For Quick Alerts
  ALLOW NOTIFICATIONS  
  For Daily Alerts

  'ನನಗೂ ಕಾಸ್ಟಿಂಗ್ ಕೌಚ್ ಅನುಭವವಾಗಿದೆ' ಎಂದ 'ಮಾಣಿಕ್ಯ'ನ ನಾಯಕಿ ವರಲಕ್ಷ್ಮೀ

  |

  ತೆಲುಗು ಚಿತ್ರರಂಗದ ಖ್ಯಾತ ನಟಿ ವರಲಕ್ಷ್ಮೀ ಶರತ್ ಕುಮಾರ್ ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ವರಲಕ್ಷ್ಮೀ ಚಿತ್ರರಂಗದಲ್ಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಇಂಥ ವಿಚಾರದಲ್ಲಿ ನಟಿಯರು 'ನೋ' ಎಂದು ಹೇಳಿ ಹೋಗುವುದನ್ನು ಮೊದಲು ಕಲಿಯಬೇಕು ಎಂದಿದ್ದಾರೆ.

  ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದರು ವರಲಕ್ಷ್ಮೀ. ದಕ್ಷಿಣ ಭಾರತೀಯ ಎಲ್ಲಾ ಭಾಷೆಯಲ್ಲೂ ವರಲಕ್ಷ್ಮಿ ಅಭಿನಯಿಸಿದ್ದಾರೆ. ತೆಲುಗಿನ ಖ್ಯಾತ ನಟ ಮತ್ತು ರಾಜಕಾರಣಿ ಶರತ್ ಕುಮಾರ್ ಪುತ್ರಿ ವರಲಕ್ಷ್ಮೀ. ಸ್ಟಾರ್ ನಟನ ಮಗಳಾದರು ನನಗೆ ಕಾಸ್ಟಿಂಗ್ ಕೌಚ್ ಅನುಭವವಾಗಿದೆ ಎಂದು ಹೇಳಿದ್ದಾರೆ. ಮುಂದೆ ಓದಿ..

  ಡ್ಯಾನ್ಸ್ ಪ್ರ್ಯಾಕ್ಟೀಸ್ ಅಂತ ಕರೆದು ಹಾಸಿಗೆ ಮೇಲೆ ಎಸೆದ: ಗಣೇಶ್ ಆಚಾರ್ಯ ವಿರುದ್ಧ ಸಿಡಿದ ನೃತ್ಯಗಾರ್ತಿ.!ಡ್ಯಾನ್ಸ್ ಪ್ರ್ಯಾಕ್ಟೀಸ್ ಅಂತ ಕರೆದು ಹಾಸಿಗೆ ಮೇಲೆ ಎಸೆದ: ಗಣೇಶ್ ಆಚಾರ್ಯ ವಿರುದ್ಧ ಸಿಡಿದ ನೃತ್ಯಗಾರ್ತಿ.!

  ನಟ-ರಾಜಕಾರಣಿಯ ಮಗಳು ಆದರು ಬಿಟ್ಟಿಲ್ಲ

  ನಟ-ರಾಜಕಾರಣಿಯ ಮಗಳು ಆದರು ಬಿಟ್ಟಿಲ್ಲ

  "ನಾನೊಬ್ಬ ಸ್ಟಾರ್ ನಟ ಮತ್ತು ರಾಜಕಾರಣಿಯ ಮಗಳು ಎಂದು ಗೊತ್ತಿದ್ದರು, ಕೆಲವು ನಿರ್ಮಾಪಕರು ಮತ್ತು ಚಿತ್ರರಂಗಕ್ಕೆ ಸಂಬಂಧಿಸಿದವರು ಬೇರೆಯದೆ ಉದ್ದೇಶಕ್ಕೆ ಅವಕಾಶ ನೀಡುವುದಾಗಿ ನನ್ನನ್ನು ಸಂಪರ್ಕಿಸುತ್ತಿದ್ದರು" ಎಂದು ಹೇಳಿದ್ದಾರೆ.

  ಕಥೆ ಕೇಳಲು ನಿರ್ದೇಶಕನ ಕಚೇರಿಗೆ ಹೋದ ನಟಿಗೆ ಆಗಿದ್ದು ಕೆಟ್ಟ ಅನುಭವಕಥೆ ಕೇಳಲು ನಿರ್ದೇಶಕನ ಕಚೇರಿಗೆ ಹೋದ ನಟಿಗೆ ಆಗಿದ್ದು ಕೆಟ್ಟ ಅನುಭವ

  ನಾನು ಇದಕ್ಕೆಲ್ಲ ರಾಜಿ ಆಗಲ್ಲ

  ನಾನು ಇದಕ್ಕೆಲ್ಲ ರಾಜಿ ಆಗಲ್ಲ

  "ನಾನು ನೋ ಎನ್ನುವುದನ್ನು ಕಲಿತಿದ್ದೀನಿ. ಈ ಸಂಬಂಧವಾಗಿ ನನ್ನ ಜೊತೆ ಮಾಡಿದವರ ಫೋನ್ ರೆಕಾರ್ಡಿಂಗ್ ಈಗಲೂ ಇದೆ. ನಾನು ಇದಕ್ಕೆಲ್ಲ ರಾಜಿ ಆಗಲ್ಲ" ಎಂದು ಹೇಳಿದ್ದಾರೆ.

