For Quick Alerts
  ALLOW NOTIFICATIONS  
  For Daily Alerts

  Krishna Passes Away : ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

  |

  ದಕ್ಷಿಣ ಭಾರತ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತೆಲುಗಿನ ದಿಗ್ಗಜ ನಟ ಹಾಗೂ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ(79) ಕೊನೆಯುಸಿರೆಳೆದಿದ್ದಾರೆ. ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ತೆಲುಗು ಚಿತ್ರರಂಗಕ್ಕೆ ಕೃಷ್ಣ ಕೊಡುಗೆ ಅಪಾರ. ಕಾರ್ಡಿಯಾಟಿಕ್ ಅಟ್ಯಾಕ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣ ಇಂದು(ನವೆಂಬರ್ 15) ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

  ಘಟ್ಟಮನೇನಿ ಕೃಷ್ಣ ಅವರ ಪೂರ್ಣ ಹೆಸರು ಘಟ್ಟಮನೇನಿ ಶಿವರಾಮಕೃಷ್ಣಮೂರ್ತಿ. 1942 ಮೇ 31, ತೆನಾಲಿ ಬುರ್ರಿಪಾಳ್ಯದಲ್ಲಿ ಅವರು ಜನಿಸಿದರು. 70, 80 ರ ದಶಕಗಳಲ್ಲಿ ಸ್ಟಾರ್ ನಟರಾಗಿ ಮಿಂಚಿ ಸೂಪರ್ ಸ್ಟಾರ್ ಬಿರುದು ಪಡೆದುಕೊಂಡಿದ್ದರು. ಲ್ಲಿ ತೆಲುಗು ಸಿನಿಮಾ ಜನಪ್ರಿಯತೆ ಗಳಿಸಿ ಸೂಪರ್ ಸ್ಟಾರ್‌ಗಾ ಪ್ರಖ್ಯಾತಿ ಪಡೆದರು. ಬಹು ಅಂಗಾಂಗ ವೈಫಲ್ಯದಿಂದ ಅವರು ಬಳಲುತ್ತಿದ್ದ ಕೃಷ್ಣ ಅವರಿಗೆ ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ವೈದ್ಯರು ಕೂಡ ಅವರ ಸ್ಥಿತಿ ಗಂಭೀರವಾಗಿದೆ. 24 ಗಂಟೆಗಳ ಕಾಲ ಅಬ್ರರ್ವೇಷನ್‌ನಲ್ಲಿ ಇಟ್ಟಿದ್ದೇವೆ ಎಂದು ಹೇಳಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಘಟ್ಟಮನೇನಿ ಕೃಷ್ಣ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

  ಬಿಎಸ್ಸಿ ಪದವೀಧರರಾಗಿದ್ದ ಕೃಷ್ಣ ಸಿನಿಮಾರಂಗಕ್ಕೆ ಬರುವ ಆಸೆಯಿಂದ ಮೊದಲಿಗೆ ನಾಟಕಗಳಲ್ಲಿ ನಟಿಸಲು ಆರಂಭಿಸಿದರು. 1964 'ತೇನ ಮನಸುಲು' ಸಿನಿಮಾ ಮೂಲಕ ಕೃಷ್ಣಗೆ ಹೀರೋ ಆಗಿ ದೊಡ್ಡ ಬ್ರೇಕ್ ಸಿಕ್ಕಿತ್ತು. ನಟರಾಗಿ ಮಾತ್ರವಲ್ಲದೇ 16 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. 340ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳಲ್ಲಿ ನಟಿಸುತ್ತಿರಲಿಲ್ಲ. ಆದರೆ ಅವರ ಮಕ್ಕಳಾದ ಮಹೇಶ್ ಬಾಬು ಹಾಗೂ ನರೇಶ್ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಮಹೇಶ್ ಬಾಬು ತೆಲುಗಿನ ಸ್ಟಾರ್‌ ನಟರಲ್ಲಿ ಒಬ್ಬರಾಗಿದ್ದಾರೆ. ಗೂಡಚಾರಿ 116, ಪ್ರೈವೇಟ್ ಮಾಸ್ಟರ್, ಮಂಚಿ ಕುಟುಂಬಂ, ಮೋಸಗಾಳ್ಲಕು ಮೋಸಗಾಡು, ಪಂಡಂಟಿ ಕಾಪುರಂ, ಅಲ್ಲೂರಿ ಸೀತಾರಾಮರಾಜು ಕೃಷ್ಣ ನಟಿಸಿದ ಕೆಲ ಸೂಪರ್ ಹಿಟ್ ಸಿನಿಮಾಗಳು. ಕಾಂಗ್ರೆಸ್ ಪಕ್ಷ ಸೇರಿ ಲೋಕಸಭಾ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. 2009ರಲ್ಲಿ ಪದ್ಮಭೂಷಣ ಗೌರವವೂ ಸಿಕ್ಕಿತ್ತು. ಹಿರಿಯ ಮಗ ರಮೇಶ್ ಬಾಬು ಇದೇ ವರ್ಷ ಜನವರಿ ತಿಂಗಳಲ್ಲಿ ಕೊನೆಯಿಸಿರೆಳೆದಿದ್ದರು. ಮೊದಲ ಪತ್ನಿ ಇಂದಿರಾ ದೇವಿ 2 ತಿಂಗಳ ಹಿಂದೆ ನಿಧನರಾದರೆ ಎರಡನೇ ಪತ್ನಿ ವಿಜಯ ನಿರ್ಮಲಾ 2019ರಲ್ಲಿ ಕಣ್ಮುಚ್ಚಿದ್ದರು.

  English summary
  Veteran Telugu actor Ghattamaneni Krishna passes away at a hospital in Hyderabad due to cardiac arrest.
  Tuesday, November 15, 2022, 7:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X