Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೈದರಾಬಾದ್‌ನಲ್ಲಿ ಸೆಲೆಬ್ರಿಟಿ ಫ್ಯಾಷನ್ ವಿನ್ಯಾಸಕಿ ಸಾವಿಗೆ ಏನು ಕಾರಣ?
ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಪ್ರತಿಷ್ಠಿತ ಬಂಜಾರಾ ಹಿಲ್ಸ್‌ನಲ್ಲಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಶವವಾಗಿ ಪತ್ತೆಯಾಗಿದ್ದಾರೆ.ಸೆಲೆಬ್ರಿಟಿ ಫ್ಯಾಷನ್ ವಿನ್ಯಾಸಕಿ ಸಾವಿಗೆ ಏನು ಕಾರಣ? ಎಂಬ ಚರ್ಚೆ ಶುರುವಾಗಿದೆ. ಪ್ರತ್ಯೂಷಾ ನಿಧನಕ್ಕೆ ಟಾಲಿವುಡ್ ಸೆಲ್ರೆಬಿಟಿಗಳು ಆಘಾತ ವ್ಯಕ್ತಪಡಿಸಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ ಸೊಸೆ ರಾಮ್ ಚರಣ್ ಪತ್ನಿ ಉಪಾಸನಾ ಅವರ ಆಪ್ತ ಬಳಗದಲ್ಲಿ ಪ್ರತ್ಯೂಷಾ ಗುರುತಿಸಿಕೊಂಡಿದ್ದರು. ಪ್ರತ್ಯೂಷಾ ಸಾವಿನ ಬಗ್ಗೆ ಉಪಾಸನಾ ಪ್ರತಿಕ್ರಿಯಿಸಿ, ಆಕೆ ನನ್ನ ಉತ್ತಮ ಗೆಳತಿಯಾಗಿದ್ದಳು, ಆಕೆ ಜೊತೆಗಿದ್ದ ಸ್ನೇಹಿತರು, ಕುಟುಂಬ ವರ್ಗ ಎಲ್ಲರೂ ಆಕೆಗೆ ಬೆಂಬಲವಾಗಿದ್ದರು, ಆಕೆಗೆ ಅಂಥ ಒತ್ತಡ ಏನಿತ್ತು ತಿಳಿಯುತ್ತಿಲ್ಲ, ನಿಜಕ್ಕೂ ಈ ಸುದ್ದಿ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಇದು ಆಘಾತಕಾರಿ ಎಂದು ಹೇಳಿದ್ದಾರೆ.
ಪ್ರತ್ಯೂಷಾ ಗರಿಮೆಲ್ಲಾ ತಮ್ಮ ಮನೆ ಬಾತ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಕಾಣುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 174 (ಆತ್ಮಹತ್ಯೆಯ ಕುರಿತು ವಿಚಾರಣೆ ಮತ್ತು ವರದಿ ಮಾಡಲು ಪೊಲೀಸರು, ಇತ್ಯಾದಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ.

ವಿಷಾನಿಲ ಸೇವನೆ?
ಶವವಿದ್ದ ರೂಮ್ ಬಳಿ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಪತ್ತೆಯಾಗಿದೆ. ವಿಷಾನಿಲ ಸೇವನೆಯಿಂದ ಮೃತಪಟ್ಟಿರುವ ಶಂಕೆ ಕೂಡಾ ಪತ್ತೆಯಾಗಿದ್ದು, ಬಂಜಾರಾ ಹಿಲ್ಸ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರತ್ಯೂಷಾ ಮನೆಯಲ್ಲಿ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಪತ್ತೆಯಾಗಿದ್ದು ಏಕೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆಕೆ ಇದ್ದ ಅಪಾರ್ಟ್ಮೆಂಟ್ ಭದ್ರತಾ ಸಿಬ್ಬಂದಿ, ನೆರ ಮನೆಯವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಪ್ರತ್ಯುಷಾ ಗರಿಮೆಲ್ಲ ಬ್ರ್ಯಾಂಡ್
ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದ ಪ್ರತ್ಯುಷಾ ಗರಿಮೆಲ್ಲ, ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ವಾಸವಿದ್ದ ಪ್ರತ್ಯೂಷಾ, ಡಿಸೈನರ್ ಸ್ಟೋರ್ ಕೂಡಾ ಹೊಂದಿದ್ದರು. ಪ್ರತ್ಯುಷಾ ಗರಿಮೆಲ್ಲಾ ಎಂಬ ಬ್ರ್ಯಾಂಡ್ ನೇಮ್ ಜನಪ್ರಿಯವಾಗಿತ್ತು. ಅನೇಕ ಸೆಲೆಬ್ರಿಟಿ ನಟ, ನಟಿಯರು ಈ ಫ್ಯಾಷನ್ ಮಳಿಗೆಯ ಗ್ರಾಹಕರಾಗಿದ್ದರು ಎಂದು ತಿಳಿದು ಬಂದಿದೆ.
