Don't Miss!
- News
ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ: ನಿಲುಗಡೆ, ಸಮಯದ ಮಾಹಿತಿ ಇಲ್ಲಿ ಪಡೆಯಿರಿ
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಜಯ್ ದೇವರಕೊಂಡ ಅರೆ ನಗ್ನ ಲುಕ್‌ಗೆ ವಸ್ತ್ರಾಲಂಕಾರ!
ವಿಜಯ್ ದೇವರಕೊಂಡ ಅಭಿನಯದ, ಲೈಗರ್ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದ ಆದರೆ ಬಟ್ಟೆ ಇಲ್ಲದೆ ಬಂದ ವಿಜಯ್ ದೇವರಕೊಂಡ ಲುಕ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯ್ ಪರಿಶ್ರಮ ಕಂಡು ಹಲವರು ಮೆಚ್ಚಿಕೊಂಡರೆ, ಇನ್ನು ಹಲವರು ವಿಜಯ್ ಲುಕ್ ಕಂಡು ಬೆರಗಾಗಿದ್ದಾರೆ.
ಲೈಗರ್ ಚಿತ್ರದ ಲುಕ್ ರಿಲೀಸ್ ಮಾಡುವ ಮಾಡುವ ಮೂಲಕ ಸಿನಿಮಾದ ಶೀಘ್ರದಲ್ಲಿಯೇ ಬರಲಿದೆ ಎನ್ನುವುದನ್ನು ತಿಳಿಸಿದ್ದಾರೆ. ಆದರೆ ಈ ಲುಕ್ ರಿಲೀಸ್ ಆದ ಕೆಲವೇ ಹೊತ್ತಲ್ಲಿ ಟ್ರೋಲ್ ಆಗಿದೆ.
ಚಿತ್ರೀಕರಣದ
ವೇಳೆ
ಕಾರು
ಪಲ್ಟಿ,
ವಿಜಯ್
ದೇವರಕೊಂಡ,
ಸಮಂತಾಗೆ
ಗಾಯ
ವಿಜಯ್ ಅವತಾರ ನೋಡಲಾಗದೆ. ನೆಟ್ಟಿಗರು ವಿಜಯ್ ಗೆ ಬಟ್ಟೆ ಹಾಕುತ್ತಿದ್ದಾರೆ. ಟ್ರೋಲ್ ಮಾಡುವುದರ ಜೊತೆಗೆ ಅದೇ ಪೋಸ್ಟರ್ ಮರು ಸೃಷ್ಟಿ ಮಾಡಿ ಹಂಚಲಾಗುತ್ತಿದೆ.

ಮರು ಸೃಷ್ಠಿ ಆಯ್ತು ಲೈಗರ್ ಪೋಸ್ಟರ್!
ಲೈಗರ್ ಸಿನಿಮಾ ಪೋಸ್ಟರ್ ನಲ್ಲಿ ವಿಜಯ್ ದೇವರಕೊಂಡ ಸಂಪೂರ್ಣ ವಿವಸ್ತ್ರವಾಗಿ, ಕೈಯಲ್ಲಿ ರೋಸ್ ಹಿಡಿದುಕೊಂಡು ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಇದೆ ಮೊದಲ ಬಾರಿಗೆ ಇಷ್ಟೊಂದು ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಲುಕ್ ಮರುಸೃಷ್ಠಿ ಮಾಡಲಾಗಿದೆ. ತಮಗೆ ಇಷ್ಟ ಬಂದ ಹುಡುಗೆಗಳನ್ನು ಪೋಸ್ಟರ್‌ಗೆ ಜೋಡಿಸಿ ಹರಿ ಬಿಡುತ್ತಿದ್ದಾರೆ.
ಕರಣ್ ಜೋಹರ್ ಪಾರ್ಟಿಯಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ ಯಾಕೆ?

ವಿಜಯ್ ಪೋಸ್ಟರ್ ಗೆ ಪ್ಯಾಂಟು, ಅಂಗಿ ಅಲಂಕಾರ!
ಲೈಗರ್ ಸಿನಿಮಾದ ಅಧಿಕೃತವಗಿ ಪೋಸ್ಟರ್ ಒಂದು ಮಾತ್ರವೆ ರಿಲೀಸ್ ಆಗಿದೆ. ಆದರೆ ಹಲವು ಬಗೆಯ ಲುಕ್‌ಗಳಲ್ಲಿ ಪೋಸ್ಟರ್ ಮರು ಸೃಷ್ಠಿ ಆಗಿದೆ. ಕೆಲವು ಪೋಸ್ಟರ್‌ಗಳಲ್ಲಿ ಪ್ಯಾಟ್ ತೊಡಿಸಿದರೆ ಮತ್ತೆ ಕೆಲವು ಪೋಸ್ಟರ್‌ಗಳಲ್ಲಿ ಪ್ಯಾಂಟು, ಶರ್ಟೂ ಎರಡನ್ನೂ ತೊಡಿಸಲಾಗಿದೆ. ಜೀನ್ಸ್ ಪ್ಯಾಂಟ್ ತೊಡಿಸಿದ ಪೋಸ್ಟರ್ ಒಂದಕ್ಕೆ ನಟ ವಿಜಯ್ ದೇವರಕೊಂಡ ಧನ್ಯವಾದ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ರೋಸ್ ಹಿಡಿದು ಬಂದ 'ಲೈಗರ್'!
'ಲೈಗರ್' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡುವುದರ ಜೊತೆಗೆ ಚಿತ್ರದ ಅಪ್ಟೇಟ್ ಕೊಟ್ಟಿದೆ ಸಿನಿಮಾ ತಂಡ. ಈ ಪೋಸ್ಟರ್‌ನಲ್ಲಿ ವಿಜಯ್ ದೇವರ ಕೊಂಡ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ರೋಸ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ಲುಕ್‌ನಲ್ಲಿ ಈ ಹಿಂದೆ ಹಿಂದಿಯ ಪಿಕೆ ಚಿತ್ರದಲ್ಲಿ ನಟ ಆಮಿರ್ ಖಾನ್ ಕಾಣಿಸಿಕೊಂಡಿದ್ದರು. ಈ ಲುಕ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಪಾತ್ರದ ರಗಡ್‌ನೆಸ್ ಬಗ್ಗೆ ಹೇಳುತ್ತದೆ.
|
ಎಲ್ಲವನ್ನೂ ಅರ್ಪಿಸುವೆ- ವಿಜಯ್ ದೇವರಕೊಂಡ!
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ ವಿಜಯ್ ದೇವರಕೊಂಡ, ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. "ನನ್ನ ಎಲ್ಲವನ್ನೂ ತೆಗೆದುಕೊಂಡ ಚಿತ್ರ. ಮಾನಸಿಕವಾಗಿ ಆಗಲಿ, ದೈಹಿಕವಾಗಿ ಆಗಲಿ, ಅಭಿನಯದಲ್ಲಾಗಲಿ ಇದು ನನ್ನ ಅತ್ಯಂತ ಸವಾಲಿನ ಪಾತ್ರ. ನಾನು ನಿಮಗೆ ಎಲ್ಲವನ್ನೂ ನೀಡುತ್ತೇನೆ, ಶೀಘ್ರದಲ್ಲೇ ಬರಲಿದೆ. ಲೈಗರ್." ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕರಣ್ ಜೋಹರ್ "ರೋಸ್, ರೋಸ್, ಇಂತಹ ಗಿಫ್ಟ್ ಸಿಗುವುದಿಲ್ಲ." ಎಂದು ಬರೆದುಕೊಂಡಿದ್ದಾರೆ.