Don't Miss!
- Lifestyle
Horoscope Today 22 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ನೆಟ್ಸ್ನಲ್ಲಿ ಬೌಲಿಂಗ್ ಆರಂಭಿಸಿದ ಬುಮ್ರಾ : ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಆಯ್ಕೆ?
- News
ಮಕ್ಕಳಾಗಲು ಮಾನವನ ಮೂಳೆ ಪೌಡರ್ ತಿನ್ನುವಂತೆ ಒತ್ತಾಯ, ಪ್ರಕರಣ ದಾಖಲು
- Automobiles
ಮತ್ತಷ್ಟು ತಡವಾಗಲಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Technology
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತೆಲುಗಿನ ನಂಬರ್ 1 ನಟಿ ಯಾರು? ರಶ್ಮಿಕಾಗೆ ಎಷ್ಟನೇ ಸ್ಥಾನ?
ತೆಲುಗಿನಲ್ಲಿ ಅತ್ಯುತ್ತಮ ನಟಿಯರ ದಂಡೇ ಇದೆ. ಬಾಲಿವುಡ್‌ನ ನಟಿಯರು ಸಹ ತೆಲುಗಿನಲ್ಲಿ ನಟಿಸಲು ಹಪಹಪಿಸುವಂತ ಗುಣಮಟ್ಟದ ಸಿನಿಮಾಗಳು ತಯಾರಾಗುತ್ತಿವೆ ಮತ್ತು ಅಷ್ಟೇ ಒಳ್ಳೆ ಸಂಭಾವನೆ ಸಹ ತೆಲುಗು ಸಿನಿಮಾ ರಂಗದಲ್ಲಿ ನಟಿಯರಿಗೆ ದೊರಕುತ್ತಿದೆ.
ಹಲವಾರು ಪ್ರತಿಭಾವಂತ, ಸ್ಟೈಲಿಷ್, ಸುಂದರವಾದ ನಟಿಯರು ತೆಲುಗು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ನಂಬರ್ 1 ಪಟ್ಟಕ್ಕಾಗಿ ಈ ನಟಿಯರು ತಮ್ಮ-ತಮ್ಮಲ್ಲೇ ಪರೋಕ್ಷವಾಗಿ ಜಿದ್ದಿಗೆ ಬಿದ್ದಿದ್ದಾರೆ. ಹಾಗಿದ್ದರೆ ತೆಲುಗು ಸಿನಿಮಾ ರಂಗದ ನಂಬರ್ 1 ನಟಿ ಯಾರು?
ಓರ್ಮ್ಯಾಕ್ಸ್ ಮಿಡಿಯಾ ಎಂಬ ಸಂಸ್ಥೆಯು ಇತ್ತೀಚೆಗೆ ಸಮೀಕ್ಷೆಯೊಂದನ್ನು ಮಾಡಿದೆ. ಸಮೀಕ್ಷೆಯ ಪ್ರಕಾರ ನಟಿ ಸಮಂತಾ ತೆಲುಗು ಸಿನಿಮಾರಂಗದ ಪ್ರಸ್ತುತ ನಂಬರ್ 1 ನಟಿ. ಇದು ಏಪ್ರಿಲ್ ತಿಂಗಳಿಗಷ್ಟೆ ಸೀಮಿತವಾದ ಸಮೀಕ್ಷೆಯಾಗಿದೆ. ಪ್ರತಿ ತಿಂಗಳೂ ಸಹ ಓರ್ಮ್ಯಾಕ್ಸ್ ಸಂಸ್ಥೆಯು ಸಮೀಕ್ಷೆ ಮಾಡಿ ಫಲಿತಾಂಶ ಪ್ರಕಟಿಸುತ್ತದೆ.