ಪ್ರತ್ಯೂಷಾ ತಂದೆ ಎಲ್ಇಡಿ ಉತ್ಪಾದನಾ ಕಂಪನಿಯನ್ನು ಹೊಂದಿದ್ದಾರೆ. ಯುನೈಟೆಡ್ ಕಿಂಗ್‌ಡಂನಲ್ಲಿ ಓದಿದ ನಂತರ ಪ್ರತ್ಯೂಷಾ ತನ್ನ ತಂದೆಯ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡುತ್ತಿದ್ದರು. ಆದರೆ, ನಂತರ ಫ್ಯಾಷನ್ ಜಗತ್ತಿಗೆ ಕಾಲಿಟ್ಟು ತಮ್ಮದೇ ಆದ ಹೆಸರು, ಗಳಿಕೆ ಕಂಡುಕೊಂಡಿದ್ದರು.

ಆತ್ಮಹತ್ಯೆ ಪತ್ರದಲ್ಲಿ ಏನಿದೆ?
36 ವರ್ಷ ವಯಸ್ಸಿನ ಪ್ರತ್ಯೂಷಾ ಮನೆಯಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ಅದರಲ್ಲಿ, ಆಕೆ ತನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ ಮತ್ತು ಒಂಟಿತನ ಮತ್ತು ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ, ವಿಷಾನಿಲ ಸೇವನೆ ಮೂಲಕ ಆಕೆ ಅತ್ಮಹತ್ಯೆ ಮಾರ್ಗ ಹಿಡಿದಿದ್ದಾರೆ ಎಂಬುದು ಬಹುತೇಕ ದೃಢಪಡುತ್ತಿದೆ. ಆದರೆ, ವಿಸೇರಾದಲ್ಲಿ ವಿಷದ ಅಂಶ ಇರುವುದು ಪತ್ತೆಯಾಗಬೇಕು, ಅಟಾಪ್ಸಿ ವರದಿ ಬರಬೇಕು, ಎರಡರನ್ನು ಪರಿಶೀಲಿಸಿದ ಬಳಿಕ, ಈ ಸಾವಿನ ಬಗ್ಗೆ ಖಚಿತವಾಗಿ ಹೇಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಕೃತಿ ಶೆಟ್ಟಿ ಸಿನಿಮಾಗಳಲ್ಲಿ ಪ್ರತ್ಯೂಷಾ
ನಾಯಕಿ ಕೃತಿ ಶೆಟ್ಟಿ ಸಿನಿಮಾಗಳಿಗೆ ಪ್ರತ್ಯೂಷಾ ಕೂಡ ಕೆಲಸ ಮಾಡಿದ್ದಾರೆ. ಇನ್ನು ಹಲವು ಜಾಹೀರಾತು ಕಂಪನಿಗಳ ಜೊತೆ ಕೂಡಾ ಒಡನಾಟವಿತ್ತು. ಸಿನಿಮಾಗಳಲ್ಲಿಯೂ ಇತ್ತೀಚಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತಿತ್ತು. ಹೀಗಾಗಿ, ಅವಕಾಶ ಸಿಗದೆ ಖಿನ್ನತೆಗೆ ಒಳಗಾಗಿದ್ದರು ಎನ್ನಲು ಬರುವುದಿಲ್ಲ, ಹೀಗೆ ಹಠಾತ್ತಾಗಿ ಪ್ರಾಣ ಕಳೆದುಕೊಳ್ಳಬಹುದು ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ, ಮೊನ್ನೆ ತನಕ ಸಂತೋಷವಾಗಿ ಪಾರ್ಟಿ ಮಾಡಿಕೊಂಡಿದ್ದರು ಎಂದು ಫ್ಯಾಷನ್ ಜಗತ್ತಿನ ಇತರೆ ವಿನ್ಯಾಸಕಿಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
Note: The all-India helpline for women in distress is 1091. ರಾಜ್ಯವಾರು ಸಹಾಯವಾಣಿ ಸಂಖ್ಯೆಗಳ ವಿವರ ಇಲ್ಲಿದೆ (https://indianhelpline.com/WOMEN-HELPLINE/)