For Quick Alerts
  ALLOW NOTIFICATIONS  
  For Daily Alerts

  ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?

  |

  ಸಿನಿ ಇಂಡಸ್ಟ್ರಿಯಲ್ಲಿ ಒಂದೇ ಒಂದು ಹಿಟ್ ಸಿನಿಮಾ ಸಿಕ್ತು ಅಂದ್ರೆ ಆ ನಟಿಯ ಕರಿಯರ್ ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗುತ್ತೆ. ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಬೇಡಿಕೆ ಮತ್ತು ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಅನುಷ್ಕಾ ಶೆಟ್ಟಿ, ನಯನತಾರಾ, ಸಮಂತಾ, ಕಾಜಲ್ ಅಗರ್ ವಾಲ್, ರಶ್ಮಿಕಾ ಮಂದಣ್ಣ ಇದ್ದಾರೆ.

  ಈಗ ಟಾಲಿವುಡ್ ನಲ್ಲಿ ಟಾಪ್ ನಟಿ ಯಾರು ಎನ್ನುವುದು ಚರ್ಚೆಯಾಗ್ತಿದೆ. ಯಾವ ನಟಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಕುತೂಹಲ ಕಾಡ್ತಿದೆ. ಮುಂದೆ ಓದಿ...

  ಸಮಂತಾ ಸಂಭಾವನೆ ಎಷ್ಟು?

  ಸಮಂತಾ ಸಂಭಾವನೆ ಎಷ್ಟು?

  ಕಳೆದು ಎರಡು ವರ್ಷದಿಂದ ಸಮಂತಾ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮದುವೆ ಬಳಿಕ ರಂಗಸ್ಥಲಂ, ಓ ಬೇಬಿ, ಯು ಟರ್ನ್, ಸೂಪರ್ ಡಿಲೆಕ್ಸ್, ಜಾನು, ಅಭಿಮನ್ಯುಡು ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗೆ ಸಕ್ಸಸ್ ಹಾದಿಯಲ್ಲಿ ಸಾಗುತ್ತಿರುವ ಸಮಂತಾ 1.5 ಕೋಟಿಯಿಂದ 2 ಕೋಟಿವರೆಗೂ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಟಾಕ್ ಇದೆ.

  ಬುರ್ಕಾ ಹಾಕ್ಕೊಂಡಾದರೂ ಆ ಸ್ಥಳಕ್ಕೆ ಹೋಗ್ತಾರಂತೆ ರಶ್ಮಿಕಾ ಮಂದಣ್ಣಬುರ್ಕಾ ಹಾಕ್ಕೊಂಡಾದರೂ ಆ ಸ್ಥಳಕ್ಕೆ ಹೋಗ್ತಾರಂತೆ ರಶ್ಮಿಕಾ ಮಂದಣ್ಣ

  ನಯನತಾರಾ ಸಂಭಾವನೆ

  ನಯನತಾರಾ ಸಂಭಾವನೆ

  ತೆಲುಗು ಮತ್ತು ತಮಿಳು ಇಂಡಸ್ಟ್ರಿ ಎರಡರಲ್ಲೂ ಗೆದ್ದು ಬೀಗುತ್ತಿರುವ ನಟಿ ನಯನತಾರಾ. ಚಿರಂಜೀವಿ ಜೊತೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ಮಾಡಿದ್ದರು. ತಮಿಳಿನಲ್ಲಿ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇಂಡಸ್ಟ್ರಿ ಟಾಕ್ ಪ್ರಕಾರ ನಯನತಾರಾ ಒಂದು ಚಿತ್ರಕ್ಕೆ 2 ಕೋಟಿ ಚಾರ್ಜ್ ಮಾಡ್ತಾರಂತೆ.

  'ನಯನತಾರಾ' ಹೆಸರಿಟ್ಟಿದ್ದು ಯಾರು....ಇಬ್ಬರಲ್ಲಿ ಯಾರಿಗೆ ಈ ಕ್ರೆಡಿಟ್?'ನಯನತಾರಾ' ಹೆಸರಿಟ್ಟಿದ್ದು ಯಾರು....ಇಬ್ಬರಲ್ಲಿ ಯಾರಿಗೆ ಈ ಕ್ರೆಡಿಟ್?