ಮೊದಲ ಸ್ಥಾನದಲ್ಲಿ ನಟಿ ಸಮಂತಾ
ನಟಿ ಸಮಂತಾ ಮೊದಲ ಸ್ಥಾನದಲ್ಲಿದ್ದರೆ ಇತ್ತೀಚೆಗಷ್ಟೆ ಮದುವೆಯಾದ ನಟಿ ಕಾಜಲ್ ಅಗರ್ವಾಲ್ ಎರಡನೇ ಸ್ಥಾನದಲ್ಲಿದ್ದಾರೆ. ಸಿನಿಮಾಗಳಿಂದ ದೂರ ಉಳಿದಿದ್ದರೂ ಸಹ ನಟಿ ಅನುಷ್ಕಾ ಶೆಟ್ಟಿ ಮೂರನೇ ಸ್ಥಾನದಲ್ಲಿದ್ದಾರೆ. ತೆಲುಗಿನಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂನ ಕೀರ್ತಿ ಸುರೇಶ್‌ಗೆ ನಾಲ್ಕನೇ ಸ್ಥಾನ.

ರಶ್ಮಿಕಾ ಮಂದಣ್ಣಗೆ ಎಷ್ಟನೇ ಸ್ಥಾನ?
ತೆಲುಗು ಸಿನಿಮಾರಂಗದ ಅತ್ಯಂತ ದುಬಾರಿ ನಟಿ ಎನಿಸಿಕೊಂಡಿರುವ ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ ಐದನೇ ಸ್ಥಾನದಲ್ಲಿದ್ದಾರೆ. ಪ್ರಮುಖ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರೂ ಕನ್ನಡತಿ ರಶ್ಮಿಕಾ ಮಂದಣ್ಣ ಆರನೇ ಸ್ಥಾನದಲ್ಲಿದ್ದಾರೆ. ಇನ್ನು ತೆಲುಗು, ತಮಿಳು, ಹಿಂದಿಯಲ್ಲಿ ನಟಿಸುತ್ತಿರುವ ತಮನ್ನಾಗೆ ಏಳನೇ ಸ್ಥಾನ.

ಸಾಯಿ ಪಲ್ಲವಿಗೆ ಎಂಟನೇ ಸ್ಥಾನ
ತಮ್ಮ ಅದ್ಭುತ ನಟನಾ ಪ್ರತಿಭೆ, ನೃತ್ಯದಿಂದ ಗುರುತಾಗಿರುವ ನಟಿ ಸಾಯಿ ಪಲ್ಲವಿಗೆ ಎಂಟನೇ ಸ್ಥಾನ ನೀಡಲಾಗಿದೆ. ಏಳು ವರ್ಷಗಳಿಂದಲೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವ ರಾಶಿ ಖನ್ನಾಗೆ ಒಂಬತ್ತನೇ ಸ್ಥಾನ ನೀಡಲಾಗಿದೆ. ತೆಲುಗಿನ ಮತ್ತೊಬ್ಬ ಬ್ಯುಸಿ ನಟಿ ರಾಕುಲ್ ಪ್ರೀತ್ ಸಿಂಗ್ ಹತ್ತನೇ ಸ್ಥಾನಲ್ಲಿದ್ದಾರೆ.
Recommended Video

ಟೀಕೆಗಳು ಸಹ ವ್ಯಕ್ತವಾಗಿವೆ
ಓರ್ಮ್ಯಾಕ್ಸ್ ನೀಡಿರುವ ಈ ಪಟ್ಟಿಯ ಬಗ್ಗೆ ಹಲವರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಸಂಮತಾಗೆ ಏಕೆ ಮೊದಲ ಸ್ಥಾನ? ಸಿನಿಮಾದಿಂದ ದೂರವಿದ್ದರೂ ಅನುಷ್ಕಾಗೆ ಏಕೆ ಮೂರನೇ ಸ್ಥಾನ. ಶ್ರುತಿ ಹಾಸನ್ ಏಕೆ ಪಟ್ಟಿಯಲ್ಲಿಲ್ಲ? ಬೇರೆ ಭಾಷೆಗಳ ನಟಿಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದೀರಿ ಇನ್ನೂ ಹಲವು ಟೀಕೆಗಳು ಪಟ್ಟಿಯ ಬಗ್ಗೆ ವ್ಯಕ್ತವಾಗಿವೆ.