Just In
Don't Miss!
- Education
KSMHA Recruitment 2021: 15 ಅಧ್ಯಕ್ಷರು ಮತ್ತು ಸದಸ್ಯರು ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕರ್ನೂಲು ವಿಮಾನ ನಿಲ್ದಾಣಕ್ಕೆ ಗ್ರೀನ್ ಸಿಗ್ನಲ್, ಇನ್ನೆರಡು ತಿಂಗಳಲ್ಲಿ ಕಾರ್ಯಾರಂಭ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Automobiles
25 ಪೈಸೆ ಹೆಚ್ಚಳದೊಂದಿಗೆ ಸಾರ್ವಕಾಲಿಕ ಏರಿಕೆ ಕಂಡ ಪೆಟ್ರೋಲ್ ಬೆಲೆ
- Finance
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
- Sports
ಐಪಿಎಲ್ ಆಟಗಾರರ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಸೇರ್ಪಡೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲ್ಲರೂ ಹಾಜರಿದ್ದ ಪಾರ್ಟಿಗೆ ಎನ್‌ಟಿಆರ್ ಕುಟುಂಬದಿಂದ ಯಾರೂ ಬರಲಿಲ್ಲ ಏಕೆ?
ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಹುಟ್ಟುಹಬ್ಬದ ಪಾರ್ಟಿ ಭಾರಿ ಸದ್ದು ಮಾಡುತ್ತಿದೆ. ಭಾರಿ ಜೋರಾಗಿ ನಡೆದ ಈ ಪಾರ್ಟಿಯಲ್ಲಿ ತೆಲುಗಿನ ದೊಡ್ಡ-ದೊಡ್ಡ ಸ್ಟಾರ್ ನಟರೆಲ್ಲಾ ಭಾಗವಹಿಸಿದ್ದರು.
ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಸಹ ಈ ಪಾರ್ಟಿಯಲ್ಲಿ ಭಾಗವಹಿಸಿದ್ದು, ಪಾರ್ಟಿಯ ಚಿತ್ರಗಳು ಸಖತ್ ವೈರಲ್ ಆಗಿವೆ.
ಮಗಳ ವಯಸ್ಸಿನ ಮಹಿಳೆಯ ಜತೆ ನಿರ್ಮಾಪಕನ ಎರಡನೆಯ ಮದುವೆ: ಕಾರಣ ಇದು...
ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್, ಪ್ರಭಾಸ್, ವಿಜಯ್ ದೇವರಕೊಂಡ, ರಾಮ್ ಚರಣ್ ತೇಜಾ, ಸಮಂತಾ, ನಾಗಚೈತನ್ಯ, ಮಹೇಶ್ ಬಾಬು, ನಿತಿನ್, ಪೂಜಾ ಹೆಗ್ಡೆ, ವರುಣ್ ತೇಜ್ ಇನ್ನೂ ಹಲವಾರು ಮಂದಿ ಸ್ಟಾರ್‌ಗಳು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆದರೆ ಎನ್‌ಟಿಆರ್ ಕುಟುಂಬದಿಂದ ಯಾರೊಬ್ಬರೂ ಸಹ ಪಾರ್ಟಿಗೆ ಬಂದಿರಲಿಲ್ಲ. ಇದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಜೂ.ಎನ್‌ಟಿಆರ್-ಕಲ್ಯಾಣ್ ರಾಮ್ ಅನ್ನು ಆಹ್ವಾನಿಸಲಾಗಿತ್ತು
ತೆಲುಗು ವಾಹಿನಿಗಳು ಸುದ್ದಿ ಮಾಡಿರುವಂತೆ, ನಟ ಜೂ.ಎನ್‌ಟಿಆರ್ ಹಾಗೂ ಅವರ ಸಹೋದರ ಕಲ್ಯಾಣ್ ರಾಮ್ ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದರಂತೆ ದಿಲ್ ರಾಜು. ಆದರೆ ಹಿರಿಯ ನಟ ಬಾಲಕೃಷ್ಣಗೆ ಆಹ್ವಾನ ನೀಡಿರಲಿಲ್ಲ ಎನ್ನಲಾಗುತ್ತಿದೆ.

ಬಾಲಕೃಷ್ಣಗೆ ಆಹ್ವಾನ ಇರಲಿಲ್ಲ!
ಬಾಲಕೃಷ್ಣಗೆ ಆಹ್ವಾನ ನೀಡದೇ ಇರುವ ಕಾರಣ, ಚಿಕ್ಕಪ್ಪನೂ ಆಗಿರುವ ಬಾಲಕೃಷ್ಣಗೆ ಗೌರವ ಸೂಚಕವಾಗಿ ಜೂ.ಎನ್‌ಟಿಆರ್ ಹಾಗೂ ಕಲ್ಯಾಣ್ ರಾಮ್ ಅವರುಗಳು ಪಾರ್ಟಿಗೆ ಹೋಗಲಿಲ್ಲ ಎನ್ನಲಾಗುತ್ತಿದೆ. ಆದರೆ ದಿಲ್ ರಾಜು ಏಕೆ ಬಾಲಕೃಷ್ಣ ಅವರನ್ನು ಪಾರ್ಟಿಗೆ ಕರೆಯಲಿಲ್ಲ ಎಂಬುದು ಕುತೂಹಲ.
ತೆಲುಗು ನಿರ್ಮಾಪಕನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸೌತ್ ಸ್ಟಾರ್ಸ್; ಯಶ್, ಪ್ರಾಶಾಂತ್ ನೀಲ್ ಭಾಗಿ

ಕಲ್ಯಾಣ್ ರಾಮ್ ಬರುವ ನಿರೀಕ್ಷೆ ಇತ್ತು
ದಿಲ್ ರಾಜು ನಿರ್ಮಿಸುತ್ತಿರುವ ಮುಂದಿನ ಸಿನಿಮಾದಲ್ಲಿ ಕಲ್ಯಾಣ್ ರಾಮ್ ನಟಿಸುತ್ತಿದ್ದಾರೆ. ಹಾಗಾಗಿ ಕಲ್ಯಾಣ್ ರಾಮ್ ಆದರೂ ಬರುತ್ತಾರೆ ಎನ್ನಲಾಗಿತ್ತು. ಆದರೆ ಅವರೂ ಸಹ ಬರಲಿಲ್ಲ. ಜೂ.ಎನ್‌ಟಿಆರ್ ಹಾಗೂ ಕಲ್ಯಾಣ್ ರಾಮ್ ಇಬ್ಬರೂ ಹೈದರಾಬಾದ್ ನಲ್ಲಿಯೇ ಇದ್ದರಂತೆ.

ಮದುವೆಯಾಗಿ ಸುದ್ದಿಯಾಗಿದ್ದ ದಿಲ್ ರಾಜು
ದಿಲ್ ರಾಜು 50 ನೇ ವರ್ಷದ ಹುಟ್ಟುಹಬ್ಬದ ಪಾರ್ಟಿ ನಿನ್ನೆ ನಡೆದಿದ್ದು, ಪಾರ್ಟಿಯನ್ನು ದಿಲ್ ರಾಜು ಪುತ್ರಿ ಆಯೋಜಿಸಿದ್ದರಂತೆ. ಇದೇ ವರ್ಷಾದ ಮೇ ತಿಂಗಳಲ್ಲಿ ದಿಲ್ ರಾಜು ಮರು ಮದುವೆಯಾದರು, ಅಪ್ಪನಿಗೆ ಮದುವೆ ಮಾಡಿಸಿದ್ದು ಸಹ ಮಗಳೇ ಅಂತೆ.