For Quick Alerts
  ALLOW NOTIFICATIONS  
  For Daily Alerts

  "ಕನ್ನಡದಲ್ಲಿ ದೊಡ್ಡ ಹೀರೊ ದುನಿಯಾ ವಿಜಯ್, ನಮ್ಮ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ": ಬಾಲಕೃಷ್ಣ

  |

  ಟಾಲಿವುಡ್‌ನಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಒಂಗೋಲದಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಅದ್ಧೂರಿಯಾಗಿ ನೆರವೇರಿದೆ. ಚಿತ್ರದಲ್ಲಿ ಕನ್ನಡ ನಟ ದುನಿಯಾ ವಿಜಯ್ ವಿಲನ್ ಆಗಿ ನಟಿಸಿದ್ದಾರೆ. ವಿಜಿ ನಟನೆಯನ್ನು ಬಾಲಯ್ಯ ಮೆಚ್ಚಿಕೊಂಡಿದ್ದಾರೆ.

  ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಅರ್ಧ ಗಂಟೆ ಕಾಲ ಬಾಲಯ್ಯ ಮಾತನಾಡಿದ್ದಾರೆ. ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ದುನಿಯಾ ವಿಜಯ್‌ನ ವೇದಿಕೆಯಲ್ಲಿ ಕರೆದು ಮೆಚ್ಚಿಕೊಂಡರು. ಚಿತ್ರದಲ್ಲಿ ವಿಜಯ್ ಗಡ್ಡ ಮೀಸೆ ಬಿಟ್ಟು ಮುಸುಲಿ ಮಡುಗು ಪ್ರತಾಪ್ ರೆಡ್ಡಿ ಆಗಿ ಅಬ್ಬರಿಸಿದ್ದಾರೆ. ವೇದಿಕೆಯಲ್ಲಿ ಕ್ಲೀನ್‌ ಶೇವ್‌ನಲ್ಲಿ ವಿಜಿನ ನೋಡಿ ಬಾಲಯ್ಯ ಗುರುತೇ ಸಿಗಲಿಲ್ಲ. ಚಿತ್ರದಲ್ಲಿ ಹಂಗೆ ಕಾಣಿಸಿಕೊಂಡಿದ್ದರು. ಈಗ ಈ ರೀತಿ ಇದ್ದಾರೆ. ಅವರಿಗೆ ಚಿತ್ರದಲ್ಲಿ ಒಳ್ಳೆ ಪಾತ್ರ ಇದೆ ಎಂದರು.

  'ಲೆಜೆಂಡ್' ಚಿತ್ರದಲ್ಲಿ ಜಗಪತಿ ಬಾಬು, 'ಅಖಂಡ' ಶ್ರೀಕಾಂತ್ ಪಾತ್ರಗಳ ರೀತಿಯಲ್ಲೇ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ದುನಿಯಾ ವಿಜಯ್ ಪಾತ್ರ ಇದೆ. ಬಹಳ ಚೆನ್ನಾಗಿ ನಟಿಸಿದ್ದಾರೆ. ಅವಕಾಶ ಬಂದಾಗ ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ನಟನೆ ಅಂದರೆ ಇದೇ ಪಾತ್ರ, ಅದೇ ಪಾತ್ರ ಎನ್ನಬಾರದು. ಎಲ್ಲವನ್ನು ಒಪ್ಪಿಕೊಳ್ಳಬೇಕು. ವಿಜಯ್ ನಟನೆ ಹೇಗಿದೆ ಅನ್ನೋದನ್ನು ನೀವು ಥಿಯೇಟರ್‌ನಲ್ಲಿ ನೋಡ್ತೀರಾ. ಒಳ್ಳೆ ಹೆಸರು ತಂದು ಕೊಡುವ ಪಾತ್ರವನ್ನು ನನ್ನ ಸಹೋದರ ವಿಜಯ್ ಮಾಡಿದ್ದಾರೆ" ಎಂದು ಬಾಲಯ್ಯ ಹೇಳಿದ್ದಾರೆ.