  ಈ ಮಾತನಾಡಿದ್ದಕ್ಕೆ ಬ್ಯಾನ್ ಮಾಡುವಂತೆ ಹೇಳಿದ್ದರು

  ಈ ಮಾತನಾಡಿದ್ದಕ್ಕೆ ಬ್ಯಾನ್ ಮಾಡುವಂತೆ ಹೇಳಿದ್ದರು

  "ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಕ್ಕೆ ಅನೇಕರು ನನ್ನನ್ನು ಬ್ಯಾನ್ ಮಾಡುವಂತೆ ಹೇಳಿದ್ದರು. ಆದರಿವತ್ತು ನಾನು 25 ಸಿನಿಮಾಗಳನ್ನು ಪೂರೈಸಿದ್ದೀನಿ ನಾನು ನನ್ನ ಕಾಲುಗಳ ಮೇಲೆ ನಿಂತಿದ್ದೀನಿ. 25 ಉತ್ತಮ ನಿರ್ದೇಶಕ ಮತ್ತು ನಿರ್ಮಾಪಕರ ಜೊತೆ ಕೆಲಸ ಮಾಡಿದ್ದೀನಿ. ಇತ್ತೀಚಿಗೆ ನಾನು 29ನೇ ಸಿನಿಮಾಗೆ ಸಹಿ ಮಾಡಿದ್ದೀನಿ" ಎಂದು ಹೇಳಿದ್ದಾರೆ.

  ಆ ನಟಿಗೆ ''ಟಾಪ್ ಮೇಲೆ ಎತ್ತು'' ಎಂದು ಹೇಳಿದ್ದ ಆ ನಿರ್ಮಾಪಕ ಯಾರು?ಆ ನಟಿಗೆ ''ಟಾಪ್ ಮೇಲೆ ಎತ್ತು'' ಎಂದು ಹೇಳಿದ್ದ ಆ ನಿರ್ಮಾಪಕ ಯಾರು?

  ಮೀಟೂ ಬಗ್ಗೆ ಮಾತನಾಡಿದ ಮೊದಲ ನಟಿ

  ಮೀಟೂ ಬಗ್ಗೆ ಮಾತನಾಡಿದ ಮೊದಲ ನಟಿ

  ಅಂದ್ಹಾಗೆ ವರಲಕ್ಷ್ಮೀ ಮೀಟೂ ಬಗ್ಗೆ ಮಾತನಾಡಿದ ನಟಿಯರಲ್ಲಿ ಮೊದಲಿಗರು. ಹಾಲಿವುಡ್ ನಲ್ಲಿ ಮೀಟೂ ಚಳುವಳಿ ಪ್ರಾರಂಭಕ್ಕೂ ಮೊದಲೆ ವರಲಕ್ಷ್ಮೀ ಈ ಬಗ್ಗೆ ಧ್ವನಿ ಎತ್ತಿದ್ದರು. ವರ್ಷಗಳ ಹಿಂದೆಯೆ ವರಲಕ್ಷ್ಮೀ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಆದರೆ ದೊಡ್ಡ ಮಟ್ಟಕ್ಕೆ ಚಳುವಳಿ ಆಗಿರಲಿಲ್ಲ.

  ರವಿತೇಜಾ ಸಿನಿಮಾದಲ್ಲಿ ವರಲಕ್ಷ್ಮೀ

  ರವಿತೇಜಾ ಸಿನಿಮಾದಲ್ಲಿ ವರಲಕ್ಷ್ಮೀ

  ವರಲಕ್ಷ್ಮೀ ಸದ್ಯ ರವಿತೇಜಾ ಅಭಿನಯದ ಕ್ರ್ಯಾಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಶ್ರುತಿ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಮತ್ತೊಂದು ತಮಿಳು ಸಿನಿಮಾದಲ್ಲೂ ವರಲಕ್ಷ್ಮೀ ಬ್ಯುಸಿಯಾಗಿದ್ದಾರೆ.

  English summary
  Telugu Actress Varalakshmi sarathKumar speak about casting couch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X