  ರಶ್ಮಿಕಾ ಮಂದಣ್ಣ ಸಂಭಾವನೆ

  ರಶ್ಮಿಕಾ ಮಂದಣ್ಣ ಸಂಭಾವನೆ

  ಚಲೋ ಸಿನಿಮಾ ಮೂಲಕ ಟಾಲಿವುಡ್ ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ ನಂತರ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್, ಸರಿಲೇರು ನೀಕೆವ್ವರು, ದೇವದಾಸ್, ಭೀಷ್ಮ ಅಂತಹ ಸಿನಿಮಾದಲ್ಲಿ ನಟಿಸಿದ್ದಾರೆ. ಜೂನಿಯರ್ ಎನ್ ಟಿ ಆರ್, ರಾಮ್ ಚರಣ್ ತೇಜ, ಅಲ್ಲು ಅರ್ಜುನ್ ಚಿತ್ರಗಳಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಒಂದು ಚಿತ್ರಕ್ಕೆ 1 ಕೋಟಿಯಿಂದ 1.5 ಕೋಟಿವರೆಗೂ ಪಡೆಯುತ್ತಾರೆ ಎನ್ನಲಾಗಿದೆ.

  'ಐ ಲವ್ ಯು ಸ್ಯಾಮ್' ಎಂದ ಅಭಿಮಾನಿಗೆ ಸಮಂತಾ ನೀಡಿದ ಪ್ರತಿಕ್ರಿಯೆ ಏನು.?'ಐ ಲವ್ ಯು ಸ್ಯಾಮ್' ಎಂದ ಅಭಿಮಾನಿಗೆ ಸಮಂತಾ ನೀಡಿದ ಪ್ರತಿಕ್ರಿಯೆ ಏನು.?

  ಕಾಜಲ್ ಸಂಭಾವನೆ ಎಷ್ಟಿದೆ?

  ಕಾಜಲ್ ಸಂಭಾವನೆ ಎಷ್ಟಿದೆ?

  ಕಾಜಲ್ ಅಗರ್ ವಾಲ್ ಸಿನಿಮಾಗಳು ಈಗ ಕಮ್ಮಿ ಆಗಿದೆ. ಹತ್ತರಿಂದ ಹದಿನೈದು ದಿನ ಕಾಲ್ ಶೀಟ್ ನೀಡುವ ಚಿತ್ರಕ್ಕೆ 1 ಕೋಟಿ ಪಡೆದುಕೊಳ್ಳುತ್ತಾರಂತೆ. ಇನ್ನು ಮೆಹ್ರಿನ್ ಅಂತಹ ನಾಯಕಿಗಿಂತಲೂ ಕಾಜಲ್ ಸಂಭಾವನೆ ಕಡಿಮೆ ಇದೆ ಎಂಬ ಮಾತಿದೆ.

  ಅನುಷ್ಕಾ ಶೆಟ್ಟಿ ಟಾಪ್ ಸಂಭಾವನೆ

  ಅನುಷ್ಕಾ ಶೆಟ್ಟಿ ಟಾಪ್ ಸಂಭಾವನೆ

  ಬಾಹುಬಲಿ ಸಿನಿಮಾ ಬಳಿಕ ಯಶಸ್ಸು ಸಾಧಿಸಿದ ನಟಿ ಅನುಷ್ಕಾ ಶೆಟ್ಟಿ ಬೇಡಿಕೆ ಮತ್ತು ಸಂಭಾವನೆ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಈಗಲು ಅನುಷ್ಕಾ ಶೆಟ್ಟಿ ಟಾಪ್ ನಟಿ ಹಾಗು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರಂತೆ. ನಿಶ್ಯಬ್ದಂ ಸಿನಿಮಾಗಾಗಿ 2.5 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ.

  ಓಹೋ.. 'ನಿಶಬ್ಧಂ' ಚಿತ್ರಕ್ಕಾಗಿ ಇಷ್ಟೊಂದು ಸಂಭಾವನೆ ಪಡೆದ್ರಾ ನಟಿ ಅನುಷ್ಕಾ ಶೆಟ್ಟಿ.?ಓಹೋ.. 'ನಿಶಬ್ಧಂ' ಚಿತ್ರಕ್ಕಾಗಿ ಇಷ್ಟೊಂದು ಸಂಭಾವನೆ ಪಡೆದ್ರಾ ನಟಿ ಅನುಷ್ಕಾ ಶೆಟ್ಟಿ.?

  English summary
  Rashmika mandanna, Anushka shetty, Nayanthara, Samantha akkineni.....who is the top actress in telugu?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X