For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡ ಕೊಟ್ಟ ಉಡುಗೆಯಲ್ಲಿ ಮಿಂಚಿದ ಅಲ್ಲು ಅರ್ಜುನ್

  |

  ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡು ಕೆಲವೇ ವರ್ಷಗಳಾಗಿದ್ದರೂ ವಿಜಯ್ ದೇವರಕೊಂಡ ಸಾಕಷ್ಟು ಗೆಳೆಯರನ್ನು ಸಂಪಾದಿಸಿದ್ದಾರೆ.

  ತೆಲುಗು ಸಿನಿಉದ್ಯಮದ ವಿಜಯ್ ದೇವರಕೊಂಡ ಗೆಳೆಯರ ಪೈಕಿ ಪ್ರಮುಖರು ನಟ ಅಲ್ಲು ಅರ್ಜುನ್. ದೇವರಕೊಂಡ ಅವರ ಹೊಸ ಸಿನಿಮಾಕ್ಕೆ ಅಲ್ಲುಅರ್ಜುನ್ ಆರ್ಥಿಕ ಸಹಾಯ ಮಾಡುತ್ತಿರುವುದು ಗುಟ್ಟೇನೂ ಅಲ್ಲ.

  ನಟರಾಗಿ ಸಾಕಷ್ಟು ಖ್ಯಾತಿ, ಹಣ ಸಂಪಾದಿಸುತ್ತಿರುವ ವಿಜಯ್ ದೇವರಕೊಂಡ, ಉದ್ಯಮಿಯೂ ಹೌದು. ಈಗಾಗಲೇ ಫ್ಯಾಷನ್ ಬ್ರ್ಯಾಂಡ್ ಹೊಂದಿರುವ ವಿಜಯ್ ಇತ್ತೀಚೆಗೆ, ಬ್ಯಾಟರಿ ಚಾಲಿತ ಬೈಕ್‌ಗಳ ಉದ್ದಿಮೆಯೊಂದರಲ್ಲಿ ಬಂಡವಾಳ ಹೂಡಿದ್ದಾರೆ.

  'ರೌಡಿ ವೇರ್' ಹೆಸರಿನ ಫ್ಯಾಷನ್ ಉಡುಪು ಸಂಸ್ಥೆಯ ಮಾಲೀಕರಾಗಿರುವ ವಿಜಯ್ ದೇವರಕೊಂಡ. ತಮ್ಮ ಫ್ಯಾಷನ್ ಬ್ರ್ಯಾಂಡ್‌ನ ಪ್ರಚಾರವನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಲೇ ಇರುತ್ತಾರೆ.

  ಇದೀಗ ತಮ್ಮ 'ರೈಡಿ ವೇರ್' ಬ್ರ್ಯಾಂಡ್‌ನ ಉಡುಪನ್ನು ನಟ ಅಲ್ಲು ಅರ್ಜುನ್‌ಗೆ ವಿಜಯ್ ದೇವರಕೊಂಡ ಕಳಿಸಿಕೊಟ್ಟಿದ್ದು, ಗೆಳೆಯ ಕಳಿಸಿದ ಉಡುಪು ಧರಿಸಿದ ಅಲ್ಲು ಅರ್ಜುನ್ ಸ್ಟೈಲಿಶ್ ಆಗಿ ಫೊಟೊಕ್ಕೆ ಫೋಸು ನೀಡಿದ್ದಾರೆ. ಸ್ಟೈಲಿಷ್ ಆದ ಉಡುಪು ಕಳಿಸಿದ್ದಕ್ಕೆ ಧನ್ಯವಾದಗಳನ್ನೂ ಹೇಳಿದ್ದಾರೆ ಅಲ್ಲು ಅರ್ಜುನ್. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯ್ ದೇವರಕೊಂಡ, 'ಥ್ಯಾಂಕ್ಸ್‌ ಅಣ್ಣೋ' ಎಂದಿದ್ದಾರೆ.

  ಚಿರಂಜೀವಿ ಕುಟುಂಬಕ್ಕೆ ವಿಜಯ್ ದೇವರಕೊಂಡ ಬಹಳ ಆಪ್ತರು. ಮಲಯಾಳಂ ನ ತೆಲುಗು ರೀಮೇಕ್‌ನಲ್ಲಿ ಚಿರಂಜೀವಿ ಜೊತೆಗೆ ವಿಜಯ್ ದೇವರಕೊಂಡ ಬಹಳ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  Salaar ಫಸ್ಟ್ ಲುಕ್ ನೋಡಿ ಥ್ರಿಲ್ ಆದ Puneeth Rajkumar | Filmibeat Kannada

  ಇನ್ನು ನಟ ಅಲ್ಲು ಅರ್ಜುನ್ ಸುಕುಮಾರ್ ನಿರ್ದೇಶನದ ಪುಷ್ಪಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.

  English summary
  Vijay Devarkonda sent his fashion brand's cool cloths to Allu Arjun. He thanked Vijay Devarkonda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X