  veera-simha-reddy-balakrishna-great-words-about-kannada-actor-duniya-vijay

  "ಕನ್ನಡದಲ್ಲಿ ಒಳ್ಳೆಯ ಹೀರೊ ದುನಿಯಾ ವಿಜಯ್. ಅಂಥಾದ್ರಲ್ಲಿ ಅವರು ಇಲ್ಲಿ ಬಂದು ವಿಲನ್ ಆಗಿ ನಟಿಸೋದು ತಮಾಷೆ ಮಾತಲ್ಲ. ಕನ್ನಡ - ತೆಲುಗು ಮೈತ್ರಿಗೆ ಗುರುತಾಗಿ ನಮ್ಮ ಚಿತ್ರದಲ್ಲಿ ವಿಜಯ್ ಬಂದು ನಟಿಸಿದ್ದಾರೆ" ಎಂದು ಬಾಲಕೃಷ್ಣ ವಿವರಿಸಿದ್ದಾರೆ. ಇನ್ನು ದುನಿಯಾ ವಿಜಯ್ "ಜೈ ಬಾಲಯ್ಯ ಎಂದು ವೇದಿಕೆಯಲ್ಲಿ ಮಾತು ಆರಂಭಿಸಿದರು. ಸಿಂಹದ ಎದುರು ನಟಿಸೋಕೆ ಧೈರ್ಯ ಬೇಕು. ನಾನು ದೇವರಲ್ಲಿ ಪ್ರಾರ್ಥಿಸಿ ನಟಿಸ್ತಿದ್ದೆ. ನಂತರ ಕನೆಕ್ಟ್ ಆದೆ. ಸಂಕ್ರಾಂತಿ ಸಿಂಹ ಶಾಂತವಾಗಿ, ಉಗ್ರ ರೂಪದಲ್ಲಿ ಬರ್ತಿದೆ. ಯಾರು ಹೇಗೆ ನೋಡಿದರೆ ಹಾಗೆ ಕಾಣಿಸುತ್ತದೆ ಎಂದು ನಟಸಿಂಹ ಬಾಲಕೃಷ್ಣ ಬಗ್ಗೆ ಮಾತನಾಡಿದ್ದಾರೆ.

  ಎಮೋಷನ್, ಆಕ್ಷನ್ ಎಲ್ಲವೂ ಚಿತ್ರದಲ್ಲಿದೆ. ಈಗಾಗಲೇ ಸಿನಿಮಾ ಹಿಟ್ ಆಗಿದೆ. ಥಿಯೇಟರ್‌ನಲ್ಲಿಅದನ್ನು ನೋಡಬೇಕು ಅಷ್ಟೆ. ನಿರ್ದೇಶಕರಿಗೆ, ನಿರ್ಮಾಪಕರಿಗೆ ಧನ್ಯವಾದ" ಎಂದು ವಿಜಯ್ ಮಾತನಾಡಿದ್ದಾರೆ. ಗೋಪಿಚಂದ್ ಮಲಿನೇನಿ ನಿರ್ದೇಶನದ 'ವೀರಸಿಂಹ ರೆಡ್ಡಿ' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಚಿತ್ರದಲ್ಲಿ ರಾಯಲಸೀಮೆಯ ಫ್ಯಾಕ್ಷನಿಸಂ ಕಥೆ ಹೇಳಲಾಗುತ್ತಿದೆ. ಜನವರಿ 12ಕ್ಕೆ ಸಿನಿಮಾ ತೆರೆಗೆ ಬರಲಿದೆ.

  English summary
  Balakrishna Great Words About Kannada Actor Duniya Vijay At Veera simha Reddy Pre Release Event. Duniya Vijay did Negative Role in Gopichand Malineni Directed movie. Know more.
  Saturday, January 7, 2023, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X