ ಗೊತ್ತಿದೆಯೇ? ನಾನು ಹಾಗೆಯೇ ಇದ್ದರೆ. ನನ್ನಿಂದ ತೊಂದರೆಗೆ ಒಳಗಾದ ಆ ಹೆಣ್ಣು ಮಕ್ಕಳೆಲ್ಲಾ ಯಾಕೆ ಸುಮ್ಮನಿದ್ದಾರೆ. ಅಂತಹ ಆರೋಪ ಯಾರೂ ಮಾಡುತ್ತಿಲ್ಲವಲ್ಲ." ಎಂದು ನರೇಶ್ ಪ್ರಶ್ನೆಮಾಡಿದ್ದಾರೆ.

  ಹೆಣ್ಣು ಬಾಕ ಎಂದಿದ್ದ ನರೇಶ್ ಪತ್ನಿ

  ಹೆಣ್ಣು ಬಾಕ ಎಂದಿದ್ದ ನರೇಶ್ ಪತ್ನಿ

  ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಮದುವೆ ವಿಷಯ ಎಲ್ಲೆಡೆ ಕಿಚ್ಚು ಹಚ್ಚುತ್ತಿದೆ. ಈ ವೇಳೆ ಕೆಲವೇ ದಿನಗಳ ಹಿಂದೆ ಮೂರನೇ ಪತ್ನಿ ರೆಬೆಲ್ ಆಗಿದ್ದಾರೆ. ತನ್ನ ಪತಿ ನರೇಶ್ ಬಗ್ಗೆ ಸ್ಟೋಟಕ ಮಾಹಿತಿಯನ್ನು ಹೊರಹಾಕಿದ್ದರು. "ನರೇಶ್ ಒಬ್ಬ ಹೆಣ್ಣುಬಾಕ. ಆತ ಹೆಣ್ಣುಬಾಕ ಅನ್ನುವುದು ಮದುವೆಯಾದ ಮೂರು ವರ್ಷಕ್ಕೆ ತಿಳಿದಿತ್ತು. ಒಳ್ಳೆ ಮಾತಿನಲ್ಲಿ ಹೇಳಿದ್ದು ಆಯ್ತು. ಅತ್ತು ಹೇಳಿದ್ದಾಯ್ತು. ಯಾವುದೂ ಪ್ರಯೋಜನ ಆಗಿಲ್ಲ." ಎಂದು ಪವರ್ ಟಿವಿ ಸಂದರ್ಶನದಲ್ಲಿ ಹೇಳಿದ್ದರು.

  ಪವಿತ್ರಾ ಜೊತೆಗಿನ ಸಂಬಂಧದ ವಿವರಿಸುವ ಅಗತ್ಯವಿಲ್ಲ

  ಪವಿತ್ರಾ ಜೊತೆಗಿನ ಸಂಬಂಧದ ವಿವರಿಸುವ ಅಗತ್ಯವಿಲ್ಲ

  ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ಕಳೆದ 6 ವರ್ಷಗಳಿಂದ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಅವರು ಒಟ್ಟಿಗೆ ಇದ್ದಾರೆ ಎಂದು ಹೇಳಿದ್ದರು. ಇದಕ್ಕೂ ನರೇಶ್ ತಿರುಗೇಟು ನೀಡಿದ್ದಾರೆ. " ನನ್ನ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಬೆಸ್ಟ್ ಫ್ರೆಂಡ್ಸ್. ನಮ್ಮಿಬ್ಬರ ಸ್ನೇಹ ಹಾಗೂ ಸಂಬಂಧದದ ಬಗ್ಗೆ ಮೂರನೇ ಪತ್ನಿ ರಮ್ಯಾ ರಘುಪತಿಗೆ ಹೇಳುವ ಅಗತ್ಯವಿಲ್ಲ." ಎಂದು ಆಕ್ರೋಶ ಹೊರಹಾಕಿದ್ದಾರೆ.

  ರಮ್ಯಾ ಹೇಳಿದ್ದು ಸುಳ್ಳು

  ರಮ್ಯಾ ಹೇಳಿದ್ದು ಸುಳ್ಳು

  "ರಮ್ಯಾ ರಘುಪತಿ ತನ್ನ ವಿರುದ್ಧ ಮಾಡಿದ ಆರೋಪಗಳೆಲ್ಲಾ ಸುಳ್ಳು. ಆಕೆಗೆ ಮಾನಸಿಕ ಸಮಸ್ಯೆ ಇರಬೇಕು." ಎಂದು ತೆಲುಗು ನಟ ನರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ರಮ್ಯಾ ರಘುಪತಿ ಕೂಡ ಪತಿ ಅಫೇರ್ ಬಗ್ಗೆ ಕಿಡಿಕಾರಿದ್ದರು. ಮಹಿಳೆಯೊಂದಿಗಿನ ಅಫೇರ್‌ನಿಂದ ಬೇಸತ್ತು ಹೋಗಿದ್ದೇನೆ ಎಂದು ಹೇಳಿದ್ದರು. " ಆತನ ಅಫೇರ್‌ಗಳಿಂದ ನನಗೆ ಬೇಜಾರು ಆಗಿತ್ತು. ಸೆಂಚುರಿ ಆಯ್ತಾ ಅಂತ ಕೇಳಿದ್ದೆ. " ಎಂದು ಪತಿಯ ಬಗ್ಗೆ ಕೆಂಡಕಾರಿದ್ದರು.

  English summary
  Telugu Actor V K Naresh Reaction On 3rd Wife Ramya Raghupathi About Pavithra Lokesh, Know More
  Thursday, June 30, 2022, 15:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X