For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್; ಚಿತ್ರೀಕರಣ ವೇಳೆ ಆಯತಪ್ಪಿ ಬಿದ್ದ ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್

  |

  ಮಲಯಾಳಂನ ಒರು ಅಡಾರ್ ಲವ್ ಸಿನಿಮಾದ ಕಣ್ಣು ಮಿಟುಕಿಸುವ ದೃಶ್ಯದ ಮೂಲಕ ದೇಶದ ಗಮನ ಸೆಳೆದಿದ್ದ ನಟಿ ಪ್ರಿಯಾ ಪ್ರಕಾಶ್. ಮಲಯಾಳಂನ ಈ ಸುಂದರಿ ಈಗ ಬೇರೆ ಬೇರೆ ಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ.

  ಹಿಂದಿ, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ಪ್ರಿಯಾ ನಟಿಸುತ್ತಿದ್ದಾರೆ. ಸದ್ಯ ಪ್ರಿಯಾ ತೆಲುಗಿನ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ನಟ ನಿತಿನ್ ಗೆ ನಾಯಕಿಯಾಗಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಸಹ ಭರ್ಜರಿಯಾಗಿ ನಡೆಯುತ್ತಿದೆ.

  ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಿದ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್: ಕಾರಣ?

  ಚಿತ್ರದ ಹಾಡಿನ ಚಿತ್ರೀಕರಣ ವೇಳೆ ಪ್ರಿಯಾ ಪ್ರಕಾಶ್ ಆಯತಪ್ಪಿ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓಡಿಬಂದು ನಿತಿನ್ ಬೆನ್ನಮೇಲೆ ಹಾರಿ ಕುಳಿತುಕೊಳ್ಳುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಈ ಸಮಯದಲ್ಲಿ ಪ್ರಿಯಾ ನಿತಿನ್ ಬೆನ್ನಮೇಲೆ ಹಾರುವಾಗ ಆಯತಪ್ಪಿ ಬಿದ್ದಿದ್ದಾರೆ. ತಕ್ಷಣ ನಿತಿನ್ ಮತ್ತು ಚಿತ್ರತಂಡ ಬಂದು ಪ್ರಿಯಾ ಅವರನ್ನು ಮೇಲಿತ್ತಿದ್ದಾರೆ.

  ಬಳಿಕ ಏನಾದರೂ ಏಟಾಗಿದೆಯಾ ಎಂದು ವಿಚಾರಿಸಿದ್ದಾರೆ. ಪ್ರಿಯಾ ಇಲ್ಲ ಎನ್ನುತ್ತಾ ಮತ್ತೆ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ. ಈ ವಿಡಿಯೋವನ್ನು ಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ನೋಡಿ ಅನೇಕ ಸೆಲೆಬ್ರಿಟಿಗಳು ಸಹ ಕಾಮೆಂಟ್ ಆರೋಗ್ಯವಾಗಿದ್ದೀರಾ ಎಂದು ಕೇಳುತ್ತಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ ಸುರಕ್ಷಿತವಾಗಿ ಚಿತ್ರೀಕರಣ ಮಾಡುವಂತೆ ಸಲಹೆ ನೀಡುತ್ತಿದ್ದಾರೆ.

  ಹೀರೋ ಸಂಪ್ರದಾಯವನ್ನು ಹೊಡೆದುಹಾಕಿದ ದರ್ಶನ್ | Roberrt Audio Launch in Hubli | Darshan

  ಚಿತ್ರದಲ್ಲಿ ನಿತಿನ್ ಗೆ ನಾಯಕಿಯರಾಗಿ ಪ್ರಿಯಾ ಪ್ರಕಾಶ್ ಮತ್ತು ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಟೀಸರ್ ನಲ್ಲಿ ಪ್ರಿಯಾ ಪ್ರಕಾಶ್ ಕಾಣಿಸಿಕೊಂಡಿರಲಿಲ್ಲ. ಇದೀಗ ಪ್ರಿಯಾ ಪ್ರಕಾಶ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಪ್ರಿಯಾ ಪ್ರಕಾಶ್ ಕನ್ನಡದ ವಿಷ್ಣು ಪ್ರಿಯಾ ಸಿನಿಮಾದಲ್ಲೂ ನಟಿಸಿದ್ದಾರೆ.

  English summary
  Wink Actress Priya Prakash Varrier fall while shooting with Telugu Actor Nithin.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X