For Quick Alerts
  ALLOW NOTIFICATIONS  
  For Daily Alerts

  ಟಿಆರ್‌ಪಿ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ತೆಲುಗು ಬಿಗ್‌ಬಾಸ್

  |

  ಟಿಆರ್‌ಪಿ ಗಳಿಕೆಯಲ್ಲಿ ತೆಲುಗು ಬಿಗ್‌ಬಾಸ್ ಹೊಸ ದಾಖಲೆ ಬರೆದಿದೆ. ಇತರ ಯಾವುದೇ ಭಾಷೆಯ ಬಿಗ್‌ಬಾಸ್‌ ಶೋಗಿಂತಲೂ ಟಿಆರ್‌ಪಿ ಗಳಿಕೆಗಿಂತಲೂ ತೆಲುಗು ಗಳಿಕೆ ಹೆಚ್ಚಾಗಿದೆ.

  ಹೌದು, ಸಾಮಾನ್ಯವಾಗಿ ಕನ್ನಡ ಮತ್ತು ಹಿಂದಿ ಬಿಗ್‌ಬಾಸ್ ಶೋ ಗೆ ಅತಿ ಹೆಚ್ಚು ಟಿಆರ್‌ಪಿ ಸಿಗುತ್ತಿತ್ತು. ಆದರೆ ತೆಲುಗು ಬಿಗ್‌ಬಾಸ್ ಈ ಬಾರಿ ಅತಿ ಹೆಚ್ಚು ಟಿಆರ್‌ಪಿ ಗಳಿಸುತ್ತಿದೆ.

  ತೆಲುಗು ಬಿಗ್‌ಬಾಸ್‌ 4 ಸೀಸನ್‌ನ ಈ ವರೆಗಿನ ಸರಾಸರಿ ಟಿಆರ್‌ಪಿ 18.5 ಎಂದು ಹೇಳಲಾಗುತ್ತಿದ್ದು. ಇದು ಭಾರತದ ಇತರೆ ಭಾಷೆಗಳ ಬಿಗ್‌ಬಾಸ್ ಶೋ ಗಿಂತಲೂ ಹೆಚ್ಚಂತೆ.

  ಚಿತ್ರಮಂದಿರಗಳಿಲ್ಲ, ಬೇರೆ ರಿಯಾಲಿಟಿ ಶೋ ಸಹ ಇಲ್ಲ

  ಚಿತ್ರಮಂದಿರಗಳಿಲ್ಲ, ಬೇರೆ ರಿಯಾಲಿಟಿ ಶೋ ಸಹ ಇಲ್ಲ

  ಕೊರೊನಾ ಕಾರಣಕ್ಕೆ ಚಿತ್ರಮಂದಿರಗಳು ತೆರೆದಿಲ್ಲ, ಕೊರೊನಾ ಕಾರಣಕ್ಕೆ ಬೇರೆ ರಿಯಾಲಿಟಿ ಶೋಗಳು ಯಾವುದೂ ಪ್ರಸಾರವಾಗುತ್ತಿಲ್ಲದ ಕಾರಣ ತೆಲುಗು ಬಿಗ್‌ಬಾಸ್ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಅದರಲ್ಲಿಯೂ ಈ ಬಾರಿ ನಾಗಾರ್ಜುನ ನಿರೂಪಣೆ ನೋಡುಗರನ್ನು ಸೆಳೆದಿದೆಯಂತೆ.

  ಒಳ್ಳೆಯ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ

  ಒಳ್ಳೆಯ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ

  ಬಿಗ್‌ಬಾಸ್ ಮನೆಯ ಒಳಗೆ ಈ ಬಾರಿ ಒಳ್ಳೆಯ ಪ್ರದರ್ಶಕರು ಇದ್ದಾರೆ. ಎಲ್ಲಾ ಕ್ಷೇತ್ರದ, ವಯಸ್ಸಿನ, ಗುಣದ ಸ್ಪರ್ಧಿಗಳನ್ನು ಬಿಗ್‌ಬಾಸ್ ಗೆ ಆರಿಸಲಾಗಿರುವುದು ತೆಲುಗು ಬಿಗ್‌ಬಾಸ್‌ನ ಯಶಸ್ಸಿಗೆ ಕಾರಣ ಎನ್ನಲಾಗುತ್ತಿದೆ.

  ನಿರೂಪಣೆ ಮಾಡುವುದಿಲ್ಲ ನಾಗಾರ್ಜುನ

  ನಿರೂಪಣೆ ಮಾಡುವುದಿಲ್ಲ ನಾಗಾರ್ಜುನ

  ಆದರೆ ಬಿಗ್‌ಬಾಸ್ ಆಯೋಜಕರಿಗೆ ಆಘಾತಕಾರಿ ಸುದ್ದಿಯೆಂದರೆ, ನಿರೂಪಕ ನಾಗಾರ್ಜುನ ಬಿಗ್‌ಬಾಸ್ ನ ಉಳಿದ ಎಪಿಸೋಡ್‌ಗಳ ನಿರೂಪಣೆ ಮಾಡುವುದು ಅನುಮಾನ. ಚಿತ್ರೀಕರಣಕ್ಕಾಗಿ ಮಲೇಷ್ಯಾಕ್ಕೆ ತೆರಳುತ್ತಿರುವ ಕಾರಣ ನಾಗಾರ್ಜುನ ಬಿಗ್‌ಬಾಸ್ ನಿರೂಪಣೆ ಮಾಡುವುದಿಲ್ಲವಂತೆ.

  Rocking Star Yash son, ಅಪ್ಪ-ಮಗನ ಕ್ಯೂಟ್ ವಿಡಿಯೋ ರಾಧಿಕಾ ಪಂಡಿತ್ | Filmibeat Kannada
  ಕನ್ನಡದಲ್ಲಿ ಈ ವರ್ಷ ಇಲ್ಲ ಬಿಗ್‌ಬಾಸ್

  ಕನ್ನಡದಲ್ಲಿ ಈ ವರ್ಷ ಇಲ್ಲ ಬಿಗ್‌ಬಾಸ್

  ಇನ್ನು ಹಿಂದಿ ಹಾಗೂ ತಮಿಳು ಬಿಗ್‌ಬಾಸ್‌ಗಳು ಈಗಾಗಲೇ ಪ್ರಾರಂಭವಾಗಿವೆ. ತಮಿಳಿನಲ್ಲಿ ಕಮಲ್‌ ಹಾಸನ್ ನಿರೂಪಕರಾಗಿದ್ದರೆ, ತಮಿಳಿನಲ್ಲಿ ಯಥಾವತ್ತು ಸಲ್ಮಾನ್ ಖಾನ್ ನಿರೂಪಿಸುತ್ತಿದ್ದಾರೆ. ಆದರೆ ಕನ್ನಡದ ಬಿಗ್‌ ಬಾಸ್ ಈ ವರ್ಷ ಪ್ರಾರಂಭವಾಗುವುದಿಲ್ಲ ಎನ್ನಲಾಗಿದೆ.

  English summary
  Telugu bigg boss 4 show gets impressive TRP. Its doing better than Hindi Bigg Boss. Nagarjuna hosting the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X