For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಿಂದ ಹೊರಬಂದ ನಟ ವಿಜಯ್ ಸೇತುಪತಿ ಹೇಳಿದ್ದೇನು?

  By ಫಿಲ್ಮ್ ಡೆಸ್ಕ್
  |

  ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಲ್ಲು ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ರಾಜ್ ಕುಮಾರ್ ಅಪಹರಣ ಆದಾಗ ವಿಷ್ಣುದಾದಾ ಆಡಿದ್ದ ಮಾತುಗಳು ಇಂದಿಗೂ ಜೀವಂತ | Rajkumar | Filmibeat Kannada

  ಲಾರಿ ಡ್ರೈವರ್ ಆಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಅಲ್ಲು ಜೊತೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಸಹ ವಿಭಿನ್ನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈಗಾಗಲೆ ಪಾತ್ರಕ್ಕಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ನಟ ವಿಜಯ್ ಸೇತುಪತಿ ಸಿನಿಮಾದಿಂದ ಹೊರಬಂದಿರುವುದಾಗಿ ಹೇಳಿದ್ದಾರೆ. ಮುಂದೆ ಓದಿ..

  ನಟ ವಿಜಯ್ ಸೇತುಪತಿ 'ತುಘಲಕ್ ದರ್ಬಾರ್' ಹೇಗಿದೆ ನೋಡಿನಟ ವಿಜಯ್ ಸೇತುಪತಿ 'ತುಘಲಕ್ ದರ್ಬಾರ್' ಹೇಗಿದೆ ನೋಡಿ

  ಅಲ್ಲು ಅರ್ಜುನ್ ಸಿನಿಮಾದಲ್ಲಿ ಇರಲ್ಲ ವಿಜಯ್

  ಅಲ್ಲು ಅರ್ಜುನ್ ಸಿನಿಮಾದಲ್ಲಿ ಇರಲ್ಲ ವಿಜಯ್

  ಚಿತ್ರಕ್ಕೆ ಸಾಕಷ್ಟು ಕಲಾವಿದರ ಹೆಸರು ಕೇಳಿ ಬರುತ್ತಿದೆ. ಚಿತ್ರದ ವಿಲನ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ. ವಿಲನ್ ಪಾತ್ರಕ್ಕೆ ಸಾಕಷ್ಟು ಕಲಾವಿದರ ಹೆಸರು ಕೇಳಿ ಬರುತ್ತಿದೆ. ಅದರಲ್ಲಿ ನಟ ವಿಜಯ್ ಸೇತುಪತಿ ಹೆಸರು ಮುಂಚೂಣಿಯಲ್ಲಿತ್ತು. ವಿಜಯ್, ಅಲ್ಲು ಅರ್ಜುನ್ ವಿರುದ್ಧ ತೊಡೆತಟ್ಟಲಿದ್ದಾರೆ ಎಂದು ಹೇಳಲಾಗಿತ್ತು.

  ವಿಜಯ್ ಅಭಿನಯಿಸುತ್ತಿಲ್ಲ ಎನ್ನುವ ಸುದ್ದಿ ವೈರಲ್ ಆಗಿತ್ತು

  ವಿಜಯ್ ಅಭಿನಯಿಸುತ್ತಿಲ್ಲ ಎನ್ನುವ ಸುದ್ದಿ ವೈರಲ್ ಆಗಿತ್ತು

  ಕೆಲವು ದಿನಗಳಿಂದ ವಿಜಯ್ ಸೇತುಪತಿ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿತ್ತು. ಆದರೆ ಈ ಬಗ್ಗೆ ಸಿನಿಮಾತಂಡವಾಗಲಿ ಅಥವಾ ವಿಜಯ್ ಸೇತುಪತಿಯಾಗಲಿ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಆದರೀಗ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

  ನಾನು ತುಂಬಾ ಕ್ರೂರ ವಿಲನ್: 'ಮಾಸ್ಟರ್' ಸಿನಿಮಾದ ಪಾತ್ರದ ಬಗ್ಗೆ ವಿಜಯ್ ಸೇತುಪತಿ ಮಾತುನಾನು ತುಂಬಾ ಕ್ರೂರ ವಿಲನ್: 'ಮಾಸ್ಟರ್' ಸಿನಿಮಾದ ಪಾತ್ರದ ಬಗ್ಗೆ ವಿಜಯ್ ಸೇತುಪತಿ ಮಾತು

  ವಿಜಯ್ ಹೇಳಿದ್ದೇನು?

  ವಿಜಯ್ ಹೇಳಿದ್ದೇನು?

  ಇದೀಗ ವಿಜಯ್ ಸೇತುಪತಿ ಪುಷ್ಪ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದಿಂದ ಹೊರಬಂದಿರುವುದು ನಿಜ ಎಂದು ಬಹಿರಂಗಪಡಿಸಿದ್ದಾರೆ. ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಾತನಾಡಿದ ನಟ ವಿಜಯ್ ಪುಷ್ಪ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ಡೇಟ್ ಸಮಸ್ಯೆಯಿಂದ ಸಿನಿಮಾದಿಂದ ಹೊರಬಂದಿರುವುದಾಗಿ ವಿಜಯ್ ಸೇತುಪತಿ ಹೇಳಿದ್ದಾರೆ.

  ಕನ್ನಡಕ್ಕೆ ಬರಲಿದ್ದಾರೆಯೆ ವಿಜಯ್ ಸೇತುಪತಿ? ಸಿನಿಮಾ ಯಾವುದು? ಪಾತ್ರವೇನು?ಕನ್ನಡಕ್ಕೆ ಬರಲಿದ್ದಾರೆಯೆ ವಿಜಯ್ ಸೇತುಪತಿ? ಸಿನಿಮಾ ಯಾವುದು? ಪಾತ್ರವೇನು?

  ವಿಜಯ್ ಬಳಿ ಇದೆ ಸಾಲು ಸಾಲು ಸಿನಿಮಾಗಳು

  ವಿಜಯ್ ಬಳಿ ಇದೆ ಸಾಲು ಸಾಲು ಸಿನಿಮಾಗಳು

  ನಿರ್ದೇಶಕ ಸುಕುಮಾರ್ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿದ್ದಾರೆ. ಸಿನಿಮಾದಲ್ಲಿ ಭಾಗಿಯಾಗಲು ವಿಜಯ್ ಉತ್ಸುಕರಾಗಿದ್ದರು. ಆದರೀಗ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದ ಕಾರಣ ಸಿನಿಮಾದಿಂದ ಹೊರಬಂದಿರುವುದಾಗಿ ಹೇಳಿದ್ದಾರೆ. ವಿಜಯ್ ಬಳಿ ಡಜನ್ ಗೂ ಅಧಿಕ ಸಿನಿಮಾಗಳಿವೆ. ಸದ್ಯ ತಮಿಳಿನಲ್ಲಿ ಮಾಸ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಂದುಕೊಂಡಂತೆ ಆಗಿದ್ದಾರೆ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಯಾವಾಗ ತೆರೆಗೆ ಬರುತ್ತೆ ಅಭಿಮಾನಿಗಳು ಎಂದು ಕಾಯುತ್ತಿದ್ದಾರೆ.

  English summary
  Actor vijay sethupathi confirms opting out from Allu Arjun's Pushpa movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X